Mysore Assembly Election Result 2023: ಮೈಸೂರಿನಲ್ಲಿ 'ಕೈ'ಗೆ ಸಿಂಹಪಾಲು, ಜೆಡಿಎಸ್ 2, ಬಿಜೆಪಿ 1 ಸ್ಥಾನಕ್ಕೆ ತೃಪ್ತಿ

Mysore Vidhan Aabha Chunavane Result 2023:  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಭದ್ರಕೋಟೆ ಎನಿಸಿಕೊಂಡಿರುವ ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವ ಬಿಜೆಪಿ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆಹಾಕಿದ್ದು, ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.

Written by - Yashaswini V | Last Updated : May 13, 2023, 03:30 PM IST
  • ವರುಣಾ ಕ್ಷೇತ್ರದಲ್ಲೂ ವಿ. ಸೋಮಣ್ಣಗೆ ಹಿನ್ನಡೆ
  • ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ 8354 ಮುನ್ನಡೆ
Mysore Assembly Election Result 2023: ಮೈಸೂರಿನಲ್ಲಿ 'ಕೈ'ಗೆ ಸಿಂಹಪಾಲು, ಜೆಡಿಎಸ್ 2, ಬಿಜೆಪಿ 1 ಸ್ಥಾನಕ್ಕೆ ತೃಪ್ತಿ  title=
Mysore District Assembly Election Result 2023

Mysore Karnataka Assembly Election Result 2023 : ಹಿಂದಿನ ಎಲ್ಲಾ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರು ವಿಭಿನ್ನ ಚುನಾವಣಾ ಹೋರಾಟಕ್ಕೆ ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 11 ವರುಣಾ, ಟಿ. ನರಸೀಪುರ, ಪಿರಿಯಾಪಟ್ಟಣ, ಕೃಷ್ಣರಾಜನಗರ (ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ), ಹುಣಸೂರು, ಹೆಗ್ಗಡದೇವನ ಕೋಟೆ (ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರ), ನಂಜನಗೂಡು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಿದ್ದು  ಅವುಗಳಲ್ಲಿ ಕಾಂಗ್ರೆಸ್ 11 ಸ್ಥಾನವನ್ನು ಗಳಿಸುವ ಮೂಲಕ ಮತ್ತೆ ಜನರ ಮನ ಗೆದ್ದಿದೆ. ಇದೇ ವೇಳೆ ಜೆಡಿಎಸ್ 2 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಮೈಸೂರಿನ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಗೆಲುವು ಎಂಬ ವಿವರ ಕೆಳಕಂಡಂತಿದೆ. 

ಮೈಸೂರು ಜಿಲ್ಲೆಯಲ್ಲಿ ಗೆದ್ದವರು

ಚಾಮರಾಜ -  ಹರೀಶ್ ಗೌಡ, ಕಾಂಗ್ರೆಸ್ ‌

ಕೆ.ಆರ್.ಕ್ಷೇತ್ರ - ಟಿ.ಎಸ್. ಶ್ರೀವತ್ಸ, ಬಿಜೆಪಿ 

ನರಸಿಂಹರಾಜ - ತನ್ವೀರ್ ಸೇಠ್, ಕಾಂಗ್ರೆಸ್.

ಚಾಮುಂಡೇಶ್ವರಿ - ಜಿ ಟಿ ದೇವೇಗೌಡ, ಜೆಡಿಎಸ್.

ಪಿರಿಯಾಪಟ್ಟಣ - ಕೆ ವೆಂಕಟೇಶ್, ಕಾಂಗ್ರೆಸ್.

ಟಿ ನರಸೀಪುರ -  ಡಾ ಹೆಚ್ ಸಿ ಮಹದೇವಪ್ಪ, ಕಾಂಗ್ರೆಸ್.

ನಂಜನಗೂಡು - ದರ್ಶನ್ ಧ್ರುವನಾರಾಯಣ್, ಕಾಂಗ್ರೆಸ್.

ಹೆಚ್ ಡಿ‌ ಕೋಟೆ - ಅನಿಲ್ ಚಿಕ್ಕಮಾದು, ಕಾಂಗ್ರೆಸ್.

ಕೆ ಆರ್ ನಗರ - ಡಿ ರವಿಶಂಕರ್, ಕಾಂಗ್ರೆಸ್

ವರುಣ - ಸಿದ್ದರಾಮಯ್ಯ, ಕಾಂಗ್ರೆಸ್.

ಹುಣಸೂರು - ಜಿ ಡಿ ಹರೀಶ್ ಗೌಡ, ಜೆಡಿಎಸ್

ಇಂದು ಮತ ಎಣಿಕೆ ಹಿನ್ನೆಲೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 725 ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಇಂದು ಬೆಳಿಗ್ಗೆ 7:30ರ ಬಳಿಕ ಮತಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಬೆಳಿಗ್ಗೆ 8 ರಿಂದ 8.30 ರವರೆಗೆ  ಅರ್ಧ ಗಂಟೆ ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬೆಳಿಗ್ಗೆ 8.30 ಕ್ಕೆ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ. 

ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಜಾರಿಗೊಳಿಸಲಾಗಿದೆ. ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ.  

