Karnataka Election Result 2023: ಚಿಕ್ಕಬಳ್ಳಾಪುರ ಜಿಲ್ಲಾ 5 ವಿಧಾನಸಭಾ ಕ್ಷೇತ್ರದ ವಿಜಯಶಾಲಿಗಳು..!

Chikkaballapur Karnataka Assembly Election Result 2023 : ಕ್ಷಣ ಕ್ಷಣಕ್ಕೂ 224 ಮತ ಕ್ಷೇತ್ರಗಳ ಫಲಿತಾಂಶ ಕುತೂಹಲಕಾರಿಯಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ರೋಚಕ ಸಮರ ಸಾಗಿದೆ. ಜಿಲ್ಲಾವಾರು ವಿಧಾನಸಭಾ ಕ್ಷೇತ್ರಗಳ ಸಂಪೂರ್ಣವಾದ ಫಲಿತಾಂಶ ಇಲ್ಲಿದೆ ನೋಡಿ..

Written by - Krishna N K | Last Updated : May 13, 2023, 08:24 PM IST
  • ಸೋಲುಂಡ ಸುಧಾಕರ್‌, ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಜಯಭೇರಿ
  • ಚಿಕ್ಕಬಳ್ಳಾಪುರ 5 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕಡೆ ಕಾಂಗ್ರೆಸ್‌ಗೆ ಮುನ್ನಡೆ
  • ಚಿಕ್ಕಬಳ್ಳಾಪುರ 5 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕಡೆ ಕಾಂಗ್ರೆಸ್‌ಗೆ ಮುನ್ನಡೆ
Karnataka Election Result 2023: ಚಿಕ್ಕಬಳ್ಳಾಪುರ ಜಿಲ್ಲಾ 5 ವಿಧಾನಸಭಾ ಕ್ಷೇತ್ರದ ವಿಜಯಶಾಲಿಗಳು..! title=

Chikkaballapur Vidhan sabha Chunavane Result 2023 : ಚಿಕ್ಕಬಳ್ಳಾಪುರ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಗಿದಿದೆ. ಅಂತಿಮವಾಗಿ 5 ಮತ ಕ್ಷೇತ್ರಗಳ ಪೈಕಿ 3 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಮಾಜಿ ಸಚಿವ ಡಾ. ಕೆ. ಸುಧಾಕರ್‌ ಈ ಬಾರಿ ಸೋಲನ್ನು ಅನುಭವಿಸಿದ್ದಾರೆ. ಅಲ್ಲದೆ, ಒರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆ ಭಾರಿ ಬದಲಾವಣೆಗೆ ಕಾರಣವಾಗಿದೆ. ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಆಗಿದೆ. ಇದೀಗ ಚಿಕ್ಕಬಳ್ಳಾಪುರದಲ್ಲಿ ಕೈ ಅಭ್ಯರ್ಥಿಗಳು ಅಧಿಕ ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ವಿರುದ್ಧ ಜಯ ಗಳಿಸಿದ್ದಾರೆ. ಇನ್ನು ಒರ್ವ ಪಕ್ಷೇತರ ಅಭ್ಯರ್ಥಿ ಮತ್ತು ಜೆಡಿಎಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಅಂತರ-11170 ಮತಗಳ ಅಂತರದಿಂದ‌ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಅವರನ್ನು ಸೋಲಿಸಿದ್ದಾರೆ. ಬಾಗೇಪಲ್ಲಿ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಎಸ್. ಎನ್. ಸುಬ್ಬಾರೆಡ್ಡಿ ಅವರು 81383 ಮತ ಗಳಿಸುವ ಮೂಲಕ  ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದಾರೆ.  ಇನ್ನು ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಹೆಚ್‌. ಪುಟ್ಟಸ್ವಾಮಿಗೌಡ ಗೆಲುವು 83177 ಮತಗಳನ್ನು ಪಡೆದು ಗೆಲುವಿನ ನಗೆ ಬಿರಿದ್ದಾರೆ. ಚಿಂತಾಮಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ 97324 ಮತ ಗಳಿಸಿ ಜಯದ ಗಂಟೆ ಭಾರಿಸಿದ್ದಾರೆ. ಅದೇ ರೀತಿ ಶಿಡ್ಲಘಟ್ಟ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ 15773 ಮತಗಳ ಅಂತರದಲ್ಲಿ ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಪುಟ್ಟು ಅಂಜನಪ್ಪ ವಿರುದ್ಧ 51531 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸುಧಾಕರ್ ಅವರು ನಂತರ ಬಿಜೆಪಿ ಸೇರ್ಪಡೆಯಾಗುವ ಮೂಲಕ  2019ರಲ್ಲಿ ಉಪಚುನಾವಣೆ ಎದುರಿಸಿ ಗೆದ್ದಿದ್ದರು. ಈ ಬಾರಿ 75582 ಮತಗಳನ್ನು ಪಡೆದಕೊಂಡು 11170 ಮತಗಳ ಅಂತದಲ್ಲಿ ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್‌ ವಿರುದ್ಧ ಸೋಲು ಅನುಭವಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕಡೆ ಕಾಂಗ್ರೆಸ್‌ ಗೆಲುವನ್ನು ಕಾಯ್ದುಕೊಂಡಿದೆ. 

1) ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ

ಬಿಜೆಪಿ ರೆಬಲ್‌ ಲೀಡರ್‌ ಕೆ ಸುಧಾಕರ್‌ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಅವರು 11,318 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಪ್ರದೀಪ್‌ 73165 ಮತ್ತು ಸುಧಾಕರ್‌ 61847   ಮತಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಕೆ.ಪಿ. ಬಚ್ಚೇಗೌಡ 14240 ಗಳಿಂದ ಸೋತಿದ್ದಾರೆ.

2018ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪಕ್ಷಾಂತರವಾದ ಶಾಸಕರಲ್ಲಿ ಡಾ. ಸುಧಾಕರ್‌ ಕೂಡ ಒಬ್ಬರು. 2013 ರಿಂದ ಇಲ್ಲಿನವರೆಗೂ ಗೆಲ್ಲುತ್ತಾ ಬಂದಿದ್ದಾರೆ. ಒಂದು ರೀತಿ ಚಿಕ್ಕಬಳ್ಳಾಪುರ ಸುಧಾಕರ್‌ ಭದ್ರಕೋಟೆಯಾಗಿದೆ. ಕಳೆದ ಚುನಾವಣೆಯಲ್ಲಿ ಸುಧಾಕರ್‌ ಅವರು 82006 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್‌ನ ಕೆ. ಪಿ. ಬಚ್ಚೇಗೌಡರು ವಿರುದ್ಧ ಗೆದ್ದಿದ್ದರು. 2018 ಗೆದ್ದು ಪಕ್ಷಾಂತರಗೊಂಡು ನಂತರ 2019ರಲ್ಲಿ ಉಪಚುನಾವಣೆ ಎದುರಿಸಿ ಗೆಲುವಿ ಸಿಂಹಾಸನ ಏರಿದ್ದರು.

98729 ಪುರುಷರು, 99049 ಮಹಿಳೆಯರು, 25 ಇರತೆ ಸೇರಿದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 197803 ಮತದಾರಿದ್ದಾರೆ. ಜೆಡಿಎಸ್‌ನಿಂದ ಕೆ. ಪಿ. ಬಚ್ಚೇಗೌಡರು 2023 ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್‌ ಸಹ ಸುಧಾಕರ್‌ ವಿರುದ್ಧ ಪ್ರದೀಪ್‌ ಈಶ್ವರ್‌ ಅವರನ್ನು ಕಣಕ್ಕಿಳಿಸಿದೆ. ಸತತ ಎರಡು ಬಾರಿ ಗೆಲುವು ಕಂಡಿರುವ ಸುಧಾಕರ್‌ಗೆ ಈ ಬಾರಿಯ ಚುನಾವಣೆ ಅದೃಷ್ಟ ತರುತ್ತೋ ಅಥವಾ ಸೋಲನ್ನು ಪರಿಚಯಿಸುತ್ತದೆಯೋ ಅಂತ ಕಾಯ್ದು ನೋಡಬೇಕಿದೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ಪ್ರದೀಪ್ ಈಶ್ವರ್ - ಗೆಲುವು
  • ಬಿಜೆಪಿ - ಡಾ. ಕೆ ಸುಧಾಕರ್‌ 
  • ಬಿಎಸ್‌ಪಿ - ಪಿಲ್ಲಾ ಆಂಜಿನಪ್ಪ 
  • ಜಿಡಿಎಸ್‌ - ಕೆ. ಪಿ. ಬಾಚೇ ಗೌಡ   
  • ಎಎಪಿ - ಡಾ. ಎಂ. ಎಂ. ಭಾ‍ಷಾ ನಂದಿ

