ಬೆಂಗಳೂರು: ಮಂಗಳವಾರ 11 ಗಂಟೆ ಒಳಗೆ ಸ್ಪೀಕರ್ ಎದುರು ಹಾಜರಾಗಿ ಇಲ್ಲವೇ ಅನರ್ಹತೆ ಶಿಕ್ಷೆ ಅನುಭವಿಸಿ ಎಂದು ಅತೃಪ್ತ ಶಾಸಕರನ್ನು ಎಚ್ಚರಿಸಿರುವ ಡಿಕೆಶಿ, ಒಂದು ವೇಳೆ ನೀವೇನಾದರೂ ಸದನಕ್ಕೆ ಹಾಜರಾಗದಿದ್ದಲ್ಲಿ ಸುಮಾರು 15 ವರ್ಷಗಳಿಗೂ ಅಧಿಕವಾದ ನಿಮ್ಮ ರಾಜಕೀಯ ಜೀವನ ಕೊನೆಗೊಳ್ಳುವುದು ಖಚಿತ. ಹಾಗಾಗಿ ಇದ್ಯಾವುದಕ್ಕೂ ಅವಕಾಶ ಕೊಡದೆ ಸದನಕ್ಕೆ ಹಾಜರಾಗಿ ಎಂದು ರೆಬೆಲ್ ಶಾಸಕರಿಕೆ ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದ್ದಾರೆ.
ಅತೃಪ್ತ ಶಾಸಕರು ಮಂಗಳವಾರ ಬೆಳಿಗ್ಗೆ 11 ಗಂಟೆ ಒಳಗೆ ಸ್ಪೀಕರ್ ಎದುರು ಹಾಜರಾಗದೇ ಇದ್ದಲ್ಲಿ ಸ್ಪೀಕರ್ ಕಾನೂನು ರೀತಿ ಕ್ರಮ ಕೈಗೊಳ್ಳಲಿದ್ದಾರೆ, ಶಾಸಕತ್ವದಿಂದ ಅನರ್ಹರಾಗುತ್ತೀರಿ ಎನ್ನುವುದನ್ನು ಮನಗಾಣಿ ಎಂದು ಸಚಿವ ಡಿ.ಕೆ ಶಿವಕುಮಾರ್ ಅತೃಪ್ತ ಶಾಸಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ನೀವೆಲ್ಲ ಮಂತ್ರಿಯಾಗಲು ಆಸೆಪಟ್ಟಿದ್ದೀರಿ. ಈ ಮೂಲಕ ಬಿಜೆಪಿಯವರ ಎಲ್ಲಾ ಅಸೆಗಳಿಗೂ ಅನುಕೂಲ ಮಾಡಿಕೊಟ್ಟಿದ್ದೀರಿ. ಆದರೆ ನಾಳೆ(ಮಂಗಳವಾರ) ಬೆಳಿಗ್ಗೆ 11 ಗಂಟೆಯೊಳಗೆ ಎಲ್ಲಾ ಅತೃಪ್ತ ಶಾಸಕರೂ ಸದನಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಅನರ್ಹಗೊಳ್ಳುವ ಎಲ್ಲಾ ಸಾಧ್ಯತೆಯಿದೆ. ಈ ಬಗ್ಗೆ 164 ಐಬಿಯಲ್ಲಿ ಇದರ ಬಗ್ಗೆ ಸ್ಪಷ್ಟವಾದ ಉಲ್ಲೇಖ ಇದೆ. ಈ ಕುರಿತು ಎಲ್ಲಾ ಅತೃಪ್ತ ಶಾಸಕರಿಗೆ ಎಚ್ಚರಿಕೆ ಇಲ್ಲ. ಹಾಗಾಗಿ ಈ ಮಾಹಿತಿ ನೀಡುತ್ತಿದ್ದೇನೆ ಎಂದು ಟ್ರಬಲ್ ಶೂಟರ್ ಅತೃಪ್ತರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸ್ಪೀಕರ್ ಬೆಳಗ್ಗೆ ನಮ್ಮ ನಿಲುವಳಿ ಸೂಚನೆ ಮೇರೆಗೆ ವಿಪ್ ನೀಡಲು ಯಾವ ತಡೆ ಇಲ್ಲ. ಶಾಸಕಾಂಗ ಪಕ್ಷದ ನಾಯಕರ ಅಧಿಕಾರವನ್ನು ನಾವು ಮೊಟಕುಗೊಳಿಸುವುದಿಲ್ಲ. ಶಾಸಕಾಂಗ ಪಕ್ಷದ ನಾಯಕರು ನಿಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಬಹುದು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇದು ರೂಲಿಂಗ್ ಕೂಡ ಆಗಿದೆ. ರೂಲಿಂಗ್ ಹಿನ್ನಲೆಯಲ್ಲಿ ಅನರ್ಹತೆ ಕುರಿತು ತೀರ್ಮಾನ ಮಾಡಲು ಶಾಸಕಾಂಗ ನಾಯಕರು ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಅತೃಪ್ತರ ಅರ್ಜಿ ತೀರ್ಮಾನ ಆಗುವ ಮುನ್ನ ಇಲ್ಲಿ ತೀರ್ಮಾನ ಆಗಬೇಕು ಎನ್ನುವುದು ನಮ್ಮ ಮನವಿ ಎಂದರು.