ಮತ ಎಣಿಕಾ ಕೇಂದ್ರ ಒಳಗೆ ಮತ್ತು ಹೊರಗೆ ಸೇರಿ ಒಟ್ಟು 400 ಪೊಲೀಸರನ್ನು ನಿಯೋಜನೆ.
ಇದರ ಜೊತೆಗೆ ಸಿಐಎಸ್ಎಫ್ ತುಕಡಿ ಹಾಗೂ ಕೆ ಎಸ್ ಆರ್ ಪಿ ತುಕಡಿಗಳನ್ನು ಮತ ಎಣಿಕಾ ಕೇಂದ್ರದ ಬಳಿ ನಿಯೋಜನೆಗೊಳಿಸಲಾಗಿದೆ. 

ಮೈಸೂರು ಜಿಲ್ಲೆ ವರುಣಾ, ಟಿ. ನರಸೀಪುರ, ಪಿರಿಯಾಪಟ್ಟಣ, ಕೃಷ್ಣರಾಜನಗರ (ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ), ಹುಣಸೂರು, ಹೆಗ್ಗಡದೇವನ ಕೋಟೆ (ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರ), ನಂಜನಗೂಡು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ಇನ್ನೂ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ಇದೆ. 

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಭದ್ರಕೋಟೆ ಎನಿಸಿಕೊಂಡಿರುವ ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವ ಬಿಜೆಪಿ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆಹಾಕಿದ್ದು, ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. 

ಇದಲ್ಲದೆ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಸ್ವಾತಂತ್ರ್ಯವಾಗಿ ಸರ್ಕಾರ ರಚಿಸಲು ಕನಸು ಕಾಣುತ್ತಿರುವ ಜೆಡಿಎಸ್ ಕೂಡ ಮೈಸೂರು ಭಾಗದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿವೆ.

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಜಯಸಾಧಿಸಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಜನತೆ ಯಾವ ಪಕ್ಷಕ್ಕೆ ಒಲವು ತೋರಿದ್ದಾರೆ. ಈ ಬಾರಿ ಯಾರಿಗೆ ವಿಜಯಮಾಲೆ ಎಂದು ತಿಳಿಯೋಣ... 

* ವರುಣ ವಿಧಾನಸಭಾ ಕ್ಷೇತ್ರ (Varuna Assembly Constitueny): 
ವರುಣಾ ವಿಧಾನಸಭಾ ಕ್ಷೇತ್ರ 2018ರ ಫಲಿತಾಂಶ:
ಯತೀಂದ್ರ ಸಿದ್ದರಾಮಯ್ಯ- (ಕಾಂಗ್ರೆಸ್ ಗೆಲುವು)-96,435.
ಟಿ.ಬಸವರಾಜು (ಬಿಜೆಪಿ) -37,819.
ಅಭಿಷೇಕ್.ಎಸ್.ಮನೇಗರ್ (ಜೆಡಿಎಸ್)-28,123.

ಆಗಿನ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು 2018ರ ವಿಧಾನಸಭಾ ಚುನಾವಣೆ ಮೂಲಕ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಯತೀಂದ್ರ ಸಿದ್ದರಾಮಯ್ಯ ಅವರಿಗೆ,  ಸಿಎಂ ಸಿದ್ದರಾಮಯ್ಯ ಅವರ ಮಗ ಹಾಗೂ ಸಹೋದರ ರಾಕೇಶ್ ಸಿದ್ದರಾಮಯ್ಯ ಸಾವಿನ ಅನುಕಂಪ ಅವರ ಗೆಲುವಿನ ಬಹುದೊಡ್ಡ ಅಸ್ತ್ರವಾಗಿತ್ತು. ಇಷ್ಟು ಮಾತ್ರವಲ್ಲದೆ, ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ದಿ ಕಾರ್ಯಗಳು ಯತೀಂದ್ರ ಅವರ ಗೆಲುವಿಗೆ ಪ್ರಮುಖ ಕಾರಣವಾಗಿದ್ದು. 
ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯಗೆ 58,616 ಮತಗಳ ಬಾರಿ ಗೆಲುವು ಲಭಿಸಿತ್ತು. 

ಈ ಬಾರಿಯ ಮತದಾರರ ಲೆಕ್ಕಾಚಾರ: 
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಒಟ್ಟು  ಮತದಾರರ ಸಂಖ್ಯೆ- 2,23,007 (2022 ಕ್ಕೆ ಅನ್ವಹಿಸುವಂತೆ)
ಪುರುಷ - 1,11,777
ಮಹಿಳೆ - 1,11,230

ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 53 ಸಾವಿರ
ದಲಿತ - 48 ಸಾವಿರ
ಒಕ್ಕಲಿಗ - 12 ಸಾವಿರ
ಕುರುಬ - 27 ಸಾವಿರ
ಉಪ್ಪಾರ - 14 ಸಾವಿರ
ನಾಯಕ - 23 ಸಾವಿರ
ಇತರೆ - 35 ಸಾವಿರ

ವರುಣ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Varuna Assembly Election Result 2023) 
ಸ್ಪರ್ಧಾಳುಗಳು: 
* ಕಾಂಗ್ರೆಸ್ - ಸಿದ್ದರಾಮಯ್ಯ - ಗೆಲುವು
* ಬಿಜೆಪಿ - ವಿ.ಸೋಮಣ್ಣ
* ಜೆಡಿಎಸ್ - ಭಾರತೀ ಶಂಕರ್

