ಕಾಡು ಹಂದಿಗಳ ದಾಳಿಗೆ ಎಕರೆ ಕಬ್ಬು ಸರ್ವನಾಶ: ಕಂಗಾಲಾದ ರೈತ

ಒಂದೆಡೆ ಬೀದರ ಜಿಲ್ಲೆಯಲ್ಲಿ ಸತತವಾಗಿ ನಾಲೈದು ದಿನಗಳಿಂದ ಜಿಟಿ ಜಿಟಿ ಮಳೆ ಬೀಳುತ್ತಿದೆ.  ಇದರಿಂದಾಗಿ ನೀರಿನಲ್ಲಿ ಮುಳುಗಿ ರೈತರು ಬೆಳೆದ ಬೆಳೆ ನೀರು ಪಾಲಾಗಿದೆ. ಇನ್ನೊಂದೆಡೆ ಕಾಡು ಹಂದಿಗಳ ದಾಳಿಯಿಂದಾಗಿ ಕಟಾವಿಗೆ ಸಿದ್ದವಾಗಿದ್ದ ಎಕರೆ ಕಬ್ಬು ಸರ್ವ ನಾಶವಾಗಿದ್ದು ರೈತ ಕಂಗಾಲಾಗಿದ್ದಾರೆ. 

Written by - Yashaswini V | Last Updated : Jul 24, 2023, 12:38 PM IST
  • ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಕಂದಗೂಳ ಗ್ರಾಮದ ಅಣ್ಣೆಪ ತಂದೆ ಹಣಮಂತಪ್ಪಾ ನಾಗನಕೇರಾ ಎಂಬ ರೈತ
  • ರೈತ ತನ್ನ ಹೊಲದ ಸರ್ವೆ ನಂ 73ರಲ್ಲಿ ಸುಮಾರು 5 ಎಕರೆ ಕಬ್ಬು ಬೆಳೆದಿದ್ದಾರೆ. ಶನಿವಾರ (ಜುಲೈ 22) ರಾತ್ರಿ ಬೆಳೆದಿರುವ ಕಬ್ಬಿನ ಹೊಲಕ್ಕೆ ಕಾಡು ಹಂದಿಗಳು ಲಗ್ಗೆ ಇಟ್ಟಿದ್ದವು
  • ಈ ವೇಳೆ ಒಂದು ಎಕರೆಗಿಂತ ಅಧಿಕ ಪ್ರಮಾಣದ ಕಬ್ಬಿನ ಬೆಳೆಯನ್ನು ಸಂಪೂರ್ಣವಾಗಿ ನಾಶ ಪಡಿಸಿವೆ
ಕಾಡು ಹಂದಿಗಳ ದಾಳಿಗೆ ಎಕರೆ ಕಬ್ಬು ಸರ್ವನಾಶ: ಕಂಗಾಲಾದ ರೈತ  title=

Bidar News: ಕಾಡು ಹಂದಿಗಳಿಂದ ದಾಳಿಗೆ ಒಂದು ಎಕರೆ ಕಬ್ಬು ಸಂಪೂರ್ಣವಾಗಿ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಕಂಗಾಲಾಗಿರುವ ಘಟನೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕ್ಷೇತ್ರದಲ್ಲಿ ನಡೆದಿದೆ. 

ಹೌದು, ಒಂದೆಡೆ ಬೀದರ ಜಿಲ್ಲೆಯಲ್ಲಿ ಸತತವಾಗಿ ನಾಲೈದು ದಿನಗಳಿಂದ ಜಿಟಿ ಜಿಟಿ ಮಳೆ ಬೀಳುತ್ತಿದೆ.  ಇದರಿಂದಾಗಿ ನೀರಿನಲ್ಲಿ ಮುಳುಗಿ ರೈತರು ಬೆಳೆದ ಬೆಳೆ ನೀರು ಪಾಲಾಗಿದೆ. ಇನ್ನೊಂದೆಡೆ ಕಾಡು ಹಂದಿಗಳ ದಾಳಿಯಿಂದಾಗಿ ಕಟಾವಿಗೆ ಸಿದ್ದವಾಗಿದ್ದ ಎಕರೆ ಕಬ್ಬು ಸರ್ವ ನಾಶವಾಗಿದ್ದು ರೈತ ಕಂಗಾಲಾಗಿದ್ದಾರೆ. 

ಇದನ್ನೂ ಓದಿ- ಸಿಲಿಕಾನ್ ಸಿಟಿಯಲ್ಲಿ ಸಂಭ್ರಮದಿಂದ ನೆರವೇರಿದ ಕುಂದಾಪ್ರ ಕನ್ನಡ ಹಬ್ಬ

ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಕಂದಗೂಳ ಗ್ರಾಮದ ಅಣ್ಣೆಪ ತಂದೆ ಹಣಮಂತಪ್ಪಾ ನಾಗನಕೇರಾ ಎಂಬ ರೈತ ತನ್ನ ಹೊಲದ ಸರ್ವೆ ನಂ 73ರಲ್ಲಿ ಸುಮಾರು 5 ಎಕರೆ ಕಬ್ಬು ಬೆಳೆದಿದ್ದಾರೆ. ಶನಿವಾರ (ಜುಲೈ 22) ರಾತ್ರಿ ಬೆಳೆದಿರುವ ಕಬ್ಬಿನ ಹೊಲಕ್ಕೆ ಕಾಡು ಹಂದಿಗಳು ಲಗ್ಗೆ ಇಟ್ಟಿದ್ದು ಒಂದು ಎಕರೆಗಿಂತ ಅಧಿಕ ಪ್ರಮಾಣದ ಕಬ್ಬಿನ ಬೆಳೆಯನ್ನು ಸಂಪೂರ್ಣವಾಗಿ ನಾಶ ಪಡಿಸಿವೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. 

ಈ ಒಂದು ಎಕರೆ ಕಬ್ಬಿನ ಬೆಳೆ ನಾಶದಿಂದ ಅಂದಾಜು 1ಲಕ್ಷ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ಸಾಲ ಮಾಡಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕಬ್ಬು ಬೆಳಸಿದ ಕಬ್ಬು ಬೆಳೆ ಇದೀಗ ಕೈಗೆ ತುತ್ತು ಬರುವಷ್ಟರಲ್ಲಿ ಎಲ್ಲಾ ಸಂಪೂರ್ಣ ನಾಶವಾಗಿದೆ. 

ಇದನ್ನೂ ಓದಿ- ಕೆಐಎಡಿಬಿ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಲಗಾಮು : ಸುತ್ತೋಲೆ ಪ್ರಕಟ

ಈ ಸಂಬಂಧ ಅಳಲು ತೋಡಿಕೊಂಡಿರುವ ರೈತರು, ಈ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯಲ್ಲಿ ರೈತರ ಕಷ್ಟ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ,  ಕಟಾವಿಗೆ ಬಂದಿದ್ದ ಕಬ್ಬು ಸಂಪೂರ್ಣವಾಗಿ ನಾಶವಾಗಿದೆ. ಈ ಘಟನೆಯಿಂದ ತುಂಬಾ ನೋವಾಗಿದೆ, ಬೆಳೆಗಾಗಿ ಮಾಡಿದ್ದ ಸಾಲವನ್ನು ತೀರಿಸುವುದಾದರೂ ಹೇಗೆ? ನನಗಾದ ನಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಳೆ ಪರಿಹಾರದ ನೆರವು ನೀಡಬೇಕು ಎಂದು ರೈತ ಅಣ್ಣೆಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News