ಸಚಿವ ಡಾ. ಅಶ್ವತ್ ನಾರಾಯಣಗೆ  ಸವಾಲ್: ಮಲ್ಲೇಶ್ವರಂ ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಖಚಿತ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನೆ ದಿನೆ ರಂಗೇರುತ್ತಿದೆ.‌ ನಾಮಪತ್ರ ಸಲ್ಲಿಕೆಯ ದಿನ ಕೊನೆ ಆಗ್ತಿರೋ ಕಾರಣ ಪ್ರತೀ ಕ್ಷೇತ್ರದಲ್ಲೂ ಆಡಳಿತ ಪಕ್ಣ ಸೇರಿ ಹಲವಾರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಅದರಂತೆ ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದಲ್ಲಿ ನಿನ್ನೆ ಬಿಜೆಪಿ ಬಲಿಷ್ಠ ನಾಯಕ ಸಚಿವ ಡಾ. ಅಶ್ವಥ್ ನಾರಾಯಣ ನಾಮ ಪತ್ರ ಸಲ್ಲಿಸಿದ್ರೆ, ಇತ್ತ ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿ ಸವಾಲೆಂಬತೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Written by - Manjunath Hosahalli | Edited by - Manjunath N | Last Updated : Apr 18, 2023, 08:43 PM IST
  • ಇದರ ನಡುವೆ ಇಂದು ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ಶೆಟ್ಟಿ ಎಂಬುವವರು ನಾಮಪತ್ರ ಸಲ್ಲಿಕೆ ಮಾಡಿದ್ದು,
  • ಈ ಬಾರಿ ಮಲ್ಲೇಶ್ವರ ಜನ ನನ್ನ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  • ಈ ಕ್ಷೇತ್ರದಲ್ಲಿ ಚುನಾಯಿತರಾಗಿ ಆಡಳಿತ ಮಾಡಲು ಜನ ಅವಕಾಶ ಕೊಟ್ರು,
ಸಚಿವ ಡಾ. ಅಶ್ವತ್ ನಾರಾಯಣಗೆ  ಸವಾಲ್: ಮಲ್ಲೇಶ್ವರಂ ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಖಚಿತ title=

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನೆ ದಿನೆ ರಂಗೇರುತ್ತಿದೆ.‌ ನಾಮಪತ್ರ ಸಲ್ಲಿಕೆಯ ದಿನ ಕೊನೆ ಆಗ್ತಿರೋ ಕಾರಣ ಪ್ರತೀ ಕ್ಷೇತ್ರದಲ್ಲೂ ಆಡಳಿತ ಪಕ್ಣ ಸೇರಿ ಹಲವಾರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಅದರಂತೆ ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದಲ್ಲಿ ನಿನ್ನೆ ಬಿಜೆಪಿ ಬಲಿಷ್ಠ ನಾಯಕ ಸಚಿವ ಡಾ. ಅಶ್ವಥ್ ನಾರಾಯಣ ನಾಮ ಪತ್ರ ಸಲ್ಲಿಸಿದ್ರೆ, ಇತ್ತ ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿ ಸವಾಲೆಂಬತೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: Soundarya Death Anniversary: ಅಗಲಿ 19 ವರ್ಷವಾದರೂ ಮಾಸದ ʻಸೌಂದರ್ಯʼ ನೆನಪು.. ಇಂದಿಗೂ ಜನಮಾನಸದಲ್ಲಿ ಅಜಾರಮರ!

ಇದರ ನಡುವೆ ಇಂದು ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ಶೆಟ್ಟಿ ಎಂಬುವವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ಬಾರಿ ಮಲ್ಲೇಶ್ವರ ಜನ ನನ್ನ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಚುನಾಯಿತರಾಗಿ ಆಡಳಿತ ಮಾಡಲು ಜನ ಅವಕಾಶ ಕೊಟ್ರು, ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕುಂಟಿತ ಆಗಿವೆ ಎಂದು ಅಶ್ವಥ್ ನಾರಾಯಣ ರವರ ಮೇಲೆ ಟೀಕೆ ಮಾಡಿದ್ರು. ಹೀಗಾಗಿ ಜನ ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಮತ್ತು ನರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಜನರ ನಿರೀಕ್ಷೆಯಂತೆ ನನ್ನ ಮೇಲೆ ಒಲವು ಹೆಚ್ಚಿದೆ ಎಂದರು.

ಇದನ್ನೂ ಓದಿ: ಪಕ್ಷದಲ್ಲಿ ಕಡೆಗಣಿಸುತ್ತಿರುವುದಕ್ಕೆ ಮಾರ್ಮಿಕ ಒಗಟಿನ ಪೋಸ್ಟ್ ಮಾಡಿದ ತೇಜಸ್ವಿನಿ ಅನಂತ್ ಕುಮಾರ್! 

ನಾನು ಕೂಡ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಲು ಪಣತೊಟ್ಟಿದ್ದೇನೆ ಎಂದರು. ಅಲ್ಲದೇ ಮಲ್ಲೇಶ್ವರ ಕ್ಷೇತ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನಾನು ಗೆಲುವು ಸಾಧಿಸುತ್ತೇನೆ ಎನ್ನುವ ಮೂಲಕ ಸಚಿವ ಅಶ್ವಥ್ ನಾರಾಯಣಗೆ ಸವಾಲ್ ಹಾಕಿದ್ದಾರೆ. ಈ ಮೂಲಕ ಮಲ್ಲೇಶ್ವರ ಕ್ಷೇತ್ರವನ್ನ ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡುತ್ತೇನೆ. ಜನರ ನಾಡಿ‌ಮಿಡಿತದಂತೆ ನಾನು ದುಡಿತುತ್ತೇನೆ ಎಂದು ನಾಮಪತ್ರ ಸಲ್ಲಿಕೆ ಬಳಿಕ ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ಶೆಟ್ಟಿ ತಮ್ಮ ಆಶಯವನ್ನ ವ್ಯಕ್ತಪಡಿಸಿದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News