ಗೆಲುವು: 
ಈ ಬಾರಿಯ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೆಲುವು ಲಭಿಸಿದೆ. ಲಿಂಗಾಯತ ಮತವನ್ನ ಬಿಜೆಪಿ ನಂಬಿದ್ದರೂ ಸಹ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಕೂಡ ಇದೇ ಕ್ಷೇತ್ರದಲ್ಲಿ ಬರುವುದರಿಂದ ಇಲ್ಲಿನ ಜನರು ಸಿದ್ದರಾಮಯ್ಯ ಅವರ ಪರವಾಗಿಯೇ ಒಲವು ತೋರಿದ್ದಾರೆ. 
________________________________________
* ಟಿ. ನರಸೀಪುರ ವಿಧಾನಸಭಾ ಕ್ಷೇತ್ರ  (T. Narseepur Assembly Constitueny)

2018ರ ವಿಧಾನಸಭಾ ಚಿತ್ರಣ: 
ಎಂ.ಅಶ್ವಿನ್‌ಕುಮಾರ್  ಜೆಡಿಎಸ್, (ಗೆಲುವು)-83,929
ಹೆಚ್‌.ಸಿ.ಮಹದೇವಪ್ಪ, ಕಾಂಗ್ರೆಸ್-55,451.
ಎಸ್.ಶಂಕರ್ , ಬಿಜೆಪಿ- 11,812.

ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ  ಜೆಡಿಎಸ್‌ನ ಎಂ.ಅಶ್ವಿನ್‌ಕುಮಾರ್‌ಗೆ 28,478ಮತಗಳ ಅಂತರದ ಗೆಲುವು ಲಭಿಸಿತ್ತು. 
ಇವರ ಗೆಲುವಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂಬ ಅಲೆ ಹಾಗೂ ಹೆಚ್‌.ಸಿ.ಮಹದೇವಪ್ಪ ಮತ್ತು ಸಿದ್ದರಾಮಯ್ಯ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯೇ ಪ್ರಮುಖ ಕಾರಣ.

ಈ ಬಾರಿಯ ಮತದಾರರ ಲೆಕ್ಕಾಚಾರ: 
ಒಟ್ಟು ಮತದಾರರು : 1,97,949, (2022 ನ.09ಕ್ಕೆ  ಅನ್ವಯವಾಗುವಂತೆ)
ಪುರುಷ - 98,402 
ಮಹಿಳೆ - 99,547

ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 16 ಸಾವಿರ
ದಲಿತ - 50 ಸಾವಿರ
ಒಕ್ಕಲಿಗ - 52 ಸಾವಿರ
ಕುರುಬ - 18 ಸಾವಿರ
ಉಪ್ಪಾರ - 18 ಸಾವಿರ
ನಾಯಕ - 25
ಮುಸ್ಲಿಂ - 8 ಸಾವಿರ
ಇತರೆ - 18 ಸಾವಿರ

ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (T. Narseepur Assembly Election Result 2023) 
ಸ್ಪರ್ಧಾಳುಗಳು: 
>> ಬಿಜೆಪಿ - ಡಾ.ರೇವಣ್ಣ
>> ಕಾಂಗ್ರೆಸ್ - ಎಚ್.ಸಿ. ಮಹದೇವಪ್ಪ ಗೆಲುವು
>> ಜೆಡಿಎಸ್ - ಆರ್.ಅಶ್ವಿನ್ ಕುಮಾರ್ (ಹಾಲಿ ಶಾಸಕ)

ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕರಾದ ಜೆಡಿಎಸ್ ಅಭ್ಯರ್ಥಿ ಆರ್. ಅಶ್ವಿನ್ ಕುಮಾರ್ ಅವರೇ ಮತ್ತೆ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಮಹಾದೇವಪ್ಪ ಈ ಬಾರಿ ಜೆಡಿಎಸ್ ಪಕ್ಷದ ಹಾಲಿ ಶಾಸಕ ಆರ್. ಅಶ್ವಿನ್ ಕುಮಾರ್ ವಿರುದ್ಧ ಜಯಭೇರಿ ಸಾಧಿಸಿದ್ದಾರೆ. 
________________________________________________
* ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ  (Priyapatna Assembly Constitueny 2023) 

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ 2018ರ ಚಿತ್ರಣ: 
ಕೆ.ಮಹದೇವ್ ಜೆಡಿಎಸ್ (ಗೆಲುವು)-77,770.
ಕೆ.ವೆಂಕಟೇಶ್ ಕಾಂಗ್ರೆಸ್-70,277
ಎಸ್.ಮಂಜುನಾಥ್ ಬಿಜೆಪಿ-4,047
ಜೆಡಿಎಸ್‌ನ ಕೆ.ಮಹದೇವ್‌ಗೆ 7,493 ಮತಗಳ ಅಂತರದ ಗೆಲುವು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವಿರೋಧಿ ಅಲೆ ಹಾಗೂ ಹೆಚ್‌ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಅಲೆಗಳು ಮಹದೇವ್ ಗೆಲುವಿಗೆ ಪ್ರಮುಖ ಕಾರಣ.