2) ಗೌರಿಬಿದನೂರು ವಿಧಾನಸಭಾ ಕ್ಷೇತ್ರ

ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಹೆಚ್‌. ಪುಟ್ಟಸ್ವಾಮಿಗೌಡ ಅವರು ಗೆಲುವು ಸಾಧಿಸಿದ್ದಾರೆ.  ಎನ್‌.ಎಚ್‌. ಶಿವಶಂಕರ್‌ ರೆಡ್ಡಿಯವರು 2018ರ ಚುನಾವಣೆಯಲ್ಲಿ 69000 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್‌ ಅಭ್ಯರ್ಥಿ ಸಿ.ಆರ್ ನರಸಿಂಹಮೂರ್ತಿ ವಿರುದ್ಧ ಗೆದ್ದಿದ್ದರು. ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕೆ. ಜೈಪಾಲ್ ರೆಡ್ಡಿ    34759    ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಜಿದ್ದಾಜಿದ್ದಿ ಇದೆ.

2023ರ ಚುನಾವಣ ಕಣದಲ್ಲಿ ಹಾಲಿ ಶಾಸಕ ಎನ್‌. ಎಚ್‌. ಶಿವಶಂಕರ್‌ ವಿರುದ್ಧ ಜೆಡಿಎಸ್‌ ಮತ್ತೆ ಸಿ. ಆರ್‌. ನರಸಿಂಹ ಮೂರ್ತಿಯವರನ್ನು ಚುನಾವಣಾ ಕಣಕ್ಕಿಳಿಸಿದೆ. ಅಲ್ಲದೆ, ಬಿಜೆಪಿ ಈ ಬಾರಿ ಡಾ. ಎಚ್. ಎಸ್. ಶಶಿಧರ ಕುಮಾರ್ ಅವರಿಗೆ ಟಿಕೆಟ್‌ ನೀಡಿದೆ. ಒಟ್ಟು 203048 ಮತದಾರರಿರುವ ಕ್ಷೇತ್ರದಲ್ಲಿ 101236 ಮಂದಿ ಪುರುಷರು ಹಾಗೂ 101810 ಮಂದಿ ಮಹಿಳಾ ಮತದಾರರಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೌರಿಬಿದನೂರಿನಲ್ಲಿ ಯಾವ ಪಕ್ಷದ ಬಾವುಟ ಹಾರಲಿದೆ ಎನ್ನವುದನ್ನ ಕಾಯ್ದು ನೋಡಬೇಕಿದೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಲಿಸ್ಟ್‌

  • ಪಕ್ಷೇತರ ಅಭ್ಯರ್ಥಿ ಕೆ.ಹೆಚ್‌. ಪುಟ್ಟಸ್ವಾಮಿಗೌಡ - ಗೆಲುವು
  • ಜೆಡಿಎಸ್‌ - ಸಿ. ಆರ್. ನರಸಿಂಹ ಮೂರ್ತಿ (ಝಡ್‌ಪಿ)
  • ಬಿಎಸ್‌ಪಿ - ಪ್ರಕಾಶ್ ಬಾಬು ಕೆ. 
  • ಬಿಜೆಪಿ - ಡಾ. ಎಚ್. ಎಸ್. ಶಶಿಧರ ಕುಮಾರ್ 
  • ಕಾಂಗ್ರೆಸ್‌ - ಎನ್. ಎಚ್. ಶಿವಶಂಕರ ರೆಡ್ಡಿ
  • ಎಎಪಿ - ಸೈಯದ್ ನಾಸಿರ್ ಅಲಿ

