ಮುಕ್ತ ಪ್ರಕಟಣಾ ಮಾಲೆಯಡಿ ಪ್ರಕಟಣೆಗಾಗಿ ಕೃತಿಗಳ ಆಹ್ವಾನ

 ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮುಕ್ತ ಪ್ರಕಟಣಾ ಮಾಲೆ ಹೆಸರಿನಲ್ಲಿ ಅಪ್ರಕಟಿತ ಕೃತಿಗಳನ್ನು ಪ್ರಕಟಣೆಗಾಗಿ ಆಹ್ವಾನಿಸಿರುತ್ತದೆ. 

Last Updated : Oct 24, 2020, 12:43 AM IST
ಮುಕ್ತ ಪ್ರಕಟಣಾ ಮಾಲೆಯಡಿ ಪ್ರಕಟಣೆಗಾಗಿ ಕೃತಿಗಳ ಆಹ್ವಾನ title=

ಬೆಂಗಳೂರು:  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮುಕ್ತ ಪ್ರಕಟಣಾ ಮಾಲೆ ಹೆಸರಿನಲ್ಲಿ ಅಪ್ರಕಟಿತ ಕೃತಿಗಳನ್ನು ಪ್ರಕಟಣೆಗಾಗಿ ಆಹ್ವಾನಿಸಿರುತ್ತದೆ. 

ಆಸಕ್ತ ಲೇಖಕರು ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ ಆತ್ಮಕಥೆ, ನಿಘಂಟು ಈವರೆಗೆ ಬಾರದೇ ಇರುವ ಜ್ಞಾನಶಾಖೆಯ ಬಗ್ಗೆ ಪ್ರಕಟವಾಗಬಹುದಾದ ಜ್ಞಾನನಿಧಿ ಎನಿಸಬಹುದಾದ ಶಾಸ್ತ್ರಜ್ಞಾನ ಹೆಚ್ಚಿಸುವ 100 ಪುಟಗಳಿಂದ 300 ಪುಟಗಳವರೆಗಿನ ವಿಶೇಷ ಕೃತಿಗಳು ಪ್ರಕಟಣೆಗೆ ಸಿದ್ಧವಿದ್ದಲ್ಲಿ ಅಂತಹ ಕೃತಿಗಳನ್ನು ಅಕಾಡೆಮಿಯ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್  ಹಾಗೂ ದೂರವಾಣಿ ಸಂಖ್ಯೆ 080-22210730/ 22106460 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News