ಈ ಬಾರಿಯ ಮತದಾರರ ಲೆಕ್ಕಾಚಾರ: 
ಒಟ್ಟು ಮತದಾರರು : 1,87,351 (ನ.2022ಕ್ಕೆ ಅನ್ವಹಿಸುವಂತೆ)
ಪುರುಷ - 94388
ಮಹಿಳೆ - 92963

ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 18 ಸಾವಿರ
ದಲಿತ – 30ಸಾವಿರ
ಒಕ್ಕಲಿಗ – 43 ಸಾವಿರ
ಕುರುಬ – 38 ಸಾವಿರ
ಉಪ್ಪಾರ – 8 ಸಾವಿರ
ಮುಸ್ಲಿಂ – 7 ಸಾವಿರ
ಬುಡಕಟ್ಟು ಜನಾಂಗ – 6 ಸಾವಿರ
ಇತರೆ – 34 ಸಾವಿರ

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Priyapatna Assembly Election Result 2023) 
ಸ್ಪರ್ಧಾಳುಗಳು: 
* ಬಿಜೆಪಿ - ವಿಜಯಶಂಕರ್
* ಕಾಂಗ್ರೆಸ್ - ಕೆ.ವೆಂಕಟೇಶ್ ಗೆಲುವು
* ಜೆಡಿಎಸ್ - ಕೆ.ಮಹದೇವು

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ವೆಂಕಟೇಶ್ ಜೆಡಿಎಸ್‌ನ ಮಹದೇವು ಅವರ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. 
________________________________________________
* ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ ( KrishnaRajnagar Assembly Constitueny 2023) 

ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ 2018ರ ಚಿತ್ರಣ: 
ಸಾರಾ.ಮಹೇಶ್ ಜೆಡಿಎಸ್ (ಗೆಲುವು) -85,011
ಡಿ.ರವಿಶಂಕರ್, ಕಾಂಗ್ರೆಸ್ -83,232 
ಹೆಚ್.ಜಿ.ಶ್ವೇತಾ ಗೋಪಾಲ್, ಬಿಜೆಪಿ- 2,716

ಜೆಡಿಎಸ್‌ನ ಸಾರಾ.ಮಹೇಶ್‌ಗೆ 1,779 ಮತಗಳ ಅಂತರ ಗೆಲುವು. ಹೆಚ್‌ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ ಗೆಲುವು.

ಈ ಬಾರಿಯ ಮತದಾರರ ಲೆಕ್ಕಾಚಾರ: 
ಒಟ್ಟು ಮತದಾರರು : 207749 (ನ.9 2022ಕ್ಕೆ ಅನ್ವಹಿಸುವಂತೆ)
ಪುರುಷ - 104005
ಮಹಿಳೆ - 103744

ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 25 ಸಾವಿರ
ದಲಿತ - 26 ಸಾವಿರ
ಒಕ್ಕಲಿಗ - 50 ಸಾವಿರ
ಕುರುಬ - 48 ಸಾವಿರ
ಉಪ್ಪಾರ - 5 ಸಾವಿರ
ನಾಯಕ - 15 ಸಾವಿರ
ಮುಸ್ಲಿಂ - 12 ಸಾವಿರ
ಇತರೆ - 20 ಸಾವಿರ

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (KrishnaRajnagar Assembly Election Result 2023):  
>> ಬಿಜೆಪಿ - ಹೊಸಹಳ್ಳಿ ವೆಂಕಟೇಶ್
>> ಕಾಂಗ್ರೆಸ್ - ಡಿ.ರವಿಶಂಕರ್ ಗೆಲುವು
>> ಜೆಡಿಎಸ್ - ಸಾರಾ ಮಹೇಶ್

ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ..  ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ. ರವಿಶಂಕರ್  ಅವರಿಗೆ ಸಿಂಪತಿ ಮತಗಳು ಕೈ ಹಿಡಿದಿದೆ.
____________________________
* ಹುಣಸೂರು ವಿಧಾನಸಭಾ ಕ್ಷೇತ್ರ ( Hunsur Assembly Constitueny 2023) 

2018ರ ಹುಣಸೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: 
2018ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಹೆಚ್. ವಿಶ್ವನಾಥ್ ಜಯ ಸಾಧಿಸಿದ್ದರು. ಗೆದ್ದ ಒಂದೇ ವರ್ಷದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಸೆಟೆದು ನಿಂತ ಹೆಚ್.ವಿಶ್ವನಾಥ್ ಆಪರೇಷನ್ ಕಮಲದ ಮುಂದಾಳತ್ವ ವಹಿಸಿ ಬಿಜೆಪಿ ಸೇರಿಕೊಂಡರು. ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಕಾಂಗ್ರೆಸ್ ನ ಹೆಚ್‌.ಪಿ.ಮಂಜುನಾಥ್ ವಿರುದ್ಧ 39,727 ಮತಗಳ ಸೋಲು ಕಂಡರು.

ಈ ಬಾರಿಯ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಮತಗಳ ಲೆಕ್ಕಾಚಾರ: 

ಒಟ್ಟು ಮತದಾರರು : 2,33217 (ನ.09 2022ಕ್ಕೆ  ಅನ್ವಯ)
ಪುರುಷ - 1,16,805
ಮಹಿಳೆ -1,16,412

ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 18 ಸಾವಿರ
ದಲಿತ - 39 ಸಾವಿರ
ಒಕ್ಕಲಿಗ -37 ಸಾವಿರ
ಕುರುಬ - 30 ಸಾವಿರ
ನಾಯಕ - 29 ಸಾವಿರ
ಮುಸ್ಲಿಂ - 15 ಸಾವಿರ
ಅಲ್ಪ ಸಂಖ್ಯಾತ : 40 ಸಾವಿರ
ಇತರೆ – 15 ಸಾವಿರ

ಹುಣಸೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣೆ ಫಲಿತಾಂಶ  (Hunsur Assembly Election Result 2023):-
* ಬಿಜೆಪಿ - ದೇವನಹಳ್ಳಿ ಸೋಮಶೇಖರ್
* ಕಾಂಗ್ರೆಸ್- ಹೆಚ್.ಪಿ. ಮಂಜುನಾಥ್ ( ಹಾಲಿ ಶಾಸಕ )
* ಜೆಡಿಎಸ್ - ಜಿ.ಡಿ. ಹರೀಶ್ ಗೌಡ ಗೆಲುವು