3) ಶಿಡ್ಲಘಟ್ಟ  ವಿಧಾನಸಭಾ ಕ್ಷೇತ್ರ

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿ.ಎನ್‌.  ರವಿಕುಮಾರ್‌ ಅವರು ಗೆಲುವು ಸಾಧಿಸಿದ್ದಾರೆ.  2018ರಲ್ಲಿ 76240 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ವಿ ಮುನಿಯಪ್ಪ    ಅವರು ಜಯಗಳಿಸಿದ್ದರು. ಜೆಡಿಸ್‌ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಅಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿಎನ್ ರವಿಕುಮಾರ್    ಅವರು 66531    ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಬಿಜೆಪಿ ಅಭ್ಯರ್ಥಿ ಸುರೇಶ್‌ ಹೆಚ್ 3596 ಪಡೆದಿದ್ದರು. 

2013, 2018 ರಲ್ಲಿ ಸತತವಾಗಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ವಿ. ಮುನಿಯಪ್ಪ ಅವರ ವಿರುದ್ಧ 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಮತ್ತೇ ಬಿ.ಎನ್‌. ರವಿಕುಮಾರ್‌ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಪಕ್ಷದಿಂದ ಸೀಕಲ್‌ ರಾಮಚಂದ್ರಗೌಡ ಅವರು ಸ್ಪರ್ಧೆಗಿಳಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಕ್ಷೇತ್ರದಲ್ಲಿ 198200 ಮತದಾರಿದ್ದು, 99829 ಪುರುಷ ಮತ್ತು 98361 ಮಂದಿ ಮಹಿಳಾ ಮತದಾರರಾಗಿದ್ದಾರೆ.  

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಲಿಸ್ಟ್‌

  • ಜಿಡಿಎಸ್‌ : ಬಿ. ಎನ್. ರವಿ ಕುಮಾರ್ -ಗೆಲುವು
  • ಎಎಪಿ : ಬಿ. ಎಸ್. ಮೌಲಾಜಾನ್
  • ಕಾಂಗ್ರೆಸ್‌ : ಬಿ. ವಿ. ರಾಜೀವ್ ಗೌಡ
  • ಬಿಜೆಪಿ : ಸೀಕಲ್ ರಾಮಚಂದ್ರ ಗೌಡ

4) ಚಿಂತಾಮಣಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ ಅಭ್ಯರ್ಥಿ ಡಾ.ಎಂ.ಸಿ ಸುಧಾಕರ್‌ ಅವರು ಈ ಬಾರಿದ ಚುನಾವಣೆಯಲ್ಲ ಗೆಲುವು ಸಾಧಿಸಿದ್ದಾರೆ. ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಜೆ.ಕೆ. ಕೃಷ್ಣಾರೆಡ್ಡಿಯವರು ಗೆಲುವು ಸಾಧಿಸಿದ್ದರು. ಕೃಷ್ಣಾರೆಡ್ಡಿಯವರು 87753 ಮತಗಳನ್ನು ಪಡೆಯುವ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಡಾ. ಎಂ.ಸಿ.ಸುಧಾಕರ್‌ ವಿರುದ್ಧ 5673 ಮಗಳ ಅಂತರದಲ್ಲಿ ಜಯ ಗಳಿಸಿದ್ದರು. 2023ರ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಚಿಂತಾಮಣಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಇದೆ.

