ದೇಶದ ಮೆಟ್ರೋ ರೈಲು ಇತಿಹಾಸದಲ್ಲಿ ಹೊಸ ಮೈಲಿಗಲ್ಲು: 5ಜಿ ನೆಟ್ವರ್ಕ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ದೇಶದ ಮೆಟ್ರೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ 5ಜಿ ನೆಟ್ವರ್ಕ್ ಅಳವಡಿಕೆಯ ಪೈಲೆಟ್ ಪ್ರೊಜೆಕ್ಟ್  ಪರೀಕ್ಷೆ ಯಶಸ್ವಿಯಾಗಿದೆ . ಈ ಬಗ್ಗೆ ಬಿ.ಎಂ.ಆರ್.ಸಿ.ಎಲ್  ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

Written by - Manjunath Hosahalli | Edited by - Manjunath N | Last Updated : Jul 22, 2022, 08:25 PM IST
  • ಎಂ.ಜಿ.ರಸ್ತೆಯ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ರಿಲಯನ್ಸ್ ಜಿಯೋ 5ಜಿ ನೆಟ್ವರ್ಕ್ 200 ಮೀಟರ್ ವ್ಯಾಸದಲ್ಲಿ ಲಭ್ಯವಾಗಿರುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ.
  • ಈ ನೆಟ್ವರ್ಕ್ ನಲ್ಲಿ 1.45 ಜಿ.ಬಿ.ಪಿ.ಎಸ್ ಡೌನ್ ಲೋಡ್ ವೇಗ ಹಾಗೂ 65 ಎಂ.ಬಿ.ಪಿ.ಎಸ್ ಅಪ್ಲೋಡ್ ವೇಗ ದಾಖಲಾಗಿದೆ.
ದೇಶದ ಮೆಟ್ರೋ ರೈಲು ಇತಿಹಾಸದಲ್ಲಿ ಹೊಸ ಮೈಲಿಗಲ್ಲು: 5ಜಿ ನೆಟ್ವರ್ಕ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿ title=

ಬೆಂಗಳೂರು: ದೇಶದ ಮೆಟ್ರೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ 5ಜಿ ನೆಟ್ವರ್ಕ್ ಅಳವಡಿಕೆಯ ಪೈಲೆಟ್ ಪ್ರೊಜೆಕ್ಟ್  ಪರೀಕ್ಷೆ ಯಶಸ್ವಿಯಾಗಿದೆ . ಈ ಬಗ್ಗೆ ಬಿ.ಎಂ.ಆರ್.ಸಿ.ಎಲ್  ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

ಈ ಒಂದು ನಿಲ್ದಾಣದಲ್ಲಿ ಯಶಸ್ವಿಯಾದರೆ ಶೀಘ್ರದಲ್ಲೇ ಮೆಟ್ರೊ ರೈಲ್ವೆ ನಿಲ್ದಾಣದಲ್ಲಿ 5ಜಿ ಸೇವೆ ಲಭ್ಯವಾಗಲಿದೆ.ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಮೊಬೈಲ್ ನೆಟ್ವರ್ಕ್ ವೇಗದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದೇವೆ ಎಂದು ತಿಳಿಸಿದ್ದಾರೆ.

ಎಂ.ಜಿ.ರಸ್ತೆಯ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ರಿಲಯನ್ಸ್ ಜಿಯೋ 5ಜಿ ನೆಟ್ವರ್ಕ್ 200 ಮೀಟರ್ ವ್ಯಾಸದಲ್ಲಿ ಲಭ್ಯವಾಗಿರುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಈ ನೆಟ್ವರ್ಕ್ ನಲ್ಲಿ 1.45 ಜಿ.ಬಿ.ಪಿ.ಎಸ್ ಡೌನ್ ಲೋಡ್ ವೇಗ ಹಾಗೂ 65 ಎಂ.ಬಿ.ಪಿ.ಎಸ್ ಅಪ್ಲೋಡ್ ವೇಗ ದಾಖಲಾಗಿದೆ. 4ಜಿ ನೆಟ್ ವರ್ಕ್ ಗಿಂತ 50 ಪಟ್ಟ ವೇಗವನ್ನು ಹೊಂದಿರಲಿದೆ ಎಂದು ಹೇಳಿದ್ದಾರೆ.

ಟ್ರಾಯ್ ನಿಂದ ಪೈಲೆಟ್ ಯೋಜನೆ;

ಟ್ರಾಯ್ ಸಂಸ್ಥೆಯು ದೇಶಾದ್ಯಂತ ಸರ್ಕಾರದ ಮೂಲಭೂತ ಸೌಕರ್ಯವಿರುವ ಕೆಲವು ವಿಮಾನ ನಿಲ್ದಾಣ, ಬಂದರು, ರೈಲ್ವೆ ನಿಲ್ದಾಣ ಹಾಗೂ ಮೆಟ್ರೊ ಮೊದಲಾದ ಕಡೆಗಳಲ್ಲಿ 5ಜಿ ನೆಟ್ವರ್ಕ್ ಕಾರ್ಯನಿರ್ವಹಿಸುವಿಕೆ ಬಗ್ಗೆ ಪೈಲೆಟ್ ಯೋಜನೆ ಕೈಗೆತ್ತಿಕೊಂಡಿದೆ. ಈ ಪೈಕಿ ನಮ್ಮ ಮೆಟ್ರೊ ಎಂ.ಜಿ.ರಸ್ತೆ ನಿಲ್ದಾಣದಲ್ಲೂ 5ಜಿ ನೆಟ್ವರ್ಕ್ ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು ಎಂದಿದ್ದಾರೆ.

ಎರಡು ತಿಂಗಳಿನಿಂದ ನಡೆದಿದ್ದ ಕೆಲಸ:

ಕಳೆದ ಎರಡು ತಿಂಗಳಿನಿಂದ ಈ ಮೆಟ್ರೋ ಸ್ಟೇಷನ್ ನಲ್ಲಿ 5ಜಿ ನೆಟ್ ವರ್ಕ್ ಅಳವಡಿಸುವ ತಾಂತ್ರಿಕ ಕೆಲಸಗಳು ನಡೆಯುತ್ತಿತ್ತು. ಈಗ ಅದು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವುದು ಕಂಡು ಬಂದಿದೆ ಎಂದು ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News