ಹುಣಸೂರು ವಿಧಾನಸಭಾ ಕ್ಷೇತ್ರ ದಲ್ಲಿ ಈ ಬಾರಿ ಮತದಾರರ ಒಲವು ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡರ ಪುತ್ರ ಜಿ.ಡಿ. ಹರೀಶ್ ಗೌಡರ ಪರ ಇದೆ. ಈ ಹಿಂದೆ ಮಂಜುನಾಥ್ ಗೆಲುವಿಗೆ ಕಾರಣವೇ ಜಿಟಿ ಕುಟುಂಬ, ಜೊತೆಯಲ್ಲಿ ಜಿಟಿಡಿ ಅಭಿವೃದ್ಧಿ ಕೆಲಸ ಮಾಡಿರುವುದು. 3 ಬಾರಿ ಹೆಚ್.ಪಿ ಮಂಜುನಾಥ್ ಶಾಸಕರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಅಷ್ಟಾಗಿ ಏನು ಕೊಡುಗೆ ನೀಡದಿರುವುದೇ ಇವರ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.  
______________________________________
* ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರ (Heggadevan Kote Assembly Constitueny 2023) 

ಹೆಚ್. ಡಿ. ಕೋಟೆಯಲ್ಲಿ 2018ರ ಚುನಾವಣೆಯ ಚಿತ್ರಣ: 
ಅನಿಲ್ ಚಿಕ್ಕಮಾದು ಕಾಂಗ್ರೆಸ್ (ಗೆಲುವು)-76,652
ಚಿಕ್ಕಣ್ಣ, ಜೆಡಿಎಸ್-54,559
ಸಿದ್ದರಾಜು, ಬಿಜೆಪಿ-34,425

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್. ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅನಿಲ್ ಚಿಕ್ಕಮಾದುಗೆ 22,093 ಮತಗಳ ಅಂತರದ ಗೆಲುವು ಪ್ರಾಪ್ತಿಯಾಗಿತ್ತು. 
ತಂದೆ ಚಿಕ್ಕಮಾದು ಅವರ ನಿಧನದ ಅನುಕಂಪ ಹಾಗೂ ಸಿದ್ದರಾಮಯ್ಯ ಸರ್ಕಾರದ ಕೆಲಸಗಳ ಶ್ರೀರಕ್ಷೆ ಇವರ ಗೆಲುವಿಗೆ ಪ್ರಮುಖ ಕಾರಣವಾಗಿತ್ತು. 

2018ರ ಚುನಾವಣೆಯ ಲೆಕ್ಕಾಚಾರ: 
ಒಟ್ಟು ಮತದಾರರು : 2,20911 (ನ.9 2022ಕ್ಕೆ ಅನ್ವಯ)
ಪುರುಷ - 111267
ಮಹಿಳೆ - 109644

ಮತಗಳ ಜಾತಿವಾರು ಲೆಕ್ಕಾಚಾರ :
ಲಿಂಗಾಯತ -26 ಸಾವಿರ
ದಲಿತ – 58 ಸಾವಿರ
ಒಕ್ಕಲಿಗ – 28 ಸಾವಿರ
ಕುರುಬ – 15 ಸಾವಿರ
ಉಪ್ಪಾರ – 5 ಸಾವಿರ
ಎಸ್.ಟಿ. – 60 ಸಾವಿರ
ಮುಸ್ಲಿಂ – 8 ಸಾವಿರ
ಇತರೆ – 25 ಸಾವಿರ

ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆ ಫಲಿತಾಂಶ (Heggadevan Kote Assembly Election Result 2023):
>> ಬಿಜೆಪಿ - ಕೃಷ್ಣನಾಯಕ
>> ಕಾಂಗ್ರೆಸ್ - ಅನಿಲ್ ಚಿಕ್ಕಮಾದು ಗೆಲುವು
>> ಜೆಡಿಎಸ್ - ಜಯಪ್ರಕಾಶ್ ಚಿಕ್ಕಣ್ಣ

ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಗೆಲುವು ಸಾಧಿಸಿದ್ದಾರೆ.  

________________________________________________
* ನಂಜನಗೂಡು ವಿಧಾನಸಭಾ ಕ್ಷೇತ್ರ (Nanjangudu Assembly Constitueny 2023) 

ನಂಜನಗೂಡು ವಿಧಾನಸಭಾ ಕ್ಷೇತ್ರದ 2018ರ ವಿಧಾನಸಭಾ ಚುನಾವಣೆಯ ಚಿತ್ರಣ: 
ಬಿ.ಹರ್ಷವರ್ಧನ್ ಬಿಜೆಪಿ, (ಗೆಲುವು)-78,030.
ಕಳಲೆ.ಎನ್.ಕೇಶವಮೂರ್ತಿ, ಜೆಡಿಎಸ್ - 65,551.
ದಯಾನಂದ ಮೂರ್ತಿ ಹೆಚ್‌.ಎಸ್. - 13,679

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಹರ್ಷವರ್ಧನ್‌ 12,479 ಮತಗಳ  ಅಂತರದಿಂದ ಗೆಲುವು ಸಾಧಿಸಿದ್ದರು. 