214446 ಮತದಾರರಿರುವ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 107098 ಮಂದಿ ಪುರುಷರು ಹಾಗು 107305 ಮಂದಿ ಮಹಿಳಾ ಮತದಾರರಾಗಿದ್ದಾರೆ. ಇನ್ನು ಈ ಬಾರಿ ಜೆಡಿಎಸ್ ಜಿ.ಕೆ. ಕೃಷ್ಣಾರೆಡ್ಡಿಯವರನ್ನು ಸೋಲಿಸಲು ಬಿಜೆಪಿ ಜಿ.ಎನ್‌ ವೇಣುಗೋಪಾಲ್‌ ಮತ್ತು ಕಾಂಗ್ರೆಸ್‌ ಡಾ. ಎಂ.ಸಿ. ಸುಧಾಕರ್‌ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಪಕ್ಷೇತರರಾಗಿ ನಿಂತು ಸ್ಪರ್ಧಿಸಿ ಸೋತಿದ್ದ ಡಾ. ಎಂ.ಸಿ. ಸುಧಾಕರ್‌ ಕಾಂಗ್ರೆಸ್‌ ಪಕ್ಷ ಮರಳಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದರು. 

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ

  • ಕಾಂಗ್ರೆಸ್‌ : ಡಾ. ಎಂ. ಸಿ. ಸುಧಾಕರ್ - ಗೆಲುವು
  • ಜೆಡಿಎಸ್‌ : ಜೆ. ಕೆ. ಕೃಷ್ಣಾ ರೆಡ್ಡಿ
  • ಬಿಎಸ್‌ಪಿ : ಪಿ. ವಿ. ನಾಗಪ್ಪ
  • ಎಎಪಿ : ಸಿ. ಬೈರೆಡ್ಡಿ
  • ಬಿಜೆಪಿ : ಜಿ. ಎನ್. ವೇಣುಗೋಪಾಲ್ (ಗೋಪಿ)

5) ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ

ಮತ್ತೇ ಎಸ್‌. ಎನ್ ಸುಬ್ಬಾರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಅವರು, 65710 ಮತಗಳನ್ನು ಪಡೆದು ಜಯಗಳಿಸಿದ್ದರು. ಸಿಪಿಎಂ ಪಕ್ಷದ ಅಭ್ಯರ್ಥಿ ಜಿ. ವಿ ಶ್ರೀರಾಮರೆಡ್ಡಿ     14,013 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. 38302 ಮತಗಳನ್ನು ಪಡೆದುಕೊಳ್ಳುವ ಮೂಲಕ ಡಾ. ಸಿ.ಆರ್ ಮನೋಹರ್ ಮೂರನೇ ಸ್ಥಾನ ಗಿಟ್ಟಿಸಿಕೊಂಡರು.

ಇನ್ನು ಈ ಬಾರಿಯ ಚುನಾವಣಾ ಕಣದಲ್ಲಿ ಎಸ್‌. ಎನ್‌. ಸುಬ್ಬಾರೆಡ್ಡಿಯವರನ್ನು ಕಾಂಗ್ರೆಸ್‌ ಮತ್ತೆ ಕಣಕ್ಕಿಳಿಸಿದೆ. ಸಿಪಿಎಂ ಪಕ್ಷದಿಂದ ಡಾ. ಎ. ಅನಿಲ್‌ ಕುಮಾರ್‌ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿ ಸಿ. ಮುನಿರಾಜು, ಎಎಪಿ ಪಕ್ಷದದಿಂದ ಡಾ. ಮಧು ಸೀತಪ್ಪ, ಬಿಎಸ್‌ಪಿ ಪಕ್ಷದಿಂದ ಟಿ. ಮುನಿಸ್ವಾಮಿ ಚುನಾವಣಾ ಅಖಾಡದಲ್ಲಿದ್ದಾರೆ. 197238 ಮತದಾರರಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ, 98197 ಪುರುಷರು ಹಾಗೂ 99017 ಮಹಿಳಾ ಮತದಾರರಾಗಿದ್ದಾರೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ಎಸ್. ಎನ್. ಸುಬ್ಬಾರೆಡ್ಡಿ - ಗೆಲುವು
  • ಸಿಪಿಎಂ : ಡಾ. ಎ. ಅನಿಲ್ ಕುಮಾರ್
  • ಎಎಪಿ : ಡಾ. ಮಧು ಸೀತಪ್ಪ
  • ಬಿಜೆಪಿ : ಸಿ. ಮುನಿರಾಜು
  • ಬಿಎಸ್‌ಪಿ : ಟಿ. ಮುನಿಸ್ವಾಮಿ (ಸಾಯಿ)

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News