ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಮುಂದಿರುವ ಆಯ್ಕೆ ಸವಾಲುಗಳೇನು?

ಈ ಬಾರಿ ಅತಂತ್ರ ವಿಧಾನ ಸಭೆ ರಚನೆಯಾದರೆ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ. ಹೀಗಾದರು ಕೂಡಾ ಜೆಡಿಎಸ್ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.  ಹಾಗಿದ್ದರೆ ಜೆಡಿಎಸ್ ಮುಂದಿರುವ ಮಾರ್ಗಗಳು ಯಾವುವು ನೋಡೋಣ.

Written by - Prashobh Devanahalli | Edited by - Ranjitha R K | Last Updated : May 11, 2023, 11:48 AM IST
  • ಮತ್ತೆ ಕಿಂಗ್ ಮೇಕರ್ ಆಗಲಿದೆ ಜೆಡಿಎಸ್
  • ಕಾಂಗ್ರೆಸ್ ಜೊತೆ ಹೋದರೆ ಜೆಡಿಎಸ್ ಲಾಭ ಏನು?
  • ಕಾಂಗ್ರೆಸ್-ಬಿಜೆಪಿ ಇಬ್ಬರಲ್ಲಿ ಯಾರು ಹಿತವರು?
ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಮುಂದಿರುವ ಆಯ್ಕೆ ಸವಾಲುಗಳೇನು? title=

ಬೆಂಗಳೂರು : ಮತದಾನ ಬಳಿಕ ನಡೆದ ನಂತರದ ಸರ್ವೇ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಅಥವಾ ಅತಂತ್ರ ವಿಧಾನ ಸಭೆ ಆಗಲಿದೆ ಎಂಬ ಅಭಿಪ್ರಾಯ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ ಎಂಬ ಸಂತಸ ಜೆಡಿಎಸ್ ಪಾಳಯದಲ್ಲಿ ಒಂದು ಕಡೆ ಆದರೆ ಮತ್ತೊಂದು ಕಡೆ ದಳಪತಿಗಳ ಮುಂದೆ ಅನೇಕ ಸವಾಲುಗಳು ಕೂಡಾ ಎದುರಾಗಿವೆ. 

ಸರ್ಕಾರ ರಚನೆಯಲ್ಲಿ ಜೆಡಿ ಎಸ್ ಕಿಂಗ್ ಮೇಕರ್:
ಒಂದೊಮ್ಮೆ ಜೆಡಿಎಸ್ ಗೆ ಮುಖ್ಯಮಂತ್ರಿ ಆಫರ್ ನೀಡಿದರೂ ದಳಪತಿಗಳಿಗೆ ಪಕ್ಷದ ಭವಿಷ್ಯದ್ದೇ ಚಿಂತೆ ಆಗಿದೆ. ಸರ್ಕಾರ ರಚಿಸಲು  ಜೆಡಿಎಸ್ ಗೆ  ಕಾಂಗ್ರೆಸ್ ಗಿಂತ ಬಿಜೆಪಿ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದಲ್ಲದೆ ಜಾತ್ಯಾತೀತ ಅಸ್ತ್ರದ ಮೇಲೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರೂ ಭವಿಷ್ಯದಲ್ಲಿ "ಆಪರೇಷನ್" ಖಚಿತ ಎನ್ನುವುದು ಈ ಹಿಂದೆ ನಡೆದ ಘಟನೆಗಳೇ  ಸಾಕ್ಷಿ ಆಗಿದೆ.

ಇದನ್ನೂ ಓದಿ : CM  Bommai: ಮತದಾನೋತ್ತರ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ- ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಜೊತೆ ಹೋದರೆ  ಜೆಡಿಎಸ್ ಲಾಭ ಏನು? :
-ಜಾತ್ಯಾತೀತ ನಿಲುವಿನಲ್ಲಿ ಸ್ಪಷ್ಟತೆ
-ಬಿಜೆಪಿ ಬಿ ಟೀಮ್ ಅಲ್ಲ ಎಂಬ ಸಂದೇಶ
-ದೆಹಲಿ ಕೈ ನಾಯಕರ ಸಹಕಾರ ಅಭಾದಿತ
-ದೇವೇಗೌಡರು-ಸೋನಿಯಾರ ನಿರ್ಧರಿತ ಸರ್ಕಾರ ಎಂಬ ಸಂದೇಶ
ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಿಗಲಿದೆ ಅಧಿಕಾರ

