Vehicle Scrappage Policy: ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಶಾಕ್: 15-20 ವರ್ಷ ಹಳೆಯ ವೆಹಿಕಲ್ ಗುಜರಿ ಸೇರೋದು ಪಕ್ಕಾ!

ಬೆಂಗಳೂರು ಬೆಳೆದಂತೆ ವಾಹನಗಳ ಸಂಖ್ಯೆ ಕೂಡ ಹೆಚ್ಚಳವಾಗ್ತಿದೆ. ಸದ್ಯ ನಗರದೆಲ್ಲೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬರುತ್ತಿದೆ. ಟ್ರಾಫಿಕ್ ನ್ನು ನಿಯಂತ್ರಣ ಮಾಡಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಮತ್ತೊಂದೆಡೆ ಹಳೆ ವಾಹನಗಳು ನಗರದಲ್ಲಿ ಸಿಕ್ಕಾಪಟ್ಟೆ ಮಾಲಿನ್ಯವನ್ನು ಉಂಟು ಮಾಡ್ತಿದೆ.

Written by - Bhavishya Shetty | Last Updated : Aug 21, 2022, 09:15 AM IST
    • ರಾಜ್ಯದಲ್ಲಿ ಗುಜರಿ ನೀತಿ ಜಾರಿ ಮಾಡಲು ಸಾರಿಗೆ ಇಲಾಖೆ ಚಿಂತನೆ
    • ಸ್ಕ್ರ್ಯಾಪಿಂಗ್ ಪಾಲಿಸಿ ಜಾರಿ ಮಾಡಿದ್ರೆ 15 ರಿಂದ 20 ವರ್ಷ ಮೇಲ್ಪಟ್ಟ ವಾಹನಗಳು ರಸ್ತೆಗಿಳಿಯುವಂತಿಲ್ಲ
    • ಟ್ರಾಫಿಕ್ ನ್ನು ನಿಯಂತ್ರಣ ಮಾಡಲು ಸರ್ಕಾರದ ಹೊಸ ರೂಲ್ಸ್
Vehicle Scrappage Policy: ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಶಾಕ್: 15-20 ವರ್ಷ ಹಳೆಯ ವೆಹಿಕಲ್ ಗುಜರಿ ಸೇರೋದು ಪಕ್ಕಾ!  title=
Vehicle Scrappage Policy

ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ಹೆಚ್ಚಳವಾಗ್ತಿದೆ. ವಾಯುಮಾಲಿನ್ಯ ಕೂಡ ಏರುತ್ತಲೇ ಇದೆ. ದೆಹಲಿಯಂತೆಯೇ ಬೆಂಗಳೂರು ವಾಯುಮಾಲಿನ್ಯದ ಕೇಂದ್ರ ಸ್ಥಾನವಾಗೋ ಆತಂಕ ಎದುರಾಗಿದೆ. ಇದೇ ಕಾರಣಕ್ಕೆ  ರಾಜ್ಯದಲ್ಲಿ ಗುಜರಿ ನೀತಿ ಜಾರಿ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಸ್ಕ್ರ್ಯಾಪಿಂಗ್ ಪಾಲಿಸಿ ಜಾರಿ ಮಾಡಿದ್ರೆ  15  ವರ್ಷ ಹಾಗೂ 20 ವರ್ಷ ಮೇಲ್ಪಟ್ಟ ವಾಹನಗಳು ರಸ್ತೆಗಿಳಿಯುವಂತಿಲ್ಲ. 

