ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್ ಗಳು ವಿಫಲವಾಗಿವೆ- ಮಲ್ಲಿಕಾರ್ಜುನ್ ಖರ್ಗೆ

ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್ ಗಳು ವಿಫಲವಾಗಿದೆ. ಜನಬೆಂಬಲವಿದ್ದಲ್ಲಿ ಮಾತ್ರ ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಸಾಧ್ಯ. ಇಲ್ಲಿಯೇನು ಶಾ ಮತ್ತು ಮೋದಿ ಅವರು ಇಲ್ಲಿ ಬಂದು ಮುಖ್ಯಮಂತ್ರಿ ಆಗ್ತಾರ? ಇಲ್ಲಿನ ಜನನೇ ಮುಖ್ಯಮಂತ್ರಿ ಆಗೋದು. ನಮ್ಮ ಜನಕ್ಕೆ ಏನೂ ಮಾಡದ ಮೋದಿಯವರ ಬಿಜೆಪಿಗೆ ತಕ್ಕ ಪಾಠ ಕಲಿಸಿ. ಜನ ಅವರನ್ನು ಧಿಕ್ಕರಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Written by - Zee Kannada News Desk | Last Updated : May 3, 2023, 05:49 PM IST
  • ಎರಡುವರೇ ಲಕ್ಷ ಖಾಲಿ ಹುದ್ದೆಯನ್ನು ಭರ್ತಿ ಮಾಡುತ್ತೇವೆ ಎಂಬ ಭರವಸೆ ನಾವು ನಿಮಗೆ ನೀಡುತ್ತೇವೆ
  • ನಮ್ಮ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಕೊಟ್ಟಿದೆ
  • ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ
ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್ ಗಳು ವಿಫಲವಾಗಿವೆ- ಮಲ್ಲಿಕಾರ್ಜುನ್ ಖರ್ಗೆ title=
file photo

ಆಳಂದ: ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್ ಗಳು ವಿಫಲವಾಗಿದೆ. ಜನಬೆಂಬಲವಿದ್ದಲ್ಲಿ ಮಾತ್ರ ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಸಾಧ್ಯ. ಇಲ್ಲಿಯೇನು ಶಾ ಮತ್ತು ಮೋದಿ ಅವರು ಇಲ್ಲಿ ಬಂದು ಮುಖ್ಯಮಂತ್ರಿ ಆಗ್ತಾರ? ಇಲ್ಲಿನ ಜನನೇ ಮುಖ್ಯಮಂತ್ರಿ ಆಗೋದು. ನಮ್ಮ ಜನಕ್ಕೆ ಏನೂ ಮಾಡದ ಮೋದಿಯವರ ಬಿಜೆಪಿಗೆ ತಕ್ಕ ಪಾಠ ಕಲಿಸಿ. ಜನ ಅವರನ್ನು ಧಿಕ್ಕರಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅವರು ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇದನ್ನೂ ಓದಿ: Crime News: ಸಹಪಾಠಿ ವಿದ್ಯಾರ್ಥಿನಿ ಜೊತೆ ಮುಸ್ಲಿಂ  ವಿದ್ಯಾರ್ಥಿ ಜೊತೆಯಾಗಿ ಜ್ಯೂಸ್ ಕುಡಿದಿದ್ದಕ್ಕೆ ಹಲ್ಲೆ

