ಶ್ವಾನ ಪ್ರಿಯರಿಗೆ ಬಿಗ್ ಶಾಕ್; ಇನ್ಮುಂದೆ ನಾಯಿ ಸಾಕಲೂ ಬೇಕು ಲೈಸನ್ಸ್!

ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್'ನಲ್ಲಿ ವಾಸಿಸುವ ನಿವಾಸಿಗಳು ಮನೆಗೆ ಒಂದರಂತೆ ಹಾಗೂ ಮನೆಗಳಲ್ಲಿ ವಾಸಿರುವವರು ಎರಡು ಶ್ವಾನಗಳನ್ನು ಮಾತ್ರ ಸಾಕಲು ಬಿಬಿಎಂಪಿ ಅವಕಾಶ ನೀಡಿದೆ. 

Last Updated : Jun 7, 2018, 11:48 AM IST
ಶ್ವಾನ ಪ್ರಿಯರಿಗೆ ಬಿಗ್ ಶಾಕ್; ಇನ್ಮುಂದೆ ನಾಯಿ ಸಾಕಲೂ ಬೇಕು ಲೈಸನ್ಸ್! title=

ಬೆಂಗಳೂರು: ಇತ್ತೀಚಿಗೆ ಇಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳಲ್ಲಿ ತಮಗಿಷ್ಟವಾದ ನಾಯಿಗಳನ್ನು ಸಾಕುವುದು ಒಂದು ಶೋಕಿಯಾಗಿಬಿಟ್ಟಿದೆ. ಮಕ್ಕಲಿಳರವ್ವ ಮನೆ ತುಂಬಾ ಎಂಬ ಹಿರಿಯರ ಮಾತಿಗೆ ಬದಲಾಗಿ ಶ್ವಾನಗಳಿರಲವ್ವ ಮನೆ ತುಂಬಾ ಎಂಬಂತಾಗಿದೆ. ಹಾಗಾಗಿ ಇದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. 

ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್'ನಲ್ಲಿ ವಾಸಿಸುವ ನಿವಾಸಿಗಳು ಮನೆಗೆ ಒಂದರಂತೆ ಹಾಗೂ ಮನೆಗಳಲ್ಲಿ ವಾಸಿರುವವರು ಎರಡು ಶ್ವಾನಗಳನ್ನು ಮಾತ್ರ ಸಾಕಲು ಬಿಬಿಎಂಪಿ ಅವಕಾಶ ನೀಡಿದೆ. ಅಷ್ಟೇ ಅಲ್ಲ, ಹೀಗೆ ಶ್ವಾನಗಳನ್ನು ಸುಮ್ಮನೆ ಸಾಕುವಂತಿಲ್ಲ. ಅದಕ್ಕೂ ಬೆಂಗಳೂರು ಮಹಾನಗರ ಪಾಲಿಕೆಯಿಂದ ಲೈಸನ್ ಪಡೆಯಬೇಕಿದೆ. ಲೈಸನ್ಸ್'ಗೆ 110 ರೂ. ಶುಲ್ಕ ನಿಗದಿಪಡಿಸಲಾಗಿದೆ. 

ಇನ್ನು, ಹೆಣ್ಣು ಶ್ವಾನಗಳಿದ್ದರೆ ಅದಕ್ಕೆ ಸಂತಾನ ಹರಣ ಚಿಕತ್ಸೆ ಮಾಡಿದಿದ್ದರೆ ಮಾತ್ರ ಬಿಬಿಎಂಪಿ ಪರವಾನಿಗೆ ನೀಡಲಿದೆ. ಅಲ್ಲದೆ, ಲೈಸನ್ಸ್ ಇಲ್ಲದೆ ನೀವೇನಾದರೂ ಶ್ವಾನಗಳನ್ನು ಸಾಕಲು ಮುಂದಾದಿರಾದರೆ, ಅದಕ್ಕೆ ಬಿಬಿಎಂಪಿ ಒಂದು ಸಾವಿರ ರೂ. ದಂಡ ಶುಲ್ಕ ವಿಧಿಸಲಿದೆ. ಜತೆಗೆ ಮಾಲೀಕರು ತಾವು ಸಾಕಿರುವ ಶ್ವಾನದ ಕುತ್ತಿಗೆಗೆ ಕಾಲರ್ ಐಡಿ ಹಾಕಿಸಬೇಕೆಂದೂ ಬಿಬಿಎಂಪಿ ತಾಕೀತು ಮಾಡಿದೆ. 

ಆದರೆ, ಬಿಬಿಎಂಪಿಯ ಈ ಹೊಸ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿರುವ ಬೆಂಗಳೂರಿನ ನಿವಾಸಿಗಳು #NotWithoutMyDog# ಅಭಿಯಾನಕ್ಕೆ ಮುಂದಾಗಿದ್ದಾರೆ. ಇದೀಗ ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಬಿಎಂಪಿ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Trending News