ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬಿರುಸಿನ ಪ್ರಚಾರ : ಭವ್ಯ ನರಸಿಂಹಮೂರ್ತಿ ಸಾಥ್‌

ಇಂದು ದಯಾನಂದ ನಗರ ವಾರ್ಡ್‌ನಲ್ಲಿ ನಡೆದ ಕರುಮಾರಿಯಮ್ಮನ ಜಾತ್ರೆ ಮಹೋತ್ಸವದಲ್ಲಿ ಪುಟ್ಟಣ್ಣ ಭಾಗಿಯಾಗಿದ್ದರು. ದೇವಿಯ ದರ್ಶನ ಪಡೆದು ಮತ ಮತಯಾಚಿಸಿದರು. ಈ ವೇಳೆ ನೂರಾರು ಕಾರ್ಯಕರ್ತರು, ಸ್ಥಳೀಯರು ಪುಟ್ಟಣ್ಣನಿಗೆ ಸಾಥ್‌ ನೀಡಿದರು.

Written by - Bhavya Sunil Bangera | Edited by - Krishna N K | Last Updated : May 6, 2023, 02:04 PM IST
  • ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬಿರುಸಿನ ಪ್ರಚಾರ.
  • ಪುಟ್ಟಣ್ಣಗೆ ಭವ್ಯ ನರಸಿಂಹಮೂರ್ತಿ ಸಾಥ್‌.
  • ಈ ಹಿಂದೆ ಕ್ಷೇತ್ರದಿಂದ ಭವ್ಯ ನರಸಿಂಹಮೂರ್ತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬಿರುಸಿನ ಪ್ರಚಾರ : ಭವ್ಯ ನರಸಿಂಹಮೂರ್ತಿ ಸಾಥ್‌ title=

ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ಹಿಂದೆ ಕ್ಷೇತ್ರದಿಂದ ಭವ್ಯ ನರಸಿಂಹಮೂರ್ತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪುಟ್ಟಣ್ಣಗೆ ಟಿಕೆಟ್ ಸಿಕ್ಕಿದ ಬಳಿಕ ಅವರ ನಡೆ-ನುಡಿ ಕೆಲಸಗಳನ್ನು ಮೆಚ್ಚಿದ ಭವ್ಯ ನರಸಿಂಹಮೂರ್ತಿ ಇದೀಗ ಪುಟ್ಟಣ್ಣಗೆ ಸಾತ್ ಕೊಟ್ಟಿದ್ದಾರೆ.

ಅಲ್ಲದೆ, ಭವ್ಯ ನರಸಿಂಹಮೂರ್ತಿಯವರು ಕ್ಷೇತ್ರದಲ್ಲಿ ಈ ಬಾರಿ ಶತಾಯಗತಾಯ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪುಟ್ಟಣ್ಣ ಸರ್ವ ಪ್ರಯತ್ನವನ್ನು ಮಾಡ್ತಿದ್ದಾರೆ. ಕ್ಷೇತ್ರದ ಜನರು ಕೂಡ ಪುಟ್ಟಣ್ಣಗೆ ಬೆಂಬಲ ಸೂಚಿಸಿ ನಾವು ನಿಮ್ಮೊಂದಿಗೆ ಇದ್ದೇವೆ ಅಂತ ಭರವಸೆ ನೀಡಿದ್ದಾರೆ. ಈ ವೇಳೆ ಇಂದು ದಯಾನಂದ ನಗರ ವಾರ್ಡ್‌ನಲ್ಲಿ ನಡೆದ ಕರುಮಾರಿಯಮ್ಮನ ಜಾತ್ರೆ ಮಹೋತ್ಸವದಲ್ಲಿ ಪುಟ್ಟಣ್ಣ ಭಾಗಿಯಾಗಿದ್ದರು. ದೇವಿಯ ದರ್ಶನ ಪಡೆದು ಮತ ಮತಯಾಚಿಸಿದರು. ಈ ವೇಳೆ ನೂರಾರು ಕಾರ್ಯಕರ್ತರು, ಸ್ಥಳೀಯರು ಪುಟ್ಟಣ್ಣನಿಗೆ ಸಾಥ್‌ ನೀಡಿದರು.

ಇದನ್ನೂ ಓದಿ: Mallikarjuna Kharge: ಮಲ್ಲಿಕಾರ್ಜುನ ಖರ್ಗೆ ಹತ್ಯೆ ಕುರಿತು ಆಡಿಯೋ: ಸತ್ಯಾಸತ್ಯತೆಯ ಬಗ್ಗೆ ತನಿಖೆ - ಬೊಮ್ಮಾಯಿ

ಇನ್ನೂ ಪುಟ್ಟಣ್ಣ ಪ್ರಚಾರಕ್ಕೆ ಹೋದ ಕಡೆಯಲ್ಲ ಅಭಿಮಾನಿಗಳು ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಇಂದು ಕೂಡ ದಯಾನಂದ ನಗರದ ಕರುಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್ ನೀಡಿ ಪುಟ್ಟಣ್ಣ ಅವರು ಖುಷಿಪಟ್ಟರು. ಅದೇ ವೇಳೆ ವಾರ್ಡ್‌ನ ಜನರು ತಮ್ಮ ಕುಂದು ಕೊರತೆಗಳನ್ನು ಪುಟ್ಟಣ್ಣನವರ ಬಳಿ ಹಂಚಿಕೊಂಡರು. ಜನಗಳ ಕಷ್ಟಕಾರ್ಪಣ್ಯಕ್ಕೆ ಮರುಗಿದ ಪುಟ್ಟಣ್ಣ ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆಯ ಮಾತುಗಳನ್ನಾಡಿದರು.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News