ಈ ವಿಧಾನಸಭಾ ಚುನಾವಣೆ ದೇಶಕ್ಕೆ ಮತ್ತು ರಾಜ್ಯಕ್ಕೆ ಬಹಳ ಮಹತ್ತರವಾದ ಚುನಾವಣೆ. ಇದು ಮಾಡು ಇಲ್ಲವೇ ಮಡಿ ಎಂಬ ಚುನಾವಣೆ. ಈಗಿನ ಚುನಾವಣೆ ಯಾಕಾಗಿ ಮಹತ್ವದ್ದಾಗಿದೆ ಏನೆಂದರೆ ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ, ಇಂದು ಕರ್ನಾಟಕದಲ್ಲಿ ಯಾವುದೇ ಕೆಲಸಕ್ಕೆ ಲಂಚ ಕೊಡದೇ ಕೆಲಸ ಆಗುವುದಿಲ್ಲ. ಏಕೆಂದರೆ 40% ಕಮಿಷನ್ ಕೊಟ್ರೆ ಎಲ್ಲ ಕೆಲಸ ಆಗುತ್ತದೆ ಅನ್ನುವಂತಹ ಜಗಜ್ಜಾಹೀರಾಗಿದೆ. ರಾಜ್ಯದ ಗುತ್ತಿಗೆದಾರರ ಸಂಘದವರು ರಾಜ್ಯದ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದು ಕಳಿಸಿದ್ದಾರೆ, ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು ಬೇಕು. ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮೋದಿ ಅವರೇ ಲಂಚ ಪಡೆಯುತ್ತಿರುವವರ ಜೊತೆಗೆ ಓಡಾಡ್ತಿದ್ದೀರಿ, ಹೊಗಳುತ್ತಿದ್ದೀರಿ, ನಾ ಖಾವೂಂಗ, ನಾ ಖಾನೇದೂಂಗಾ ಎಲ್ಲಿ ಹೋಯಿತು ಎಂದು ನಾ ಖಾವೂಂಗ ನಾ ಖಾನೇದೂಂಗಾ ಎನ್ನುವ ನರೇಂದ್ರ ಮೋದಿ ಕರ್ನಾಟಕದಲ್ಲಿ ಮಾತ್ರ ಖಾನೇವಾಲಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ದೇಶದ ಪ್ರಧಾನಿ ಮೋದಿ ಅವರಿಗೆ ಕಲಬುರಗಿ ಮೇಲೆ ಬಹಳ ಪ್ರೀತಿ. ಒಬ್ಬ ಪ್ರಧಾನಿ ಅವರು ಜಿಲ್ಲೆಗೆ 3 ಬಾರಿ ಬಂದಿದ್ದಾರೆ. ಒಂದು ಜಿಲ್ಲೆಯ ಚುನಾವಣೆಗೋಸ್ಕರ ನಾಲ್ಕು ನಾಲ್ಕು ಸಲ ಬಾರಿ ಬಂದಿದ್ದಾರೆ. ಅಂದರೆ ರಾಜ್ಯದ ಜನತೆಯ ಒಲವು ಕಾಂಗ್ರೆಸ್ ಪಕ್ಷಕ್ಕೆ ಇದೆ. ಅದಕ್ಕಾಗಿ ನಿಮ್ಮ ಮನವನ್ನು ಕೆಡಿಸಲಿಕ್ಕೆ ಬಂದಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಇಲ್ಲಿಯ ಜನ ಬುದ್ಧಿವಂತರು, ಧೈರ್ಯವಂತರು ಎಂದಿಗೂ ಕೂಡ ತಲೆಕಡೆಸಿಕೊಳ್ಳಲ್ಲ. ನಂಬಿದ ತತ್ವದ ಮೇಲೆ ಅವರು ಮತ ಹಾಕುತ್ತಾರೆ ಬಹುಷಃ ಅವರಿಗೆ ತಿಳಿದಿಲ್ಲ ಕಾಣುತ್ತೆ ಎಂದು ಕಿಡಿ ಕಾರಿದರು.

