ಬೆಂಗಳೂರು: ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲುಗಳಿಗೆ ಶಾಶ್ವತ ಆದಾರದ ಮೇಲೆ ಬೋಗಿಗಳನ್ನು ಹೆಚ್ಚಿಸಲು ಪೂರ್ವ ಮಧ್ಯ ರೈಲ್ವೆ ವಲಯವು ಸೂಚಿಸಿದೆ.
1 ರೈಲುಗಳ ಸಂಖ್ಯೆ 03245/03246 ದಾನಾಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳಿಗೆ 3 ಸಾಮಾನ್ಯ ಬೋಗಿಗಳನ್ನು ತೆಗೆದು, 2 ಹೆಚ್ಚುವರಿ ಎಸಿ ಟು ಟೈಯರ್ ಬೋಗಿಗಳನ್ನು ಆಗಸ್ಟ್ 2 ರಿಂದ ದಾನಪುರ ಮತ್ತು ಆಗಸ್ಟ್ 4 ರಂದು ಬೆಂಗಳೂರಿನಿಂದ ಶಾಶ್ವತವಾಗಿ ಜೋಡಿಸಲಾಗುತ್ತಿದೆ.
2. ರೈಲುಗಳ ಸಂಖ್ಯೆ 03247/03248 ದಾನಾಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳಿಗೆ 1 ಸಾಮಾನ್ಯ ಬೋಗಿಯನ್ನು ತೆಗೆದು, ತಲಾ 2 ಎಸಿ ಟು ಟೈಯರ್ ಮತ್ತು ಎಸಿ ತ್ರಿ ಟೈಯರ್ ಬೋಗಿಗಳನ್ನು ಆಗಸ್ಟ್ 3 ರಿಂದ ದಾನಪುರ ಮತ್ತು ಆಗಸ್ಟ್ 5 ರಂದು ಬೆಂಗಳೂರಿನಿಂದ ಶಾಶ್ವತವಾಗಿ ಜೋಡಿಸಲಾಗುತ್ತಿದೆ.
3. ರೈಲುಗಳ ಸಂಖ್ಯೆ 03251/03252 ದಾನಾಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳಿಗೆ 3 ಸಾಮಾನ್ಯ ಬೋಗಿಗಳನ್ನು ತೆಗೆದು, ತಲಾ 2 ಎಸಿ ಟು ಟೈಯರ್, ಎಸಿ ತ್ರಿ ಟೈಯರ್ ಮತ್ತು ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಆಗಸ್ಟ್ 6 ರಿಂದ ದಾನಪುರ ಮತ್ತು ಆಗಸ್ಟ್ 8 ರಂದು ಬೆಂಗಳೂರಿನಿಂದ ಶಾಶ್ವತವಾಗಿ ಜೋಡಿಸಲಾಗುತ್ತಿದೆ.
4. ರೈಲುಗಳ ಸಂಖ್ಯೆ 03259/03260 ದಾನಾಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳಿಗೆ 2 ಸಾಮಾನ್ಯ ಬೋಗಿಗಳನ್ನು ತೆಗೆದು, 1 ಎಸಿ ಟು ಟೈಯರ್ ಬೋಗಿಯನ್ನು ಆಗಸ್ಟ್ 8 ರಿಂದ ದಾನಪುರ ಮತ್ತು ಆಗಸ್ಟ್ 10 ರಂದು ಬೆಂಗಳೂರಿನಿಂದ ಶಾಶ್ವತವಾಗಿ ಜೋಡಿಸಲಾಗುತ್ತಿದೆ.
ಎಸಿ ಟು ಟೈಯರ್(2) ಎಸಿ ತ್ರಿ ಟೈಯರ್(4), ಸ್ಲೀಪರ್ ಕ್ಲಾಸ್ (12), ಸಾಮಾನ್ಯ ದ್ವಿತೀಯ ದರ್ಜೆ(3) ಮತ್ತು ದಿವ್ಯಾಂಗ್ ಸ್ನೇಹಿ ಬೋಗಿಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್ ವ್ಯಾನ್(2) ಪರಿಷ್ಕೃತ ಬೋಗಿಗಳ ಸಂಯೋಜನೆಯೊಂದಿಗೆ ಈ ಮೇಲಿನ ರೈಲುಗಳು ಸಂಚರಿಸಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.