ನವದೆಹಲಿ: ಕಾಂಗ್ರೆಸ್ ಮುಖಂಡ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು Zee news ವಿರುದ್ಧ ಸುಳ್ಳು ಆರೋಪ ಮಾಡಿ, ಅಪಮಾನ ಮಾಡಿದ ಬೆನ್ನೆಲ್ಲೇ ಸಿಧು ವಿರುದ್ಧ ಜೀ ನ್ಯೂಸ್ 1000 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
'ಮಾಧ್ಯಮದ ಧ್ವನಿ ಅಡುಗಿಸಲು ಕಾಂಗ್ರೆಸ್ ಯತ್ನ': ಸುಧೀರ್ ಚೌಧರಿ
ಈ ವಿಚಾರವಾಗಿ ನವಜೋತ್ ಸಿಂಗ್ ಸಿಧು ಅವರು ಈ ನೋಟಿಸ್ ತಲುಪಿದ 24 ಗಂಟೆಗಳಲ್ಲಿ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನ್ಯಾಯಕ್ಕಾಗಿ ಸಿಧು ವಿರುದ್ಧ ಎಲ್ಲಾ ರೀತಿಯ ಕಾನೂನು ಹೋರಾಟಗಳನ್ನು ಮಾಡುವುದಾಗಿ ಜೀ ನ್ಯೂಸ್ ನೀಡಿರುವ ನೋಟಿಸ್'ನಲ್ಲಿ ಹೇಳಿದೆ.
.@ZeeNews issues ₹1000 crore defamation notice to Navjot Sidhu for his defamatory and false allegations against Zee Media. If he doesn’t apologise we shall use all legal recourses to take this case to its logical conclusion. pic.twitter.com/MUSqjNJuYJ
— Sudhir Chaudhary (@sudhirchaudhary) December 15, 2018
ನೋಟಿಸ್ ನಲ್ಲಿರುವ ಪ್ರಮುಖ ಅಂಶಗಳು
* ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಜೀ ನ್ಯೂಸ್ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ 24 ಗಂಟೆಗಳೊಳಗೆ ಬಹಿರಂಗ ಕ್ಷಮೆ ಕೇಳಬೇಕು.
* ಮಾನಹಾನಿ ಹೇಳಿಕೆಗಳನ್ನು, ಕ್ರಿಯೆಗಳನ್ನು ಪುನರಾವರ್ತಿಸಬಾರದು ಮತ್ತು ಷರತ್ತುಬದ್ಧ ಸಾರ್ವಜನಿಕ ಕ್ಷಮೆ ಕೋರಬೇಕು.
* ಜೀ ನ್ಯೂಸ್ ವಿರುದ್ಧ ಯಾವುದೇ ಮಾನನಷ್ಟ ಹೇಳಿಕೆಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ಮಾಡುವುದನ್ನು ನಿಲ್ಲಿಸಬೇಕು.
* ಬೆದರಿಕೆ ಹಾಕುವುದು, ನೇರವಾಗಿ ಅಥವಾ ಪರೋಕ್ಷವಾಗಿ ದ್ವೇಷ, ಶತ್ರುತ್ವವನ್ನು ಸಾಧಿಸಬಾರದು.
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ನಡೆದ ರ್ಯಾಲಿಯೊಂದರಲ್ಲಿ ನವಜೋತ್ ಸಿಂಗ್ ಸಿಧು ಅವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಜನರು 'ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ್ದರು. ಈ ಸುದ್ದಿಯನ್ನು ವೀಡಿಯೋ ಸಮೇತ ಜೀ ನ್ಯೂಸ್ ಪ್ರಸಾರ ಮಾಡಿ ದೇಶ ವಿರೋಧಿ ಘೋಷಣೆಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತ್ತು. ಇದಾದ ಬಳಿಕ, ನವಜೋತ್ ಸಿಧು ಅವರು ಜೀ ನ್ಯೂಸ್ ಸುಳ್ಳು ಆರೋಪ ಮಾಡುತ್ತಿದೆ, ವೀಡಿಯೋ ತಿರುಚಿ ಪ್ರಸಾರ ಮಾಡಿದೆ ಎಂದು ಆರೋಪಿಸಿದ್ದರು.
ಸಿಧು ರ್ಯಾಲಿ ವೊಂದರಲ್ಲಿನ ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಪಾಕ್ ಮಾಧ್ಯಮಗಳು ಕವರ್ ಮಾಡಿದ್ದೇಗೆ ಗೊತ್ತಾ..
ಈ ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿಧು ಮತ್ತು ಇತರ ಕಾಂಗ್ರೆಸ್ ಮುಖಂಡರ ವಿರುದ್ಧ ಚುನಾವಣಾ ಆಯೋಗಕ್ಕೆ ಜೀ ನ್ಯೂಸ್ ದೂರು ಸಲ್ಲಿಸಿತ್ತು. ಇದರಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಮತ್ತು ಪಕ್ಷದ ಮುಖಂಡ ಕರಣ್ ಸಿಂಗ್ ಯಾದವ್ ಅವರ ಹೆಸರನ್ನೂ ಉಲ್ಲೇಖಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗಲು ಅವಕಾಶ ನೀಡಿದ ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ಸಲ್ಲಿಸಲಾಗಿತ್ತು.
ಕಾಂಗ್ರೆಸ್ ನ ವೀಡಿಯೋ ತಿರುಚುವಿಕೆ ಆರೋಪವನ್ನು ನಿರಾಕರಿಸಿದ ಜೀ ನ್ಯೂಸ್
ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳವಾದ ತನಿಖೆ ನಡೆಸಿ, ಕಾಂಗ್ರೆಸ್ ಮುಖಂಡರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಜೊತೆಗೆ, ಘಟನೆಗೆ ಸಂಬಂಧಿಸಿದ ಲೈವ್ ವೀಡಿಯೋಗಳು ಮತ್ತು ಪೂರಕ ವೀಡಿಯೋಗಳನ್ನೂ ಚುನಾವಣಾ ಆಯೋಗಕ್ಕೆ ಸಿಡಿ ರೂಪದಲ್ಲಿ ಜೀ ನ್ಯೂಸ್ ಸಲ್ಲಿಸಿದೆ.