ನಾನು ಮತ್ತು ನನ್ನ ಮಗ ಪ್ರಿಯಾಂಕ್  ಪ್ರಧಾನಿಗೆ ಅವರಿಗೆ ಅವಮಾನ ಮಾಡಿದ್ದೇವೆ ಎಂದು ಅವರು ಆರೋಪಿಸಿದ್ದಾರೆ. ಒಬ್ಬ ದೇಶದ ಪ್ರಧಾನಿಗೆ ನಾವೇಗೆ ಅವಮಾನ ಮಾಡಕಾಗುತ್ತೆ. ಯಾರೇ ಇದ್ದರೂ ನಮ್ಮವರು. ಅದೇ ನೀವು ಮಾತ್ರ (ಮೋದಿ) ಅವರು ಮಾತ್ರ ಕರ್ನಾಟಕಕ್ಕೆ ಅವಮಾನ ಮಾಡುತ್ತಿದ್ದೀರಾ ಎಂದು ಕುಟುಕಿದರು. ನಾವು ಗುಲ್ಪಾರ್ಗದಲ್ಲಿ ಸುಮಾರು 400 ಕೋಟಿ ಅನುದಾನದೊಂದಿಗೆ ಕೇಂದ್ರೀಯ ವಿವಿ ತಂದಿದ್ದೇವೆ. ಅಲ್ಲಿ ವಿಭಾಗಗಳೇ ಇಲ್ಲ, ಅಲ್ಲಿರುವ ಖಾಲಿ ಹುದ್ದೇಗಳನ್ನೇ ಭರ್ತಿ ಮಾಡಿಲ್ಲ. ಇಲ್ಲಿಯ ಜನ ಅರ್ಹರಿದರೂ ನೇಮಕಾತಿ ಮಾಡಿಲ್ಲ. ಈ ಭಾಗದಲ್ಲಿ ಇಎಸ್ಐ ಆಸ್ಪತ್ರೆಗಳನ್ನು ನಾವು ಇಲ್ಲಿ ಸ್ಥಾಪಿಸಿದ್ದೇವೆ. ಗುಲ್ಬಾರ್ಗಕ್ಕೆ ಒಂದು ಏಮ್ಸ್ ಮಾಡ್ರೀ, ಸುಮಾರು ಸಾವಿರಾರು ಕೋಟಿ ನಾವು ಮೂರು ವರ್ಷದಲ್ಲಿ ಖರ್ಚು ಮಾಡಿ ತಂದು ನಿಲ್ಲಿಸಿದ್ದೇವೆ. ಆದರೆ ಈಗಿನ ಸರ್ಕಾರ ದನದ ಕೊಟ್ಟಿಗೆ ಆಗಿ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಬೀದರ್ ನಿಂದ ಮೈಸೂರಿನವರೆಗೆ, ಸೋಲಾಪುರದಿಂದ ಬೆಂಗಳೂರಿನವರೆಗೆ ನಾವು ತಂದ ಯೋಜನೆ ಅದನ್ನು ಇವರು ನಿಲ್ಲಿಸಿಬಿಟ್ಟಿದ್ದಾರೆ ಎಂದು ಹೇಳಿದರು.

ಬಿಜೆಪಿ ಅವರಿಗೆ ದೊಡ್ಡ ಯೋಜನೆಗಳನ್ನು ತಂದು ಗೊತ್ತಿಲ್ಲ. ಧರ್ಮ ಧರ್ಮದೊಂದಿಗೆ ಬಡ ಜನರೊಳಗಡೆ ಬಿಜೆಪಿ ಅವರು ಜಗಳ ಹಚ್ಚತ್ತಾ ಇದ್ದಾರೆ. ಮಾತು ಎತ್ತಿದ್ದರೆ ಹಿಂದೂ ಮುಸ್ಮಲ್ಮಾನ್ ಅಂತ ಹೇಳಿ ಸಾಮರಸ್ಯವನ್ನು ಕೆಡವಿ ಮತ ದ್ರುವೀಕರಣ ಮಾಡೋದೆ ಬಿಜೆಪಿಯ ಕೆಲಸ. ಬೇರೆ ಅವರು ಇಲ್ಲಿ ಬಂದು ಮತೀಯ ಸಾಮರಸ್ಯವನ್ನು ಕೆಡಿಸಲಿಕ್ಕೆ ಪ್ರಯಾತ್ನ ಮಾಡುತ್ತಾರೆ. ಸಮಾಜದ್ರೋಹ ಕೆಲಸ ಮಾಡುವ ಶಕ್ತಿಗಳಿಗೆ ಎಲ್ಲ ವಿಚ್ಛೀದ್ರಕಾರಿ ಶಕ್ತಿಗಳಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ನಾವು ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ. ಎಲ್ಲಿ ಶಾಂತಿ ಇರುತ್ತೊ ಅಲ್ಲಿ ಅಶಾಂತಿ ಮಾಡುವ ಪ್ರವತ್ತಿ ಬಿಜೆಪಿ ಅವರದ್ದು. ಇದು ನಮ್ಮ ನಿಮ್ಮ ರಕ್ಷಣೆಗಾಗಿ ಇರುವ ಚುನಾವಣೆ ಎಂದರು.

