ʼಗೋವಾದಲ್ಲಿ ಯುವರಾಜ್ ಸಿಂಗ್ ಐಷಾರಾಮಿ ಮನೆ ಬಾಡಿಗೆಗೆ ಇದೆʼ

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಘೋಷಿಸಿದ್ದಾರೆ. ಗೋವಾದಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಯುವಿ ಬಾಡಿಗೆ ನೀಡುವುದಾಗಿ ತಿಳಿದ್ದಾರೆ. 

Written by - Krishna N K | Last Updated : Sep 21, 2022, 04:57 PM IST
  • ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಐಷಾರಾಮಿ ಮನೆಯನ್ನು ಬಾಡಿಗೆ ನೀಡುವುದಾಗಿ ತಿಳಿದ್ದಾರೆ.
  • ಈ ಕುರಿತು ತಮ್ಮ ಟ್ಟಿಟರ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
  • Airbnb ನಲ್ಲಿ ನನ್ನ ಮನೆಯನ್ನು ಬಾಡಿಗೆ ಪಡೆಯಬಹುದು, ಆರು ಜನರು ಮಾತ್ರ ವಾಸ್ತವ್ಯ ಹೂಡಬಹುದು ಎಂದಿದ್ದಾರೆ.
ʼಗೋವಾದಲ್ಲಿ ಯುವರಾಜ್ ಸಿಂಗ್ ಐಷಾರಾಮಿ ಮನೆ ಬಾಡಿಗೆಗೆ ಇದೆʼ title=

ಬೆಂಗಳೂರು :  ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಘೋಷಿಸಿದ್ದಾರೆ. ಗೋವಾದಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಯುವಿ ಬಾಡಿಗೆ ನೀಡುವುದಾಗಿ ತಿಳಿದ್ದಾರೆ.  

ಅದ್ಭುತ ಈಜುಕೊಳ ಮತ್ತು ಸುಂದರವಾದ ನೋಟದೊಂದಿಗೆ ದೊಡ್ಡ ಟೆರೇಸ್‌ನಂತಹ ಅನೇಕ ಸೌಲಭ್ಯಗಳನ್ನು ಈ ಮನೆ ಹೊಂದಿದೆ. ಈ ಕುರಿತು ಯುವರಾಜ್‌ ಸಿಂಗ್‌ ತಮ್ಮ ಟ್ಟಿಟರ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮನೆಯ ಫೋಟೋಸ್‌ ಹಾಗೂ ಮಾಹಿತಿಯನ್ನು ಪೋಸ್ಟ್ ಮಾಡಿ ಮನೆ ಬಾಡಿಗೆಗೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

Airbnb ನಲ್ಲಿ ನನ್ನ ಮನೆಯನ್ನು ಬಾಡಿಗೆ ಪಡೆಯಬಹುದು, ಆರು ಜನರು ಮಾತ್ರ ವಾಸ್ತವ್ಯ ಹೂಡಬಹುದು. ನಾನು ಇದೆ ಮನೆಯಲ್ಲಿ ನನ್ನ ಪ್ರೀತಿಪಾತ್ರರ ಜೊತೆಗೆ ಸಮಯ ಕಳೆದಿದ್ದೇನೆ. ಇಲ್ಲಿ ನನ್ನ ಅತ್ಯಮೂಲ್ಯ ಸಮಯಗಳ ನೆನಪು ತುಂಬಿದೆ ಎಂದು ಬಾವುಕರಾಗಿ ಬರೆದುಕೊಂಡಿದ್ದಾರೆ.

ಯುವರಾಜ್ ಸಿಂಗ್ ಮನೆಯನ್ನು ಹೇಗೆ ಬುಕ್ ಮಾಡುವುದು?

ನೀವು Airbnb ನಲ್ಲಿ ಯುವರಾಜ್ ಸಿಂಗ್ ಅವರ ಗೋವಾ ಮನೆಯನ್ನು ಬುಕ್ ಮಾಡಬಹುದು. ಬುಕಿಂಗ್ ಸೆಪ್ಟೆಂಬರ್ 28 ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಬುಕಿಂಗ್ ಮಾಡಲು ನೀವು ಈ ಲಿಂಕ್ ಅನ್ನು ಅನುಸರಿಸಬಹುದು: https://airbnb.com/yuvrajsingh.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News