ಇದನ್ನೂ ಓದಿ: Rakul Preet Sigh Photo: ಗುಲಾಬಿ ಬಣ್ಣದ ತುಂಡುಡುಗೆ ಧರಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಭಾರಿ ಮುಜುಗರ ಅನುಭವಿಸಿದ ರಕುಲ್ ಪ್ರೀತ್ ಸಿಂಗ್

ಬೆಂಗಳೂರು ಬೆಳೆದಂತೆ ವಾಹನಗಳ ಸಂಖ್ಯೆ ಕೂಡ ಹೆಚ್ಚಳವಾಗ್ತಿದೆ. ಸದ್ಯ ನಗರದೆಲ್ಲೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬರುತ್ತಿದೆ. ಟ್ರಾಫಿಕ್ ನ್ನು ನಿಯಂತ್ರಣ ಮಾಡಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಮತ್ತೊಂದೆಡೆ ಹಳೆ ವಾಹನಗಳು ನಗರದಲ್ಲಿ ಸಿಕ್ಕಾಪಟ್ಟೆ ಮಾಲಿನ್ಯವನ್ನು ಉಂಟು ಮಾಡ್ತಿದೆ. ಹೀಗಾಗಿ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿ  ವಿಷಕಾರಿಯಾಗುವ ಭೀತಿಯಲ್ಲಿ ರಾಜ್ಯ ಸರ್ಕಾರ ಗುಜರಿ ನಿಯಮವನ್ನ ಜಾರಿ ಮಾಡಲು  ಮಾಸ್ಟರ್ ಪ್ಲಾನ್ ಗೆ  ರೆಡಿ ಮಾಡ್ತಿದೆ. ಒಂದು ಕಡೆ ಸರ್ಕಾರ ಮಹಾನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ಹಾಗೂ ಮಾಲೀನ್ಯ ಪ್ರಯಾಣ ಕಡಿಮೆ ಮಾಡೋದರಲ್ಲಿ  ಪದೇ ಪದೇ ವಿಫಲವಾಗ್ತಿದೆ. ಇದೀಗ ಸ್ಕ್ರ್ಯಾಪಿಂಗ್ ಪಾಲಿಸಿ ಮಾಡೋ ಮೂಲಕ ಖಾಸಗಿ  ಬಳಕೆ ವಾಹನಗಳಿಗೆ  20 ವರ್ಷ ವಾಣಿಜ್ಯ ವಾಹನಗಳಿಗೆ 15 ವರ್ಷ ಮಿತಿ ಏರಲು ತೀರ್ಮಾನಿಸಿದೆ.

60 ಲಕ್ಷ ವಾಹನಗಳು ಬ್ಯಾನ್;

ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಮೂರು ಕೋಟಿ ವಾಹನಗಳು ನೋಂದಾಣಿ ಆಗಿವೆ. ಇದ್ರಲ್ಲಿ 60 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟು ವಾಹನಗಳು ಆಗಿವೆ. ಹಳೆಯ ವಾಹನಗಳು ಹೆಚ್ಚು ಹೊಗೆ ಬಿಡುವುದರಿಂದ ಪರಿಸರ ಹಾಳ್ತಿದೆ ಕಮರ್ಷಿಯಲ್ ವಾಹನ  15  ವರ್ಷ ಮೇಲ್ಟಟ್ಟ , ಪರ್ಸನಲ್ ವಾಹನ 20 ವರ್ಷ ಮೇಲ್ಪಟ್ಟವುಗಳನ್ನ ಬ್ಯಾನ್ಗೆ ಸಿದ್ದತೆ ನಡೆಸಿದೆ. ಈಗಾಗಲೇ ಈ ಯೋಜನೆ ಜಾರಿ ಮಾಡಲು ರಾಜ್ಯ ಸಾರಿಗೆ ಇಲಾಖೆ ಡ್ರಾಫ್ಟ್ ಸಿದ್ದಪಡಿಸುತ್ತಿದೆ.

