Tragic Bus Mishap in Bangalore : ಒಂದು ಕಾಲದಲ್ಲಿ ಬಿಎಂಟಿಸಿ ಅತ್ಯುತ್ತಮ ಟ್ರಾನ್ಸ್ಪೂರ್ಟ್ ವ್ಯವಸ್ಥೆಗೆ ಹೆಸರು ವಾಸಿಯಾಗಿತ್ತು. ಅದ್ರೀಗ ಅದೇ ಬಿಎಂಟಿಸಿ ಇದೀಗ ಕಿಲ್ಲರ್ ಬಿಎಂಟಿಸಿ ಅನ್ನೊ ಬಿರುದ್ದು ಪಡೆದುಕೊಂಡಿದೆ. ನಗರದಲ್ಲಿ ಒಂದಲ್ಲಾ ಒಂದು ಅಪಘಾತ ಮಾಡಿ ಬಲಿ ತೆಗೆದುಕೊಂಡೆ ಡಿಫೊ ಸೇರೊದು ಎನ್ನುವಂತಾಗಿದೆ. ಹಾಗಿದ್ರೆ ಬಿಎಂಟಿಸಿ ಬಸ್ ಇಂದು ಬಲಿಯಾದ ಅಮಾಯಕ ಜೀವ ಯಾವುದು ಅನ್ನೊ ಸ್ಟೋರಿ ಇಲ್ಲಿದೆ.
ಈ ಸಿಸಿ ಕ್ಯಾಮರಾ ದೃಶ್ಯಗಳನ್ನೊಮ್ಮೆ ಗಮನಿಸಿ. ನೋಡು ನೋಡುತ್ತಿದ್ದಂತೆ ಜನ ರಸ್ತೆಗೆ ಓಡಿ ಬರ್ತಾರೆ. ಹೋಗುತ್ತಿದ್ದ ಹಸಿರು ಬಣ್ಣದ ಬಿಎಂಟಿಸಿ ಬಸ್ ತಡೆದು ನಿಲ್ಲಿಸ್ತಾರೆ. ಅಯ್ಯಯ್ಯೊ ಅಂತಾ ಬಸ್ ಹಿಂಬದಿ ಚಕ್ರಕ್ಕೆ ಸಿಕ್ಕ ದ್ವಿಚಕ್ರ ವಾಹನ ಮತ್ತು ಚಾಲನೆ ಮಾಡುತ್ತಿದ್ದ ಯುವತಿಯನ್ನ ರಕ್ಷಣೆಗೆ ಮುಂದಾಗ್ತಾರೆ. ಈ ಘಟನೆ ನಡೆದಿದ್ದು ನಗರದ ಮಲ್ಲೇಶ್ವರಂ ನ ಹರಿಶ್ಚಂದ್ರ ಘಾಟ್ ಬಳಿಯ ರಸ್ತೆಯಲ್ಲಿ.
ಇದನ್ನೂ ಓದಿ:ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಹೌದು, ಮಲ್ಲೇಶ್ವರಂ ನಿವಾಸಿ ಆಗಿರುವ ಕುಸುಮಿತಾ ಪ್ರಾಣ ಕಳೆದುಕೊಂಡ ಅಮಾಯಕಿ. ಕೆಂಗೇರಿ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ಲು. ಎಂದಿನಂತೆ ಇಂದು ಬೆಳಗ್ಗೆ ರೆಡಿಯಾಗಿ ಕಾಲೇಜಿಗೆ ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ಲು. ಹರಿಶ್ಚಂದ್ರ ಘಾಟ್ ಬಳಿ ಹೋಗುವಾಗ ವೇಗವಾಗಿ ಬಂದ ಬಿಎಂಟಿಸಿ ಬಸ್ ಕುಸುಮಿತಾಳ ಬೈಕ್ ಗೆ ಸೈಡ್ ನಿಂದ ಡಿಕ್ಕಿ ಹೊಡೆದಿದೆ.
ಈ ವೇಳೆ ಬ್ಯಾಲೆನ್ಸ್ ಕಳೆದುಕೊಂಡ ವಿದ್ಯಾರ್ಥಿನಿ ಬಲಕ್ಕೆ ಬಿದ್ದಿದ್ದಾಳೆ. ಇದನ್ನ ಗಮನಿಸದ ಚಾಲಕ ಬಸ್ ಹಿಂಬದಿ ಚಕ್ರವನ್ನ ಯುವತಿಯ ಮೇಲೆ ಹತ್ತಿಸಿದ್ದಾನೆ. ತಕ್ಷಣ ಎಚ್ಚೆತ್ತ ಸಾರ್ವಜನಿಕರು ಬಸ್ ನಿಲ್ಲಿಸುವಂತೆ ತಡೆದಿದ್ದಾರೆ. ಅಷ್ಟರಲ್ಲಾಗಲೇ ಬಸ್ ವಿದ್ಯಾರ್ಥಿನಿಯ ಮೇಲೆ ಹರಿದುಬಿಟ್ಟಿತ್ತು. ಘಟನೆ ಗೊತ್ತಾದ ಬೆನ್ನಲ್ಲೆ ಕುಸುಮಿತಾ ಪೊಷಕರು ಓಡೊಡಿ ಬಂದಿದ್ದಾರೆ. ಅಗಷ್ಟೇ ಅಪ್ಪ ಅಮ್ಮನಿಗೆ ಬಾಯ್ ಹೇಳಿ ಬಂದಗಳು ಉಸಿರು ನಿಲ್ಲಿಸಿದ್ದಾಳೆ ಅನ್ನೊದನ್ನೆ ಕೇಳಿ ದಿಕ್ಕುತೋಚದೆ ಗೋಳಿಡುತ್ತಿದ್ದಾರೆ.
ಇದನ್ನೂ ಓದಿ:ಅಡುಗೆ ಮಾಡಿಲ್ಲ ಅಂತ ಹೆತ್ತ ತಾಯಿಯ ತಲೆ ಸೀಳಿ ಹತ್ಯೆಗೈದ ಪಾಪಿ ಪುತ್ರ..!
ತಕ್ಷಣ ಯುವತಿಯನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆಗೆ ಮುಂದಾಗಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೆ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಇತ್ತ ಘಟನೆಯ ಬೆನ್ನಲ್ಲೆ ಬಸ್ ಚಾಲಕ ಪರಾರಿಯಾಗಿದ್ದಾನೆ. ವಿಷಯ ತಿಳಿದು ಪ್ರಕರಣ ದಾಖಲು ಮಾಡಿದ ಮಲ್ಲೇಶ್ವರಂ ಸಂಚಾರ ಪೊಲೀಸರು ಚಾಲಕನ ಪತ್ತೆಗೆ ಮುಂದಾಗಿದ್ದಾರೆ. ಅದೇನೆ ಇರಲಿ ಮನೆಯಿಂದ ಕಾಲೇಜಿಗೆ ಹೊರಟ ವಿದ್ಯಾರ್ಥಿನಿ ಮಸಣ ಸೇರಿದ್ದು ಕಿಲ್ಲರ್ ಬಿಎಂಟಿಸಿಯಿಂದ ಅನ್ನೊದೆ ದುರಂತ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.