ಈ ಕ್ಷೇತ್ರದಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸನ್ ಪ್ರಸಾದ್ ಸಂಚಾರ, ಸಿದ್ದರಾಮಯ್ಯ ಹಾಗೂ ಪ್ರಸಾದ್ ನಡುವಿನ ನೇರ ಪೈಪೋಟಿ. ಹರ್ಷವರ್ಧನ್ ಪ್ರಸಾದ್‌ರ ಅಳಿಯ ಎಂಬ ಲೇಬಲ್ ಗೆಲುವಿನ ಪ್ರಮುಖ ಕಾರಣಗಳು.

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯ ಮತಗಳ ಲೆಕ್ಕಾಚಾರ: 
ಒಟ್ಟು ಮತದಾರರು : 210051
ಪುರುಷ - 105064
ಮಹಿಳೆ - 104987

ಮತಗಳ ಜಾತಿವಾರು ಲೆಕ್ಕಾಚಾರ :
ಲಿಂಗಾಯತ – 59 ಸಾವಿರ
ದಲಿತ – 60 ಸಾವಿರ
ಒಕ್ಕಲಿಗ – 8 ಸಾವಿರ
ಕುರುಬ – 6 ಸಾವಿರ
ಉಪ್ಪಾರ – 23 ಸಾವಿರ
ನಾಯಕ – 28 ಸಾವಿರ
ಮುಸ್ಲಿಂ – 11 ಸಾವಿರ
ಇತರೆ – 10 ಸಾವಿರ

ನಂಜನಗೂಡು ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Nanjangudu Assembly Election Result 2023): 
* ಬಿಜೆಪಿ - ಹರ್ಷವರ್ಧನ್ ( ಹಾಲಿ ಶಾಸಕ )
* ಕಾಂಗ್ರೆಸ್ - ದರ್ಶನ್ ಧ್ರುವ ನಾರಾಯಣ ಗೆಲುವು
* ಜೆಡಿಎಸ್ - ದರ್ಶನ್‌ಗೆ ಸಹಕಾರ ನೀಡಿದ್ದು ಯಾವುದೇ ಅಭ್ಯರ್ಥಿ ಹಾಕಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಧ್ರುವ ನಾರಾಯಣ್ ಅವರ ಪುತ್ರ ದರ್ಶನ್ ಧ್ರುವ ಪ್ರಥಮ ಬಾರಿಗೆ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ್ ಅವರ ತಂದೆ ಧ್ರುವ ನಾರಾಯಣ್ ಅವರ ಮೇಲಿನ ಅಪಾರ ಪ್ರೀತಿ, ಅವರ ವರ್ಚಸ್ಸು ಮತ್ತು ಈ ಭಾಗದ ಜನರಿಗಾಗಿ ಅವರು ಮಾಡಿರುವ ಜನಪರ ಕೆಲಸಗಳು ಪುತ್ರನ ಗೆಲುವಿಗೆ ಕಾರಣವಾಗಿದೆ.  
________________________________________________
* ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ (Chamundeshwari Assembly Constitueny 2023) 

2018ರ ಚುನಾವಣಾ ಚಿತ್ರಣ: 
ಜಿ. ಟಿ.ದೇವೇಗೌಡ ಜೆಡಿಎಸ್ (ಗೆಲುವು)-1,21,325.
ಸಿದ್ದರಾಮಯ್ಯ, ಕಾಂಗ್ರೆಸ್ - 85,283.
ಎಸ್.ಆರ್.ಗೋಪಾಲ್‌ರಾವ್, ಬಿಜೆಪಿ - 12,064.

2018ರ ವಿಧಾನಸಭಾ ಚುನಾವಣೆಯಲ್ಲಿ ಬಹಳ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನು ಮಣಿಸಿ ಜೆಡಿಎಸ್‌ನ ಜಿಟಿ.ದೇವೇಗೌಡ 36,042 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 

ಸಿದ್ದರಾಮಯ್ಯಗೆ ಒಕ್ಕಲಿಗ ವಿರೋಧಿ ಪಟ್ಟ ಬಂದಿದ್ದು, ಹೆಚ್‌ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ನೇರ ಗುದ್ದಾಟ, ಸಿದ್ದರಾಮಯ್ಯ ಆಡಳಿತ ವಿರೋಧಿ ಅಲೆ, ಇದೆಲ್ಲದರ ಪರಿಣಾಮ ಹಾಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ರಾಜಕೀಯ ಮರುಹುಟ್ಟು ಪಡೆದಿದ್ದ ಕ್ಷೇತ್ರದಲ್ಲೇ ಹೀನಾಯ ಸೋಲು ಕಾಣಬೇಕಾಯಿತು.

2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮತಗಳ ಲೆಕ್ಕಾಚಾರ: 
ಒಟ್ಟು ಮತದಾರರು : 305556
ಪುರುಷ - 153023
ಮಹಿಳೆ -152533

ಮತಗಳ ಜಾತಿವಾರು ಲೆಕ್ಕಾಚಾರ :
ಲಿಂಗಾಯತ - 25 ಸಾವಿರ
ದಲಿತ - 40 ಸಾವಿರ
ಒಕ್ಕಲಿಗ - 70 ಸಾವಿರ
ಕುರುಬ - 40 ಸಾವಿರ
ನಾಯಕ - 38 ಸಾವಿರ
ಬ್ರಾಹ್ಮಣ - 15 ಸಾವಿರ
ಮುಸ್ಲಿಂ - 5 ಸಾವಿರ
ಇತರೆ - 50 ಸಾವಿರ ಮತಗಳು

 

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Chamundeshwari Assembly Election Result 2023): 
>> ಬಿಜೆಪಿ - ಕವೀಶ್ ಗೌಡ
>> ಕಾಂಗ್ರೆಸ್ - ಮಾವನಹಳ್ಳಿ ಸಿದ್ದೇಗೌಡ
>> ಜೆಡಿಎಸ್ - ಜಿ.ಟಿ. ದೇವೇಗೌಡ ಗೆಲುವು

