ರಾಜ್ಯದಲ್ಲಿ ಕೋಮುವಾದದ ವಿಷ ಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ- ಡಿ.ಕೆ.ಶಿವಕುಮಾರ್

'ರಾಜ್ಯದಲ್ಲಿ ಕೋಮುವಾದದ ವಿಷಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.

Last Updated : May 11, 2021, 06:22 PM IST
  • ರಾಜ್ಯದಲ್ಲಿ ಕೋಮುವಾದದ ವಿಷಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
 ರಾಜ್ಯದಲ್ಲಿ ಕೋಮುವಾದದ ವಿಷ ಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ- ಡಿ.ಕೆ.ಶಿವಕುಮಾರ್ title=
file photo

ಬೆಂಗಳೂರು: 'ರಾಜ್ಯದಲ್ಲಿ ಕೋಮುವಾದದ ವಿಷಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.

"ಮಾಧ್ಯಮಗಳ ಮುಂದೆ ಮುಸಲ್ಮಾನರ ಹೆಸರುಗಳನ್ನು ಓದಿದ್ದು ಈತನೊ ಅಥವಾ ಅಧಿಕಾರಿಗಳೋ? ಮಾಡುವುದೆಲ್ಲ ಮಾಡಿ ಅಧಿಕಾರಿಗಳನ್ನು ಸಿಕ್ಕಿಸಲು ನೋಡುತ್ತಿದ್ದಾನೆ' ಎಂದು ಡಿ.ಕೆ.ಶಿವಕುಮಾರ್ (D K Shivakumar) ಅವರು ಆರೋಪಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು  'ಆ ಸಂಸದರನ್ನು ಏನೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಪತ್ರಿಕಾ ಗೋಷ್ಠಿಯಲ್ಲಿ 17 ಜನರ ಹೆಸರು ಓದಿದ್ದು ಈ ಮಹಾನುಭಾವನೇ ಅಲ್ಲವೇ? ನೀವು ಮಾಧ್ಯಮದವರು ಅದನ್ನು ತಿರುಚಿ ತೋರಿಸಿದ್ದೀರಾ? ಈ ಹಿಂದೆ ಮುಸಲ್ಮಾನರನ್ನು ಪಂಕ್ಚರ್ ಹಾಕುವವರು ಎಂದಿದ್ದರು, ಬೆಂಗಳೂರು ಭಯೋತ್ಪಾದಕರ ರಾಜಧಾನಿಯಾಗುತ್ತಿದೆ ಎಂದಿದ್ದರು. ಈಗ ಈ 17 ಜನರನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಈಗ ಅಧಿಕಾರಿಗಳು ಕೊಟ್ಟ ಹೆಸರು ಓದಿದೆ ಅಂತಿದ್ದಾರೆ.ಅಧಿಕಾರಿಗಳೇಕೆ ಕೇವಲ 17 ಜನರ ಹೆಸರು ಕೊಡುತ್ತಾರೆ? ಅವರು ಕೊಟ್ಟರೆ ಎಲ್ಲರ ಹೆಸರು ಕೊಡುತ್ತಿದ್ದರು. ತಮ್ಮ ತಪ್ಪನ್ನು ಅಧಿಕಾರಿಗಳ ಮೇಲೆ ಹೊರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: DK Shivakumar: 'ನಾವು ಶ್ರೀರಾಮನ ಮಕ್ಕಳೇ, ಅದೇ ಸಂಸ್ಕೃತಿಯಲ್ಲಿ ಬೆಳೆದವರು'

ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ "ಮುಖ್ಯಮಂತ್ರಿಗಳು ಮೂರನೇ ಅಲೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅದಕ್ಕೆ ಅವರು ಸಿದ್ಧತೆ ಮಾಡಿಕೊಳ್ಳಲಿ. ಅದಕ್ಕೆ ಮೊದಲು ಈಗ ಬಂದಿರೋ 2ನೇ ಅಲೆ ನಿಯಂತ್ರಿಸಲು ಕಾರ್ಯಕ್ರಮ ರೂಪಿಸಲಿ. ಲಸಿಕೆ ಕೊಡುತ್ತೇವೆ, ನೋಂದಣಿ ಮಾಡಿಸಿ ಅಂತಾ ಹೇಳಿದರು.ನಾನು ನನ್ನ ಮಕ್ಕಳಿಗೆ ನೋಂದಣಿ ಮಾಡಿಸಲು ಆನ್ಲೈನ್ ನಲ್ಲಿ ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನೀವು ಬೇಕಾದರೆ ಪ್ರಯತ್ನಿಸಿ.ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News