ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವವರ ಪತ್ತೆಗೆ ಅಡ್ವಾನ್ಸ್ಡ್ ಡ್ರೋಣ್ !ಭಾರೀ ಮಳೆ , ಬಿರುಗಾಳಿ ಮಧ್ಯೆಯೂ ಕಾರ್ಯ ನಿರ್ವಹಿಸುತ್ತದೆ ಈ ಸಾಧನ

ರಕ್ಷಣಾ ಕಾರ್ಯಾಚರಣೆಯಲ್ಲಿ ಈ ಡ್ರೋಣ್ ನಿರ್ಣಾಯಕ ಪಾತ್ರ ವಹಿಸಲಿದೆ. ಇದು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ.

Written by - Ranjitha R K | Last Updated : Jul 25, 2024, 04:18 PM IST
  • ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ ಹತ್ತು ದಿನ
  • ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ತೀವ್ರಗೊಂಡಿದೆ
  • ಪತ್ತೆ ಕಾರ್ಯಕ್ಕೆ ಇಳಿದಿದೆ ಅಡ್ವಾನ್ಸ್ಡ್ ಡ್ರೋಣ್
 ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವವರ ಪತ್ತೆಗೆ  ಅಡ್ವಾನ್ಸ್ಡ್ ಡ್ರೋಣ್ !ಭಾರೀ ಮಳೆ , ಬಿರುಗಾಳಿ ಮಧ್ಯೆಯೂ ಕಾರ್ಯ ನಿರ್ವಹಿಸುತ್ತದೆ ಈ ಸಾಧನ  title=

ಕಾರವಾರ : ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರ ಪತ್ತೆಗೆ ದಿನಕ್ಕೊಂದು ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲಾ ರೀತಿಯ ಕಾರ್ಯಾಚರಣೆ ನಡೆಸಿದರೂ ಕಾರ್ಯಾಚರಣೆ ಅಂತ್ಯ ಕಾಣುತ್ತಿಲ್ಲ.  ಇದೀಗ ಈ ಕಾರ್ಯಾಚರಣೆ ಹಂತ ಗುರಿ ಮುಟ್ಟುವ ಹಂತ ತಲುಪಿದೆ.

ಹೌದು, ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ ಹತ್ತು ದಿನಗಳು ಕಳೆದಿದೆ‌. ಈಗಾಗಲೇ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ತೀವ್ರಗೊಂಡಿದೆ.ಈ ದುರಂತದಲ್ಲಿ ನಾಪತ್ತೆಯಾದ ಕೇರಳ ಮೂಲದ ಅರ್ಜುನ್‌ನನ್ನು ಪತ್ತೆ ಮಾಡಲು ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಅನ್ನು ದೆಹಲಿಯಿಂದ ತರಿಸಲಾಗಿದೆ. ಇದು 2.4 ಕಿ.ಮೀ ಎತ್ತರದಲ್ಲಿ ಹಾರಾಡಬಲ್ಲ, ಮಣ್ಣಿನಲ್ಲಿ 20 ಮೀಟರ್ ಮತ್ತು ನೀರಿನಲ್ಲಿ 70 ಮೀಟರ್ ಆಳದವರೆಗೂ ಪರೀಕ್ಷೆ ನಡೆಸಬಲ್ಲ ಡ್ರೋಣ್ ಆಗಿದೆ. ಹಿಮ, ನೀರು, ಬಂಡೆ ಮತ್ತು ಮರುಭೂಮಿಗಳಲ್ಲೂ ಪತ್ತೆ ಕಾರ್ಯಕ್ಕೆ ಈ ಡ್ರೋನ್ ಬಳಕೆ ಮಾಡಲಾಗುತ್ತದೆ.ಈ ಸಾಧನವನ್ನು ಇಬ್ಬರು ತರಬೇತಿ ಪಡೆದ ಸೈನಿಕರು ನಿರ್ವಹಿಸುತ್ತಾರೆ. ಭಾರೀ ಪ್ರವಾಹಗಳು ಮತ್ತು ಹಿಮಕುಸಿತಗಳು ಸಂಭವಿಸಿದ ಸ್ಥಳಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. ನೆಲದಡಿಯಲ್ಲಿ ಮಾನವ ಉಪಸ್ಥಿತಿಯನ್ನು ಕೂಡಾ ಇದರಿಂದ ಪತ್ತೆ ಮಾಡಬಹುದಾಗಿದೆ.ಮೃತದೇಹ ಪತ್ತೆ ಕಾರ್ಯಾಚರಣೆಗೂ ಸಹಕಾರಿಯಾಗಲಿದೆ.ರಕ್ಷಣಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಈ ಡ್ರೋಣ್ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳಲ್ಲೂ, ಭಾರೀ ಮಳೆ ಮತ್ತು ಗಂಟೆಗೆ 40 ಕಿ.ಮೀ.ವರೆಗಿನ ಗಾಳಿಯ ವೇಗದಲ್ಲೂ ಕಾರ್ಯನಿರ್ವಹಿಸುತ್ತದೆ.ಇದರ ಜೊತೆಯಲ್ಲೇ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳು ಜೊತೆಗೆ ನೌಕಾಪಡೆಯ ಡೈವರ್ಸಗಳು ಗಂಗಾವಳಿ ನದಿಯಲ್ಲಿ ತೀವ್ರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನದಿಯಲ್ಲಿ ಲಾರಿ ಇರುವ ಜಾಗವನ್ನು ಪತ್ತೆ ಹಚ್ಚಲಾಗಿದೆ. 