ನಮ್ಮಲ್ಲಿ ಬಹಳಷ್ಟು ಜನ ನಿರುದ್ಯೋಗಿಗಳು ಇದ್ದಾರೆ. 2,50,000 ಲಕ್ಷ ಸರ್ಕಾರಿ ನೌಕರಿ ಖಾಲಿ ಇದೆ. ಸರ್ಕಾರ ಭರ್ತಿ ಮಾಡಿಲ್ಲ. ಜನರಿಗೆ  ಉದ್ಯೋಗಳನ್ನು ಯಾಕೆ ತುಂಬಲ್ಲ. ಬಡವರು ಇನ್ನು ಬಡವರು ಆಗುತ್ತಾ ಇದ್ದಾರೆ. ಶ್ರೀಮಂತರು ಶ್ರೀಮಂತರು ಆಗ್ತಾ ಇದ್ದಾರೆ. ಕೇಂದ್ರ ಸರ್ಕಾರದಲ್ಲೂ 30 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ನಾವು ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು ಸುಮಾರು 560 ಭರವಸೆಗಳ ಪೈಕಿ 550 ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಎಸ್.ಸಿ, ಎಸ್.ಟಿ ವಿದ್ಯಾರ್ಥಿ ವೇತನಗಳನ್ನು ರದ್ದುಗೊಳಿಸಿದ್ದಾರೆ. ಮಹಿಳೆಯರಿಗೂ ಈ ಸರ್ಕಾರ ಮೋಸ ಮಾಡಿದೆ. ಬೆಲೆಯೇರಿಕೆಯಿಂಧಾಗಿ ಜನ ತತ್ತರಿಸಿದ್ದಾರೆ. ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಯುಪಿಎ ಸರ್ಕಾರವಿದ್ದಾಗ 450 ರೂ, ಇತ್ತು ಅಂದು 1100 ರೂ. ಇದೆ ಜನರಿಗೆ ಕಷ್ಟವಾಗುತ್ತಿದೆ. ಜನರ ಕಷ್ಟಗಳಿಗೆ ಕಿವಿಯಾಗುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಭಜರಂಗದಳ ನಿಷೇಧ: ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುತ್ತೇವೆಂದ ಶ್ರೀರಾಮಸೇನೆ  

2014ರಲ್ಲಿ ಬಿಜೆಪಿ ಪಕ್ಷ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಅದರಂತೆ ಆಗಿದ್ದರೆ ಇದುವರೆಗೆ 9 ವರ್ಷದಲ್ಲಿ ಬರೋಬ್ಬರಿ 18 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ನೀವೆಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ..? ಹೇಳಿದ ಆಶ್ವಾಸನೆ ಈಡೇರಿಸಿದ್ದೀರಾ.  ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೀವಿ ಸರ್ಕಾರಿ ಉದ್ಯೋಗಗಳು ಕೂಡಾ ಕುಸಿಯುತ್ತಿವೆ. ಹೀಗಿರುವಾಗ ವಿದ್ಯಾವಂತ ನಿರುದ್ಯೋಗಿಗಳು ಬದುಕುವುದು ಹೇಗೆ..? ಅವರಿಗೆ ಉದ್ಯೋಗ ಕೊಡವವರು ಯಾರು ? ಮೋದಿ ಅವರು 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇನೆಂದು ಹೇಳಿದ ಮೋದಿ ಮೋಸ ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ನಾನು ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಈ ಭಾಗಕ್ಕೆ ಹೈದರ್ ಬಾದ್ ಕರ್ನಾಟಕಕ್ಕೆ ಆರ್ಟಿಕಲ್ 371 (J) ಜಾರಿಗೆ ತಂದೆ. ಈ ಭಾಗದ ಜನರಿಗೆ ಇಂಜಿನಿಯರ್, ವೈದ್ಯಕೀಯ ಸೀಟು ಸೇರಿದಂತೆ ಅನೇಕ ಜನರಿಗೆ ನೌಕರಿಗಳು ಸಿಕ್ಕಿವೆ. ಆದರೆ ಬಿಜೆಪಿ ಸರ್ಕಾರ ಈ ಭಾಗಕ್ಕೆ ಕೇವಲ ಹೆಸರು ಬದಲಾವಣೆ ಮಾಡಿದರು ಎಂದು ಕುಟುಕಿದರು. ಕಷ್ಟಪಟ್ಟು ನಾವು ತಂದಿದ್ದೇವೆ. ಇದು ನಮ್ಮ ಕಾಂಗ್ರೆಸ್ ಪಕ್ಷದ ಕೊಡುಗೆ. ರೈತರಿಗೆ ಆದಾಯ ದುಪ್ಪಟ್ಟು ಮಾಡುತ್ತವೇಂದ ಮೋದಿ ಸರ್ಕಾರ ರೈತರಿಗೂ ಮೋಸ ಮಾಡಿದೆ. ಬರೀ ಸುಳ್ಳು ಹೇಳೊದೆ ಮೋದಿ  ಸರ್ಕಾರದ ಸಾಧನೆ. ಜನ ಸಾಮಾನ್ಯನ ಹಣವನ್ನು ಲೂಟಿ ಮಾಡಿ ಶ್ರೀಮಂತರಿಗೆ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಎರಡುವರೇ ಲಕ್ಷ ಖಾಲಿ ಹುದ್ದೆಯನ್ನು ಭರ್ತಿ ಮಾಡುತ್ತೇವೆ ಎಂಬ ಭರವಸೆ ನಾವು ನಿಮಗೆ ನೀಡುತ್ತೇವೆ. ನಮ್ಮ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ಯುವಶಕ್ತಿಯು ದೇಶದ ಭವಿಷ್ಯವಾಗಿದ್ದು ವಿದ್ಯಾವಂತ ನಿರುದ್ಯೋಗಿಗಳ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಘೋಷಿಸಿರುವ ಯುವನಿಧಿ ಗ್ಯಾರಂಟಿಯೂ ನಿರುದ್ಯೋಗಿ ಯುವಕ, ಯುವತಿಯರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ಡಿಪ್ಲೋಮಾ ಆದವರಿಗೆ 1500 ರೂ., ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ ಕಾರ್ಯಕ್ರಮ ರಾಜ್ಯದ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತ. ಗೃಹಲಕ್ಷ್ಮಿ ಯೋಜನೆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ. ಇನ್ನು ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿದ್ದೇವೆ. ಇವನ್ನು ನಾವು ಖಂಡಿತವಾಗಿ ಜಾರಿ ಮಾಡುತ್ತೇವೆ ಎಂದು ನಾನು ಮತ್ತೊಂದು ಗ್ಯಾರಂಟಿ ನೀಡುತ್ತೇನೆ. ಇದನ್ನು ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಲಾಗುವುದು ಎಂದು ನಾನು ಈಗಾಗಲೇ ನಮ್ಮ ಪಕ್ಷದ ರಾಜ್ಯದ ನಾಯಕರಿಗೆ ನಾನು ಆದೇಶಿಸಿದ್ದೇನೆ. ಇದು ಬೋಗಸ್ ಗ್ಯಾರಂಟಿ ಅಲ್ಲ. ಇದು ಮೋದಿ ಗ್ಯಾರಂಟಿ ಅಲ್ಲ, ಇದು ಶಾ ಗ್ಯಾರಂಟಿ ಅಲ್ಲ. ಇದು ಪಕ್ಕಾ ರಾಜ್ಯದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News