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ  ಕವೀಶ್ ಗೌಡ, ಮಾಜಿ ಕಾಂಗ್ರೆಸ್ ಶಾಸಕ ವಾಸು ಪುತ್ರ. ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ ಹಾಗೂ ಜಿಟಿಡಿ ಮಧ್ಯೆ ಟಫ್ ಫೈಟ್ ಇದ್ದರೂ ಸಹ ಜೆಡಿಎಸ್‌ ಅಭ್ಯರ್ಥಿ ಜಿ.ಟಿ. ದೇವೇಗೌಡ ಅವರು ಮತ್ತೆ ಗೆಲುವಿನ ನಗೆ ಬೀರಿದ್ದಾರೆ. 
________________________________________________
* ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ (Krishna Raja Assembly Constitueny) 

ಕೃಷ್ಣರಾಜ ಕ್ಷೇತ್ರದಲ್ಲಿ 2018ರ ಚುನಾವಣಾ ಚಿತ್ರಣ: 
ಎಸ್.ಎ.ರಾಮದಾಸ್ ಬಿಜೆಪಿ (ಗೆಲುವು)-78,573.
ಎಂ.ಕೆ.ಸೋಮಶೇಖರ್, ಕಾಂಗ್ರೆಸ್-52,226.
ಕೆ.ವಿ.ಮಲ್ಲೇಶ್-11,607.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಮದಾಸ್ ಗೆ 26,347ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಆಡಳಿತ ಹಾಗೂ ಸ್ಥಳೀಯವಾಗಿ ಎಸ್.ಎ. ರಾಮದಾಸ್ ಮೇಲೆ ಇದ್ದ ಒಲವು ಗೆಲುವಿನ ಪ್ರಮುಖ ಕಾರಣ.

2023ರ ಚುನಾವಣೆಯಲ್ಲಿ ಮತಗಳ ಲೆಕ್ಕಾಚಾರ: 
ಒಟ್ಟು ಮತದಾರರು : 2,39332
ಪುರುಷ - 117406
ಮಹಿಳೆ - 121926

ಮತಗಳ ಜಾತಿವಾರು ಲೆಕ್ಕಾಚಾರ :
ಲಿಂಗಾಯತ/ವೀರಶೈವ : 40 ಸಾವಿರ
ಬ್ರಾಹ್ಮಣ : 60 ಸಾವಿರ
ದಲಿತ : 40 ಸಾವಿರ
ಒಕ್ಕಲಿಗ : 15 ಸಾವಿರ
ಕುರುಬ : 25 ಸಾವಿರ
ನಾಯಕ : 12 ಸಾವಿರ
ಮುಸ್ಲಿಂ : 8 ಸಾವಿರ
ಇತರೆ : 30 ಸಾವಿರ

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸುತ್ತಿರುವವರು (Krishna Raja Assembly Election Result 2023):-
* ಬಿಜೆಪಿ - ಶ್ರೀವತ್ಸ ಗೆಲುವು
* ಕಾಂಗ್ರೆಸ್ - ಎಂ.ಕೆ. ಸೋಮಶೇಖರ್
* ಜೆಡಿಎಸ್ - ಕೆ.ವಿ. ಮಲ್ಲೇಶ್

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ  ಶಾಸಕ ರಾಮದಾಸ್‌ಗೆ ಕೋಕ್ ನೀಡಿದ್ದು, ಹೊಸ ಮುಖಕ್ಕೆ ಮಣೆ ಹಾಕಿತ್ತು. ಆದರೆ, ಕ್ಷೇತ್ರದಲ್ಲಿ ಹೆಚ್ಚು ಪರಿಚಯವೇ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಿ ಬಿಜೆಪಿ ತಪ್ಪು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದಾಗ್ಯೂ, ಮೈಸೂರಿನ 11 ಕ್ಷೇತ್ರಗಳಲ್ಲಿ ಇದೊಂದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.  

 ________________________________________________
* ಚಾಮರಾಜ ವಿಧಾನಸಭಾ ಕ್ಷೇತ್ರ (Chamaraja Assembly  Constitueny) 

ಚಾಮರಾಜ ವಿಧಾನಸಭಾ ಕ್ಷೇತ್ರದ 2018ರ ಚುನಾವಣಾ ಚಿತ್ರಣ: 
ಎಲ್.ನಾಗೇಂದ್ರ (ಒಕ್ಕಲಿಗ) ಬಿಜೆಪಿ (ಗೆಲುವು)-51,683.
ವಾಸು, ಕಾಂಗ್ರೆಸ್ -36,747.
ಕೆ.ಎಸ್.ರಂಗಪ್ಪ, ಜೆಡಿಎಸ್- 27,284.
ಕೆ.ಹರೀಶ್‌ಗೌಡ, ಪಕ್ಷೇತರ-21,282

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಕೆ.ಹರೀಶ್‌ಗೌಡ ನಿಂತದ್ದು ಬಿಜೆಪಿಗೆ ವರದಾನವಾಗಿತ್ತು. ಜೆಡಿಎಸ್, ಕಾಂಗ್ರೆಸ್ ಹಾಗೂ ಪಕ್ಷೇತರರ ಕಿತ್ತಾಟದ ನಡುವೆ ಬಿಜೆಪಿಯ ಎಲ್.ನಾಗೇಂದ್ರ  14,936 ಮತಗಳ ಅಂತರದಿಂದ ಗೆದ್ದು ಬೀಗಿದರು.