ಅಸ್ಸಾಂ ರಾಜ್ಯದಂತೆ ಸ್ಕ್ರ್ಯಾಪಿಂಗ್ ನೀತಿ ಜಾರಿ;

ಈಗಾಗಲೇ ಅಸ್ಸಾಂ ಸೇರಿ ಕೆಲ ರಾಜ್ಯಗಳಲ್ಲಿ ಸ್ಕ್ರ್ಯಾಪಿಂಗ್ ಪಾಲಿಸಿ ಜಾರಿ ಮಾಡಿದೆ.ಇದೇ ಮಾದರಿಯಲ್ಲಿ ರಾಜ್ಯದಲ್ಲಿ ವಾಹನಗಳ ಗುಜರಿ ಯೋಜನೆ ಜಾರಿ ಮಾಡ್ತಿದೆ..ಎರಡು ತಿಂಗಳಲ್ಲಿ ಸಾರಿಗೆ ಇಲಾಖೆ ಡ್ರಾಫ್ಟ್ ಸಿದ್ದಪಡಿಸಿ ಸರ್ಕಾರಕ್ಕೆ ನೀಡಲಿದೆ..ಈ ಗುಜರಿ ನೀತಿ ಅನುಷ್ಠಾನ ಅಂದರೆ  ಲಕ್ಷಾಂತರ ಗುಜರಿ ವಾಹನಗಳು ರಸ್ತೆಯಲ್ಲಿ ಓಡಾಡುಂತೆ ಇಲ್ಲ.15 ವರ್ಷ ಮೇಲ್ಪಟ್ಟ ಕಮರ್ಷಿಯಲ್ ವಾಹನ,  20 ವರ್ಷ ಮೇಲ್ಟಟ್ಟ ಪರ್ಸನಲ್ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು ಚಿಂತನೆ ನಡೆಸಿದೆ. ಹಲವು ಬಾರಿ ಬ್ಯಾನ್ ಮಾಡಲು ಕೈಹಾಕಿದ್ದ  ಸರ್ಕಾರ,ಇದೀಗ ಮತ್ತೊಮ್ಮೆ  ಕೇಂದ್ರ ಸರ್ಕಾರದ ಸ್ಕ್ರ್ಯಾಪಿಂಗ್ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನ  ಮಾಡಲು ತೀರ್ಮಾನ ಮಾಡಲಾಗಿದೆ. 

ಇದನ್ನೂ ಓದಿ: ATM Cash Withdrawal New Charges: ATM ನಿಂದ ಹಣ ಹಿಂಪಡೆಯುಲು ಎಷ್ಟು ಶುಲ್ಕ ಮತ್ತು ತೆರಿಗೆ ಪಾವತಿಸಬೇಕು?

ಬೆಂಗಳೂರಿನಲ್ಲಿ ಉಸಿರಾಡುವ ಗಾಳಿ ವಿಷವಾಗುವ ಸಾಧ್ಯತೆ;

ಬೆಂಗಳೂರು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದ್ರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ನಗರದ ಪರಿಸರವನ್ನ ಹಾಳು ಮಾಡುತ್ತಿದೆ. ನಗರದಲ್ಲಿ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಯೂ ವಿಷಕಾರಿಯಾಗುವ ಆತಂಕ ಎದುರಾಗಿದೆ.  ಈಗ ಇದಕ್ಕೆ ಕಡಿವಾಣ ಹಾಕಲು 15ಹಾಗೂ20  ವರ್ಷ ಪೂರೈಸಿರುವ ಹಳೆ ವಾಹನಗಳನ್ನ ಬ್ಯಾನ್ ಮಾಡಲು ಮುಂದಾಗಿದೆ. ರಾಜ್ಯದಲ್ಲಿ 60 ಲಕ್ಷ ಹಳೆಯ ವಾಹನಗಳಿದ್ದು, ಬೆಂಗಳೂರಿನಲ್ಲೇ 40 ಲಕ್ಷ ವಾಹನಗಳಿವೆ. ಇವುಗಳನ್ನ ರಸ್ತೆಗಿಳಿಯದಂತೆ ನೋಡಿಕೊಳ್ಳಲು ಸರ್ಕಾರ ನಿರ್ಧಾರ  ಮಾಡಿದೆ.  

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News