ಮಂಗಳವಾರ ಬೆಳಗ್ಗೆ 11 ರ ಒಳಗೆ ಹಾಜರಾಗಲು ಸ್ಪೀಕರ್ ಅತೃಪ್ತ ಶಾಸಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಮಂತ್ರಿಯಾಗಲು ಆಸೆ ಪಟ್ಟಿದ್ದೀರಿ ಆ ಮೂಲಕ ಬಿಜೆಪಿಯವರಿಗೆ ಅನುಕೂಲ ಮಾಡಿಕೊಡುತ್ತಿದ್ದೀರಿ. ಒಂದು ವೇಳೆ ಮಂಗಳವಾರ 11 ಗಂಟೆ ಒಳಗೆ ಸ್ಪೀಕರ್ ಮುಂದೆ ಹಾಜರಾಗದಿದ್ದರೆ, ಅನರ್ಹತೆ ಶಿಕ್ಷೆಗೆ ಗುರಿಯಾಗಬಹುದು. ಶೆಡ್ಯೂಲ್ 10 ರ ಅಡಿ ಕ್ರಮಕ್ಕೆ ಅವಕಾಶ ಇದೆ. ಮುಂದಿನ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಇರಲ್ಲ. ನೀವು ಎಲ್ಲಿ ಇದ್ದಿರೋ ಅಲ್ಲಿಯೇ ನಿಯಮ 164 ಐಬಿ ಯಲ್ಲಿ ಸ್ಪಷ್ಟವಾಗಿ ಇದೆ.
DK Shivakumar, Congress: Speaker has served notice to rebel MLAs, giving them time till 11 AM tomorrow. BJP is trying to convince them that they won't be disqualified & they will be made ministers. As per Constitution of India, you can't be made a member once you're disqualified pic.twitter.com/RyKrLWeNCs
— ANI (@ANI) July 22, 2019
ಅನರ್ಹರಾದರೆ ಶಾಸಕರಾಗಲು ಸಾಧ್ಯವಿಲ್ಲ:
ನೀವು ಅನರ್ಹರಾದರೆ ಯಾವ ಕಾರಣಕ್ಕೂ ಈಗ ಶಾಸಕರಾಗಲು ಸಾಧ್ಯವಿಲ್ಲ. ಇದರಿಂದ ನಿಮ್ಮ 30 ವರ್ಷದ ರಾಜಕೀಯ ಮುಗಿಸಲು ಬಿಜೆಪಿಯವರು ಯತ್ನ ಮಾಡುತ್ತಿದ್ದಾರೆ. ಹಾಗಾಗಿ ನಾಳೆ(ಮಂಗಳವಾರ) ಬಂದು ಸ್ಪೀಕರ್ ಎದುರು ಹಾಜರಾಗಿ, ಇಲ್ಲದಿದ್ದಲ್ಲಿ ಸ್ಪೀಕರ್ ಕಾನೂನು ರೀತಿ ಕ್ರಮಕೈಗೊಳ್ಳಲಿದ್ದಾರೆ ಇದು ನಿಮಗೆ ಕಡೆಯ ಅವಕಾಶ ಎಂದು ಅತೃಪ್ತ ಶಾಸಕರಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.