ನೀರಿನ ಸಮಸ್ಯೆಯೇ ಮೂಲ : ಬೆಂಗಳೂರಿನ ಹುಡುಗರಿಗೆ ಸಿಗುತ್ತಿಲ್ಲವಂತೆ ವಧು : ಅಳಲು ತೋಡಿಕೊಂಡ IT ಉದ್ಯೋಗಿ

 Water Problem In Bengaluru : ಇದೀಗ ಹೊಸ ಸುದ್ದಿಯೊಂದು ಕೇಳಿ ಬಂದಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲವಂತೆ.  

Written by - Ranjitha R K | Last Updated : Mar 11, 2024, 11:02 AM IST
  • ರಾಜ್ಯ ರಾಜಧಾನಿಯಲ್ಲಿ ನೀರಿನ ಸಮಸ್ಯೆ
  • ಕುಡಿಯುವ ನೀರಿಗೂ ತತ್ವಾರ ಬಂದೊದಗಿದೆ
  • ನೀರಿನ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಹುಡುಗರಿಗೆ ಸಿಗುತ್ತಿಲ್ಲ ಹೆಣ್ಣು
 ನೀರಿನ ಸಮಸ್ಯೆಯೇ ಮೂಲ : ಬೆಂಗಳೂರಿನ ಹುಡುಗರಿಗೆ ಸಿಗುತ್ತಿಲ್ಲವಂತೆ ವಧು : ಅಳಲು ತೋಡಿಕೊಂಡ IT ಉದ್ಯೋಗಿ title=

ಬೆಂಗಳೂರು : Water Problem In Bengaluru : ಈ ಬಾರಿ ಹೇಳಿಕೊಳ್ಳುವಂಥ ಮಳೆಯಾಗಿಲ್ಲ. ಅಲ್ಲದೆ ಫೆಬ್ರವರಿಯಿಂದಲೇ ನೆತ್ತಿ ಸುಡುವ ಬಿಸಿಲು. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ  ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿಗೂ ತತ್ವಾರ ಬಂದೊದಗಿದೆ. ಈ ಬಾರಿ ಸಕಾಲದಲ್ಲಿ ಮಳೆಯಾದರೆ ಪರಿಸ್ಥಿತಿ ಸುಧಾರಿಸಬಹುದು. ಇಲ್ಲದೆ ಹೋದರೆ ಬೆಂಗಳೂರಿಗರ ಪಾಡು ಹೇಳ ತೀರದು. 

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎನ್ನುವ ಸುದ್ದಿಯನ್ನು ಬಹಳ ದಿನಗಳಿಂದ ನಾವು ಕೇಳುತ್ತಲೇ ಇದ್ದೇವೆ. ಸರ್ಕಾರ ಕೂಡಾ ರಾಜಧಾನಿಯ ಜನರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಈ ನಡುವೆ ಹೊಸ ಸುದ್ದಿಯೊಂದು ಕೇಳಿ ಬಂದಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲವಂತೆ.

ಇದನ್ನೂ ಓದಿ : ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳಿಗೆ ಸಂಸ್ಕರಿಸಿದ ನೀರು: BWSSB ಮಹತ್ವದ ನಿರ್ಧಾರ

ವಧು ಸಿಗುತ್ತಿಲ್ಲ : 
 ಸಿಲಿಕಾನ್ ಸಿಟಿಯಲ್ಲಿ ಕುಡಿಯಲು ನೀರಿಲ್ಲ, ಇದೇ ಕಾರಣಕ್ಕೆ ವರನಿಗೆ ವಧು ಸಿಗುತ್ತಿಲ್ಲ ಎಂದು IT ಉದ್ಯೋಗಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. IT ಉದ್ಯೋಗಿ ಆಗಿದ್ದರೂ ತನ್ನ ಸ್ನೇಹಿತನಿಗೆ ಕರಿಮಣಿ ಮಾಲೀಕನಾಗದ ಭಾಗ್ಯ ಇಲ್ಲಎಂದು ಸ್ನೇಹಿತನ ಸಮಸ್ಯೆಯ ಬಗ್ಗೆ ವ್ಯಕ್ತಿಯೊಬ್ಬರು X ನಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಸ್ನೇಹಿತನಿಗೆ ಇಲ್ಲ ಶಾದಿ ಭಾಗ್ಯ : 
ಅಲ್ಲದೆ,  ತಮ್ಮ ಪೋಸ್ಟ್ ಅನ್ನು ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿ ನೀರಿನ ಸಮಸ್ಯೆ ಮುಕ್ತಗೊಳಿಸಿ ಎಂದು ಆಗ್ರಹಿಸಿದ್ದಾರೆ. ಸ್ನೇಹಿತನಿಗೆ ಶಾದಿ ಭಾಗ್ಯ ಸಿಗುತ್ತಿಲ್ಲ ಎಂದು ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ನೋವು ಹೊರ ಹಾಕಿದ್ದಾರೆ.ಜಲ ಕಂಟಕ ಎದುರಿಸುತ್ತಿರುವ ಬೆಂಗಳೂರಿನ ಉದ್ಯೋಗಿ ಬೇಡ ಎನ್ನುತ್ತಾರೆ ಹೆಣ್ಣು ಮಕ್ಕಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ : "ಅಭಿವೃದ್ಧಿಗೆ ದುಡ್ಡೇ ಇಲ್ಲ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಸುಳ್ಳೇ ಮನೆದೇವರು"

ಟ್ವೀಟ್ ನಲ್ಲಿ ಏನಿದೆ ? :
ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ, ಆದ್ಯತೆಯ ಮೇರೆಗೆ  ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು ವಧುವಿನ ಹುಡುಕಾಟದಲ್ಲಿದ್ದಾರೆ. ಎಷ್ಟೇ ಹುಡುಕಿದರೂ ವಧು ಸಿಗುತ್ತಿಲ್ಲ. ಬೆಂಗಳೂರಿನ ನೀರಿನ ಸಮಸ್ಯೆಯಿಂದಾಗಿ ಯಾವುದೇ ಹುಡುಗಿಯರು  ಬೆಂಗಳೂರು ಉದ್ಯೋಗಿಯೊಂದಿಗೆ ಮದುವೆಯಾಗಲು ಸಿದ್ಧರಿಲ್ಲ ಏರ್ನ್ದು ಅವರು ಸಾಮಾಜಿಕ ಮಾಧ್ಯಮದಲ್ಲಿ  ಬರೆದುಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News