ಜೆಡಿಎಸ್  ಜೊತೆ ಕಾಂಗ್ರೆಸ್  ಹೋದರೆ ಎದುರಾಗುವ ಸಂಕಷ್ಟ? :
-ಸರ್ಕಾರಕ್ಕೆ ಕಾಂಗ್ರೆಸ್ ನಾಯಕರ ಅಸಹಕಾರ
-ಮೈತ್ರಿ ಸರ್ಕಾರಕ್ಕೆ ಬಿಜೆಪಿ ಆಪರೇಷನ್ ಭೀತಿ 
-ಪ್ರಣಾಳಿಕೆಯ ಭರವಸೆ ಈಡೇರಿಕೆ ತಿಕ್ಕಾಟ
-ಕಳೆದ ಬಾರಿ ಕುಮಾರಸ್ವಾಮಿಗೆ ಸಿಎಂ ಸ್ಥಾನ ನೀಡಿದ್ದು, ಮತ್ತೆ ನೀಡುವ ಬಗ್ಗೆ ಕೈ ನಾಯಕರ ತಿರಸ್ಕಾರ ಭಾವನೆ
-ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರ ಕಡೆಗಣನೆ ಭೀತಿ 
-ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಿಡಿತ ತಪ್ಪುವ ಆತಂಕ

ಇದನ್ನೂ ಓದಿ : ಪಿಯು ವಿದ್ಯಾರ್ಥಿಗಳೇ ಗಮನಿಸಿ ! KCET ನೋಂದಣಿ ವಿಂಡೋ ಮತ್ತೆ ಓಪನ್ : ಮೇ 13 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ

ಬಿಜೆಪಿ ಜೊತೆ ಜೆಡಿಎಸ್ ಹೋದರೆ ಏನಾಗಲಿದೆ? :
-ಬಿಜೆಪಿ ಬಿ ಟೀಮ್ ಜೆಡಿ ಎಸ್ ಎಂಬ ಅಪವಾದ
-ಜೆಡಿಎಸ್ ಗೆ ಮುಖ್ಯ ಮಂತ್ರಿ ಸ್ಥಾನ ಡೌಟು?
-ಮೈತ್ರಿ ಸರ್ಕಾರ ಅಲ್ಪ ಸಂಖ್ಯಾತರ ವಿರೋಧಿ ಪಟ್ಟ
-ಜೆಡಿ ಎಸ್ ನಂಬಿಕೆಗೆ ಅನರ್ಹ ಎಂಬ ವಾದ ಕಾಂಗ್ರೆಸ್ ನವರದ್ದಾಗಲಿದೆ   
-ಬಿಜೆಪಿ ಜೊತೆ ಸರ್ಕಾರ ಕ್ಕೆ ಸಿಗುತ್ತಾ ಗೌಡರ ಅಭಯ? 
-ಬಿಜೆಪಿ ಜೊತೆ ದಳಪತಿ ಹೋದರೆ ಆಗುತ್ತಾ ಸರ್ವ ಜನಾಂಗದ ಶಾಂತಿಯ ತೋಟ?
-ಬಿಜೆಪಿ ತೊರೆದು ಜೆಡಿ ಎಸ್ ಸೇರಿರುವ ನಾಯಕರ ಭವಿಷ್ಯದ ಚಿಂತೆ
-ಮೈತ್ರಿ ಸರ್ಕಾರ ರಚನೆಯ ಜೊತೆಗೆ ಲೋಕಸಭಾ ಚುನಾವಣೆ ತಯಾರಿ
-ಜೆಡಿ ಎಸ್ ಕಿಂಗ್ ಮೇಕರ್ ಆದ್ರೂ ತಪ್ಪದ ಸೈದ್ದಾಂತಿಕ ತಿಕ್ಕಾಟ

ಕಾಂಗ್ರೆಸ್-ಬಿಜೆಪಿ ಇಬ್ಬರಲ್ಲಿ ಯಾರು ಹಿತವರು? :
ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಗೂ ಸಾಕಷ್ಟು ಸವಾಲು ಎದುರಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಲು ಸಜ್ಜಾಗಿದ್ದಾರೆ.ಮೂರು ದಿನಗಳ ಕಾಲ ಕುಮಾರಸ್ವಾಮಿ ಸಿಂಗಾಪುರದಲ್ಲಿ ವಿಶ್ರಾಂತಿ ಪಡೆದು  ಮರಳಲಿದ್ದಾರೆ. 

ಇದನ್ನೂ ಓದಿ : Rain Update: ರಾಜ್ಯದ ವಿವಿಧೆಡೆ ಮುಂದುವರಿದ ಮಿಂಚು-ಗುಡುಗು ಸಹಿತ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ! ಯಾವ್ಯಾವ ಜಿಲ್ಲೆಗಳಿವೆ ನೋಡಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News