ಇದನ್ನೂ ಓದಿ : ಐದು ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಖಾಕಿ..!

ಇನ್ನೂ ಶಿರೂರು ಗುಡ್ಡ ಕುಸಿತ ಪ್ರಕರಣ ದಿ‌ನ ಕಳೆದಂತೆ ನಾಪತ್ತೆ ಆದವರ ಸಂಖ್ಯೆ ಕೂಡಾ ಹೆಚ್ಚುತ್ತಿದೆ.ಈ ಗುಡ್ಡ ಕುಸಿತ ಪ್ರಕರಣದಿಂದ ನಾಪತ್ತೆಯಾದವರ ಸಂಖ್ಯೆ ಈಗ 12 ಕ್ಕೆ ಏರಿಕೆಯಾಗಿದೆ. ತಮಿಳುನಾಡು ಮೂಲದ ಲಾರಿ ಚಾಲಕ ಶರವಣ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಡ್ರೈವರ್ ಶರವಣ್ ನಾಪತ್ತೆ ಆಗಿರುವ ಬಗ್ಗೆ ಸೆಂಧಿಲ್ ಎಂಬುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಂದೀಲ್ ನಾಪತ್ತೆ ಆಗಿರುವ ಶರವಣ್ ನ ಮಾವನಾಗಿದ್ದು,ತನ್ನ ಅಳಿಯನ ಮೊಬೈಲ್ ಬ್ಯಾಟರಿ ಕಡಿಮೆ ಆಗಿ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು ಎಂದು ಕೊಂಡು ಸುಮ್ಮನಿದ್ದೆವು. ಆದರೆ ಬಹಳ ದಿನ ಕಳೆದರೂ ಮೊಬೈಲ್ ಆನ್ ಆಗದಿರುವ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದೇವೆ ಎಂದಿದ್ದಾರೆ. ಇನ್ನು ಇತರ ಲಾರಿ ಚಾಲಕರಿಂದ ಮಾಹಿತಿ ಸಿಗುತ್ತಿದ್ದಂತೆ ಶಿರೂರು ಗೆ ಸಂಬಂಧಿಕರು ಓಡಿ ಬಂದಿದ್ದಾರೆ.ಶಿರೂರು ಬಳಿ ಆತನ ಟ್ಯಾಂಕರ್ ಗುಡ್ಡ ಕುಸಿತದ ಪಕ್ಕದಲ್ಲೇ ಇತ್ತು. ಅದನ್ನು ಜಿಲ್ಲಾಡಳಿತದವರು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ.ಟ್ಯಾಂಕರ್ ಲಾರಿ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅಂಕೋಲಾ ಪೊಲೀಸ್ ಠಾಣೆಗೆ ಸೆಂದೀಲ್ ದೂರು ದಾಖಲಿಸಿದ್ದಾರೆ. 

ಒಟ್ಟಿನಲ್ಲಿ  ಗುಡ್ಡ ಕುಸಿತದಲ್ಲಿ ಹತ್ತು ಜನರು ನಾಪತ್ತೆಯಾಗಿರುಬಹುದೆಂದು ಶಂಕೆ ವ್ಯಕ್ತವಾದ ದಿನದಿಂದ ಗುರುತು ಪತ್ತೆಯಾದವರನ್ನು ಹೊರಕ್ಕೆ ತರಲು ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ : ಬೆಳಿಗ್ಗೆ ಬೇಗನೇ ಎದ್ದು ಸೆಲ್‌ನಲ್ಲಿ ಕೆಲಹೊತ್ತು ವಾಕಿಂಗ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News