ಒಟ್ಟು ಮತದಾರರು : 234190 (2022ಕ್ಕೆ ಅನ್ವಹಿಸುವಂತೆ)
ಪುರುಷ - 1,15916
ಮಹಿಳೆ - 118274

ಈ ಬಾರಿಯ ಚುನಾವಣೆಯಲ್ಲಿ ಮತಗಳ ಜಾತಿವಾರು ಲೆಕ್ಕಾಚಾರ :
ಲಿಂಗಾಯತ - 10 ಸಾವಿರ
ದಲಿತ - 36 ಸಾವಿರ
ಒಕ್ಕಲಿಗ - 70 ಸಾವಿರ
ಕುರುಬ - 20 ಸಾವಿರ
ನಾಯಕ-ಗಣಿಗ - 14 ಸಾವಿರ
ವಿಶ್ವಕರ್ಮ - 15 ಸಾವಿರ
ಮುಸ್ಲಿಂ - 24 ಸಾವಿರ
ಇತರೆ - 45 ಸಾವಿರ

2023 ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಫಲಿತಾಂಶ ( Chamaraja Assembly Election Result 2023):- 
>> ಬಿಜೆಪಿ - ಹಾಲಿ ಶಾಸಕ ಎಲ್.ನಾಗೇಂದ್ರ
>> ಕಾಂಗ್ರೆಸ್ - ಕೆ. ಹರೀಶ್‌ಗೌಡ ಗೆಲುವು
>> ಜೆಡಿಎಸ್ - ಹೆಚ್.ಕೆ.  ರಮೇಶ್

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ. ಹರೀಶ್ ಗೌಡ ಗೆಲುವಿನ ನಗೆ ಬೀರಿದ್ದಾರೆ. 
________________________________________________
* ನರಸಿಂಹರಾಜ ವಿಧಾನಸಭಾ ಕ್ಷೇತ್ರ (Narasimharaja Assembly Constitueny) 

2018ರ ವಿಧಾನಸಭಾ ಚುನಾವಣೆ ಚಿತ್ರಣ:
ತನ್ವೀರ್‌ಸೇಠ್ ಕಾಂಗ್ರೆಸ್, (ಗೆಲುವು)-62,268.
ಸಂದೇಶ್‌ಸ್ವಾಮಿ, ಬಿಜೆಪಿ-44,141.
ಅಬ್ದುಲ್ ಮಜೀದ್, ಎಸ್‌ಡಿಪಿಐ-33,284.
ಅಬ್ದುಲ್ ಅಜೀಜ್, ಜೆಡಿಎಸ್-14,709.

2018ರ ವಿಧಾನಸಭಾ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ‌ನ ತನ್ವೀರ್‌ಸೇಠ್‌ಗೆ 18,127 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮುಸ್ಲಿಮರ ಪ್ರಾಬಲ್ಯವೇ ಗೆಲುವಿನ ಪ್ರಮುಖ ಕಾರಣ. ಕ್ಷೇತ್ರದಲ್ಲಿರುವ ಹಿಂದೂಗಳ ಜೊತೆಗೆ ಉತ್ತಮ ಒಡನಾಟ ಬೆಳೆಸಿರುವ ಪರಿಣಾಮ ತನ್ವೀರ್ ಗೆಲುವು ಸುಲಭವಾಯ್ತು.

2023ರ ವಿಧಾನಸಭಾ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಚಿತ್ರಣ: 
ಒಟ್ಟು ಮತದಾರರು : 2,68,499
ಪುರುಷ - 1,30,626,
ಮಹಿಳೆ - 1,37,873

ಈ ಬಾರಿಯ ಚುನಾವಣೆಯಲ್ಲಿ ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 15 ಸಾವಿರ
ದಲಿತ - 20 ಸಾವಿರ
ಒಕ್ಕಲಿಗ - 15 ಸಾವಿರ
ಕುರುಬ - 8 ಸಾವಿರ
ನಾಯಕ - 18 ಸಾವಿರ
ಮುಸ್ಲಿಂ - 1ಲಕ್ಷ 10 ಸಾವಿರ
ಬ್ರಾಹ್ಮಣ - 6 ಸಾವಿರ
ಕ್ರಿಶ್ಚಿಯನ್- 10 ಸಾವಿರ
ಇತರೆ - 43 ಸಾವಿರ

ನರಸಿಂಹರಾಜ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Narasimharaja Assembly Election Result 2023):- 
* ಬಿಜೆಪಿ - ಸತೀಶ್ ಸಂದೇಶ್ ಸ್ವಾಮಿ
* ಕಾಂಗ್ರೆಸ್ - ತನ್ವೀರ್ ಸೇಠ್ ಗೆಲುವು
* ಜೆಡಿಎಸ್ - ಅಬ್ದುಲ್‌ ಖಾದರ್
* ಎಸ್‌ಡಿ‌ಪಿ‌ಐ - ಅಬ್ದುಲ್ ಮಜಿದ್
* ಎಎಪಿ - ಧರ್ಮಶ್ರೀ ಸಿಂಗ್

ಈ ಬಾರಿ ಎನ್.ಆರ್ ಕ್ಷೇತ್ರದಲ್ಲಿ  ನಿರೀಕ್ಷೆಯಂತೆ ಮತ್ತೆ ತನ್ವೀರ್ ಸೇಠ್ ಗೆಲುವು ಸಾಧಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News