ಕಮಲ ಬಿಟ್ಟು ಕೈ ಹಿಡಿಯಲಿರುವ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ... ಶಾಸಕ ಮಹೇಶ್ ಗೆ ನೀಡ್ತಾರಾ ಟಕ್ಕರ್!

ಕೊಳ್ಳೇಗಾಲ ಕ್ಷೇತ್ರದ ಶಾಸಕ ಮಹೇಶ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಬಹುತೇಕ ಪಕ್ಕಾ ಆಗಿದ್ದು ಮತ್ತೊಂದು ಕಡೆ ಕಾಂಗ್ರೆಸ್ ನಲ್ಲಿ ಮೂವರು ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವ ಮಾಜಿ ಶಾಸಕರು ಒಂದಾದರೇ ಸ್ಪರ್ಧೆ ಬಿರುಸಾಗಲಿದೆ ಎಂಬ ಚರ್ಚೆ ಸದ್ಯ ಶುರುವಾಗಿದೆ.   

Written by - Yashaswini V | Last Updated : Mar 6, 2023, 01:34 PM IST
  • ಶಾಸಕ ಮಹೇಶ್ ಬಿಜೆಪಿ ಗೆ ಸೇರ್ಪಡೆಯಾಗುವ ಮುನ್ನ ಜಿ.ಎನ್.ನಂಜುಂಡಸ್ವಾಮಿ ಮಾತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
  • ಆದರೆ, ಶಾಸಕ ಮಹೇಶ್ ಸೇರ್ಪಡೆಗೊಂಡ ಬಳಿಕ ಪರಿಸ್ಥಿತಿ ಬದಲಾಯಿತು.
  • ಹಾಲಿ ಶಾಸಕರಿಗೆ ಟಿಕೆಟ್ ಎನ್ನುವ ಮೂಲಕ ಟಿಕೆಟ್ ಭರವಸೆ ಜಿ.ಎನ್.ನಂಜುಂಡಸ್ವಾಮಿ ಅವರಿಗೆ ಇಲ್ಲದಂತಾಯಿತು.
ಕಮಲ ಬಿಟ್ಟು ಕೈ ಹಿಡಿಯಲಿರುವ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ... ಶಾಸಕ ಮಹೇಶ್ ಗೆ ನೀಡ್ತಾರಾ ಟಕ್ಕರ್! title=

ಚಾಮರಾಜನಗರ: ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಪ್ರಭಾವಿ ರಾಜಕಾರಣಿಯಾದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆಂದು ಘೋಷಿಸಿದರು.

ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ , ಪಕ್ಷ ಕಷ್ಟಕಾಲದಲ್ಲಿದ್ದಾಗ ಪಕ್ಷ ಸಂಘಟಿಸಿ, ಸೋಲುತ್ತೇವೆ ಎಂದು ಗೊತ್ತಿದ್ದರೂ ಶಕ್ತಿ ಮೀರಿ ಹೋರಾಡಿ ಚುನಾವಣೆಯಲ್ಲಿ ನಿಂತಿದ್ದೇನೆ. ಆದರೆ ಇತ್ತೀಚೆಗೆ ಬಿಜೆಪಿ ನಡೆದುಕೊಳ್ಳುವ ರೀತಿಯಿಂದ ಬೇಸತ್ತು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದು ಮಂಗಳವಾರ ಕಾಂಗ್ರೆಸ್ ಗೆ ಸೇರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಹಿಂದಿನ ರಾತ್ರಿ ಕರೆ ಮಾಡಿ‌ ತಿಳಿಸುತ್ತಾರೆ, ಯಾವುದಕ್ಕೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ನನಗೆ, ನನ್ನ ವಿಶ್ವಾಸಿಗಳಿಗೆ ತೀರಾ ಘಾಸಿ ಉಂಟಾಗಿದೆ, ಮುಜುಗರ ಅನುಭವಿಸಿದ್ದೇವೆ. ಹಿಂದಿನಿಂದಲೂ ರಾಷ್ಟ್ರೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿರುವುದರಿಂದ ಬೆಂಬಲಿಗರ ಅಭಿಪ್ರಾಯದಂತೆ ಮಂಗಳವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಮರಳಿ ಕಾಂಗ್ರೆಸ್ ಗೆ ಸೇರುತ್ತಿದ್ದೇನೆ ಎಂದು‌ ತಿಳಿಸಿದರು.

ಶಾಸಕ ಮಹೇಶ್ ಬಿಜೆಪಿ ಗೆ ಸೇರ್ಪಡೆಯಾಗುವ ಮುನ್ನ ಜಿ.ಎನ್.ನಂಜುಂಡಸ್ವಾಮಿ ಮಾತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಶಾಸಕ ಮಹೇಶ್ ಸೇರ್ಪಡೆಗೊಂಡ ಬಳಿಕ ಪರಿಸ್ಥಿತಿ ಬದಲಾಯಿತು. ಹಾಲಿ ಶಾಸಕರಿಗೆ ಟಿಕೆಟ್ ಎನ್ನುವ ಮೂಲಕ ಟಿಕೆಟ್ ಭರವಸೆ ಜಿ.ಎನ್.ನಂಜುಂಡಸ್ವಾಮಿ ಅವರಿಗೆ ಇಲ್ಲದಂತಾಯಿತು.

ಇದನ್ನೂ ಓದಿ- Janardhana Reddy: ನಾವು 30 ಕ್ಷೇತ್ರಗಳಲ್ಲಿ ಗೆಲುತ್ತೇವೆ : ಜನಾರ್ದನ ರೆಡ್ಡಿ

ಶಾಸಕ ಮಹೇಶ್ ವಿರುದ್ದ ತೊಡೆ ತಟ್ಟಲಿದ್ದಾರೆ ನಾಲ್ವರು ಮಾಜಿ ಶಾಸಕರು: 
ಕೊಳ್ಳೇಗಾಲ ಕ್ಷೇತ್ರದ ಶಾಸಕ ಮಹೇಶ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಬಹುತೇಕ ಪಕ್ಕಾ ಆಗಿದ್ದು ಮತ್ತೊಂದು ಕಡೆ ಕಾಂಗ್ರೆಸ್ ನಲ್ಲಿ ಮೂವರು ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವ ಮಾಜಿ ಶಾಸಕರು ಒಂದಾದರೇ ಸ್ಪರ್ಧೆ ಬಿರುಸಾಗಲಿದೆ ಎಂಬ ಚರ್ಚೆ ಸದ್ಯ ಶುರುವಾಗಿದೆ. 

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ‌ ಜಿ.ಎನ್. ನಂಜುಂಡಸ್ವಾಮಿ ಅವರು ಕಾಂಗ್ರೆಸ್ ಸೇರುತ್ತಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಹಿರಂಗವಾಗೇ ಹೇಳಿಕೆ ಕೊಟ್ಟಿದ್ದರು. ಅದರಂತೆ, ಬಿಜೆಪಿ ಕಾರ್ಯಕ್ರಮಗಳಿಗೆ ಜಿಎನ್ಎನ್ ಗೈರಾಗಿ ಅಂತರ ಕಾಯ್ದುಕೊಂಡಿದ್ದು ಸ್ಪಷ್ಟವಾಗಿತ್ತು. ಈಗ ಅವರೇ ಕಾಂಗ್ರೆಸ್ ಗೆ ಸೇರುತ್ತಿದ್ದೇನೆಂದು ಹೇಳುವ ಮೂಲಕ ಕಮಲ ತೊರೆದಿರುವುದನ್ನು  ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್ ನಲ್ಲಿ ಈಗಾಗಲೇ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದು ಎಲ್ಲರೂ ಮಾಜಿ ಶಾಸಕರುಗಳಾಗಿದ್ದಾರೆ. ಇವರ ಸಾಲಿಗೆ ಜಿಎನ್ ಕೂಡ ಸೇರಿಕೊಂಡರೇ ಶಾಸಕ ಮಹೇಶ್ ಮಣಿಸಲು ನಾಲ್ವರು ಮಾಜಿ ಶಾಕಸರು ಸೇರಿಕೊಂಡಂತಾಗಲಿದ್ದು ಚುನಾವಣಾ ಕಣ ರಣರಂಗವಾಗಲಿದೆ. 

ಇದನ್ನೂ ಓದಿ- ಕೇವಲ 700 ಗ್ರಾಂ ಮಗುವಿಗೆ ಮರುಜನ್ಮ ನೀಡಿದ ಗದಗ ಜಿಮ್ಸ್ ವೈದ್ಯರು

ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಬಾಲರಾಜು ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷ ಸಂಘಟಿಸುವ ಜೊತೆಗೆ ತಮ್ಮ ಮತ ಬ್ಯಾಂಕ್‌ ನ್ನು ಹೆಚ್ಚಿಸಿಕೊಂಡಿದ್ದಾರೆ. ಶಾಸಕ ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುವ ಮುನ್ನ ಜಿಎನ್ ಕೂಡ ಪಕ್ಷ ಸಂಘಟಿಸಿ ತಮ್ಮ ಮತ ಬ್ಯಾಂಕ್ ನ್ನು ಭದ್ರಪಡಿಸಿಕೊಂಡಿದ್ದರು. ಈಗ ನಾಲ್ವರು ಮಾಜಿ ಶಾಸಕರು ಒಂದಾಗಿ ಒಳೇಟು ಕೊಡದೇ ಮತ ಭದ್ರವಾದರೇ ಕಾಂಗ್ರೆಸ್ ಗೆ ಇದು ಪ್ಲಸ್ ಆಗಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

ಬಿಜೆಪಿ ಬುಟ್ಟಿಗೆ  ಕೈ ಹಾಕಿರುವ ಪುಟ್ಟಸ್ವಾಮಿ: ಇನ್ನು, ಪೊಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಜೆಡಿಎಸ್ ಸೇರ್ಪಡೆಗೊಂಡಿರುವ, ಕೊಳ್ಳೇಗಾಲದ ಜೆಡಿಎಸ್ ನ ಸಂಭಾವ್ಯ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ಎಲ್ಲಾ ಪಕ್ಷಗಳಿಂದ ಮತ ಕೀಳುವ ವಾತಾವರಣ ಇದ್ದು ಹೆಚ್ಚು ಬಿಜೆಪಿ ಬುಟ್ಟಿಯಿಂದಲೇ ಮತಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ನಾಲ್ವರು ಮಾಜಿ ಶಾಸಕರು ಒಂದೆಡೆ, ಮಾಜಿ ಪೊಲೀಸ್ ಮತ್ತೊಂದು ಕಡೆ ತಕ್ಕಮಟ್ಟಿಗಿನ ಮತಬ್ಯಾಂಕ್ ಹೊಂದಿರುವ ಬಿಎಸ್ಪಿ ಇನ್ನೊಂದೆಡೆ ಇರುವುದು ಬಿಜೆಪಿಗೆ ಬಿಸಿ ತುಪ್ಪವಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News