VIDEO: ಡ್ರೋನ್ ಮೂಲಕ ಫುಡ್ ಡೆಲಿವರಿ ಮಾಡಲಿರುವ Zomato

ಆನ್ಲೈನ್ ಬುಕಿಂಗ್ ಮತ್ತು ಆಹಾರ ವಿತರಣಾ ವೇದಿಕೆ Zomato ಡ್ರೋನ್ಗಳ ಮೂಲಕ ಆಹಾರದ(ಫುಡ್) ವಿತರಣೆ ಮಾಡುವುದಾಗಿ ಘೋಷಿಸಿದೆ. ಕಂಪನಿಯ ಪರವಾಗಿ ಡ್ರೋನ್ ವಿತರಣಾ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

Last Updated : Jun 13, 2019, 02:55 PM IST
VIDEO: ಡ್ರೋನ್ ಮೂಲಕ ಫುಡ್ ಡೆಲಿವರಿ ಮಾಡಲಿರುವ Zomato title=

ನವದೆಹಲಿ: ಆನ್ಲೈನ್ ಫುಡ್ ಬುಕಿಂಗ್ ಅಂಡ್ ಡೆಲಿವರಿ ವೇದಿಕೆ Zomato ಡ್ರೋನ್ಗಳ ಮೂಲಕ ಆಹಾರ ವಿತರಣೆ ಮಾಡುವುದಾಗಿ ಘೋಷಿಸಿದೆ. ಡ್ರೋನ್ ವಿತರಣಾ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಪರೀಕ್ಷಾರ್ಥವಾಗಿ Zomato ಹೈಬ್ರಿಡ್ ಡ್ರೋನ್ ಅನ್ನು ಬಳಸಿದೆ. ಈ ತಂತ್ರಜ್ಞಾನದ ಸಹಾಯದಿಂದ 5 ಕಿ.ಮೀ. ದೂರದಲ್ಲಿರುವ ಗ್ರಾಹಕರಿಗೆ ಕೇವಲ 10 ನಿಮಿಷಗಳಲ್ಲಿ ಆಹಾರ ವಿತರಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 80 ಕಿಮೀ ಇರುತ್ತದೆ. ಕಡಿಮೆ ಸಮಯದಲ್ಲಿ ಗ್ರಾಹಕರನ್ನು ತಲುಪಲು ಡ್ರೋನ್ ಮೂಲಕ ಫುಡ್ ಡೆಲಿವರಿ ಮಾಡಲು ಕಂಪನಿ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಮಾಲಿನ್ಯ ಮತ್ತು ಸಂಚಾರ ದಟ್ಟಣೆಯಿಂದ ಪರಿಹಾರ:
ಲಕ್ನೋ ಮೂಲದ ಡ್ರೋನ್ ಸ್ಟಾರ್ಟ್ ಆಪ್ TechEagle ಖರೀದಿಯ ಒಂದು ತಿಂಗಳ ಬಳಿಕ Zomato ದಿಂದ ಡ್ರೋನ್ ಪ್ರಯೋಗ ನಡೆದಿದೆ.  TechEagle ನಿಂದ UAV ರಚಿಸಲಾಗಿದೆ, ಅದು ಒಂದು ಹೈಬ್ರೀಡ್ ಏರ್ಕ್ರಾಫ್ಟ್ ಆಗಿದೆ. ಡ್ರೋನ್ ಮೂಲಕ ಫುಡ್ ಡೆಲಿವರಿ ಕಡಿಮೆ ಸಮಯವನ್ನು ತೆಗೆದುಕೊಳ್ಳುವುದು ಮಾತ್ರವಲ್ಲ, ಮಾಲಿನ್ಯ ಮತ್ತು ಸಂಚಾರ ದಟ್ಟಣೆಯಿಂದ ಕೂಡಾ ಪರಿಹಾರ ನೀಡುತ್ತದೆ. ಡ್ರೋನ್ ಡಿಜಿಸಿಎ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ ಎಂದು ಜೊಮಟೊ ತಿಳಿಸಿದೆ.

ಶೀಘ್ರದಲ್ಲೇ ಡ್ರೋನ್ ಮೂಲಕ ಫುಡ್ ಡೆಲಿವರಿ:
ಜೊಮಟೊ ಕಂಪನಿಯ ಪರವಾಗಿ ಡ್ರೋನ್ ವಿತರಣಾ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇದಲ್ಲದೆ ಸಹ-ಸೈಟ್ ಅನ್ನು ಡಿಜಿಸಿಎದಿಂದ ಅನುಮೋದಿಸಲಾಗಿದೆ.  ಎಂದು ಕಂಪನಿ ತಿಳಿಸಿದೆ. ಫುಡ್ ಡೆಲಿವರಿ ಕಂಪೆನಿಯ ಪ್ರಕಾರ, ಅಂತಹ ಪರೀಕ್ಷೆಗಳನ್ನು ದೂರದ ಸ್ಥಳಗಳಿಗೆ ಮಾತ್ರ ಮಾಡಲಾಗುತ್ತದೆ, ಅವುಗಳು ಇಂತಹ ಪರೀಕ್ಷೆಗೆ ಸಿದ್ಧವಾಗುತ್ತವೆ. Zomato ಸಂಸ್ಥಾಪಕ ಮತ್ತು ಸಿಇಒ ದೀಪೇಂದ್ರ ಗೋಯಲ್ ನಾವು ಸಮರ್ಥನೀಯ ಮತ್ತು ಸುರಕ್ಷಿತ ವಿತರಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿದರು. ನಾವು ಮೊದಲು ಈ ತಂತ್ರವನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದೇವೆ. ಶೀಘ್ರದಲ್ಲೇ ಡ್ರೋನ್ ಮೂಲಕ ಫುಡ್ ಡೆಲಿವರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Zomato ಪ್ರಕಾರ, ಬೈಕ್ ಮೂಲಕ ಆಹಾರ ವಿತರಣೆ ಮಾಡಲು ಕನಿಷ್ಠ 30.5 ನಿಮಿಷ ಬೇಕು. ಆದರೆ ಈಗ ಡ್ರೋನ್ ಬಳಕೆ ಮೂಲಕ ಕಂಪನಿಯು ಕೆಲವೇ ನಿಮಿಷಗಳಲ್ಲಿ ಆಹಾರವನ್ನು ವಿತರಿಸಲಿದೆ. ಕಂಪೆನಿಯು ಅಲ್ಪಾವಧಿಗೆ ವಿತರಣೆಗಾಗಿ ಡ್ರೋನ್ ಅನ್ನು ಬಳಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಪಂಚದಾದ್ಯಂತ ಅನೇಕ ಕಂಪನಿಗಳು ಡ್ರೋನ್ ಆಧಾರಿತ ವಿತರಣೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಿಂದಿನ, ಇ-ಕಾಮರ್ಸ್ ಕಂಪನಿ ಅಮೆಜಾನ್ ಡ್ರೋನ್ ಮೂಲಕ ಪ್ರಾಡಕ್ಟ್ ವಿತರಿಸುವುದಾಗಿ ಘೋಷಿಸಿದೆ.
 

Trending News