ಹೊಸ ವರ್ಷಾಚರಣೆಗೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ!

ಹೊಸ ವರ್ಷಾಚರಣೆ ಬಳಿಕ ತಮ್ಮ ಸ್ಥಳಗಳಿಗೆ ತೆರಳುವವರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಗಲೆಂದು ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1, 2019ರ ಮುಂಜಾನೆ 1.30ರವರೆಗೆ ಮೆಟ್ರೋ ರೈಲುಗಳು ಸಂಚರಿಸಲಿವೆ. 

Last Updated : Dec 27, 2018, 06:31 PM IST
ಹೊಸ ವರ್ಷಾಚರಣೆಗೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ! title=

ಬೆಂಗಳೂರು: ಹೊಸ ವರ್ಷಾಚರಣೆ ದಿನದಂದು ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಹೆಚ್ಚುವರಿ ಸೇವೆ ಒದಗಿಸಲು ನಿರ್ಧರಿಸಿದೆ. 

ಹೊಸ ವರ್ಷಾಚರಣೆ ಬಳಿಕ ತಮ್ಮ ಸ್ಥಳಗಳಿಗೆ ತೆರಳುವವರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಗಲೆಂದು ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1, 2019ರ ಮುಂಜಾನೆ 1.30ರವರೆಗೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಬಳಿಕ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೂ 01.01.2019ರ ಮಂಗಳವಾರ ಬೆಳಗಿನ ಜಾವ 2.00 ಗಂಟೆಗೆ ಕೊನೆಯ ಮೆಟ್ರೋ ರೈಲು ಹೊರಡಲಿದೆ. ಈ ವಿಸ್ತರಣೆಗೊಂಡ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿವೆ. 

ಮತ್ತೊಂದು ವಿಶೇಷವೆಂದರೆ, ಈ ವಿಸ್ತರಣೆಯಾದ ಅವಧಿಯಲ್ಲಿ ಪ್ರಯಾಣಿಕರು ತಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಸಿ ಎಂದಿನಂತೆ ಪ್ರಯಾಣಿಸಬಹುದು. ಉಳಿದಂತೆ ವಿಸ್ತರಣೆಯಾದ ಅವಧಿಯಲ್ಲಿ ಟೋಕನ್‌ಗಳು ಮತ್ತು ಸ್ಮಾರ್ಟ್ ಕಾರ್ಡ್‌ಗಳನ್ನು ಹೊಂದಿರುವ ಪ್ರಯಾಣಿಕರು ಯಾವುದೇ ನಿಲ್ದಾಣಗಳಿಂದ ಪ್ರಯಾಣಿಸಬಹುದು. ಇವುಗಳಿಗೆ ಸಾಮಾನ್ಯ ದರ ವಿಧಿಸಲಾಗುವುದು ಎಂದು ಬಿಎಂಆರ್​​ಸಿಎಲ್ ಪ್ರಕಟಣೆ ತಿಳಿಸಿದೆ.

Trending News