ಏಸೂ ಕನಸಲ್ಲಿ ಬಂದು ಹೇಳಿದಕ್ಕೆ ಶಿವಕುಮಾರ ಶ್ರೀಗಳ ಪುತ್ಥಳಿ ವಿರೂಪಗಳಿಸಿದನಂತೆ: ಮತಾಂಧನ ವಿಕೃತಿ ಬಯಲು

ಬೆಂಗಳೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗೆಯ ಸಿದ್ಧಿ ಪುರುಷ, ನಡೆದಾಡುವ ದೇವರು ಶಿವಕುಮಾರ ಶ್ರೀಗಳು ಎಂದರೇ ನಾಡಿನೆಲ್ಲೆಡೆ ಅಪಾರ ಭಕ್ತಿ, ಗೌರವ. ಇಂತಹ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಾಂಧ ರಾಜ್ ಶಿವು ಎಂಬಾತನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. 

Written by - VISHWANATH HARIHARA | Last Updated : Dec 5, 2024, 08:40 AM IST
  • ಶ್ರೀಗಳ ಪುತ್ಥಳಿಯನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಾಂಧ ರಾಜ್ ಶಿವು ಎಂಬಾತನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
  • ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಇತ್ತಿಚೆಗೆ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು.
  • ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಆರೋಪಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಏಸೂ ಕನಸಲ್ಲಿ ಬಂದು ಹೇಳಿದಕ್ಕೆ ಶಿವಕುಮಾರ ಶ್ರೀಗಳ ಪುತ್ಥಳಿ ವಿರೂಪಗಳಿಸಿದನಂತೆ: ಮತಾಂಧನ ವಿಕೃತಿ ಬಯಲು title=

ಬೆಂಗಳೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗೆಯ ಸಿದ್ಧಿ ಪುರುಷ, ನಡೆದಾಡುವ ದೇವರು ಶಿವಕುಮಾರ ಶ್ರೀಗಳು ಎಂದರೇ ನಾಡಿನೆಲ್ಲೆಡೆ ಅಪಾರ ಭಕ್ತಿ, ಗೌರವ. ಇಂತಹ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಾಂಧ ರಾಜ್ ಶಿವು ಎಂಬಾತನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಇತ್ತಿಚೆಗೆ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಆದರೆ ಕಳೆದ ಶನಿವಾರ ಮಧ್ಯರಾತ್ರಿ 1.5 ರ ಸುಮಾರಿಗೆ ಎಂಟ್ರಿ ಕೊಟ್ಟಿದ್ದ ರಾಜ್ ಶಿವು ಸುತ್ತಿಗೆ ತಂದು ಪುತ್ಥಳಿಗೆ ಹಾನಿ ಮಾಡಿದ್ದ. ಜನ ಇನ್ನೇನೂ ಈತನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಈತ ಎಸ್ಕೇಪ್ ಆಗಿದ್ದ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಆರೋಪಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕನಸಿನಲ್ಲಿ ಏಸು ಬಂದು ಪುತ್ಥಳಿ ಒಡೆಯಲು ಹೇಳಿದ್ರೂ
ಇನ್ನೂ ಈ ಆರೋಪಿ ರಾಜ್ ಶಿವು ತಾಯಿ ಕೆಲ ವರ್ಷಗಳ ಹಿಂದೆ ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಳು. ರಾಜ್ ಶಿವು ಸಹ ಏಳು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಯಾವಾಗ ಕ್ರಿಶ್ಚಿಯನ್ ಧರ್ಮದ ಪಾಲನೆ ಶುರು ಮಾಡಿದನೋ ಹಿಂದೂ ದೇವತೆಗಳು, ಸಾಧು, ಸಂತರು, ಸನ್ಯಾಸಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಹೀಗಾಗಿ ಇತ್ತಿಚೆಗೆ ಸ್ಥಾಪನೆಯಾದ ಶಿವಕುಮಾರ ಶ್ರೀಗಳ ಪುತ್ಥಳಿ ಕಣ್ಣಿಗೆ ಬಿದ್ದು ಅದನ್ನು ಟಾರ್ಗೆಟ್ ಮಾಡಿದ್ದ. ಪ್ಲಾನ್ ಮಾಡಿಕೊಂಡು ಬಂದು ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದವನು ಗಿರಿನಗರ ವ್ಯಾಪ್ತಿಗೆ ಬಂದು ಹಾನಿ ಮಾಡಿದ್ದಾನೆ. 

ಇನ್ನೂ ಪೊಲೀಸರ ವಿಚಾರಣೆ ವೇಳೆ ನನಗೆ ಸ್ವತಃ ಏಸೂವೇ ಕನಸಿನಲ್ಲಿ ಬಂದು ಪುತ್ಥಳಿ ಒಡೆಯಲು ಹೇಳಿದರು ಎಂದಿದ್ದಾನಂತೆ ಈ ಮಾತನ್ನು ಕೇಳಿ ಪೊಲೀಸರು ಸಹ ಶಾಕ್ ಆಗಿದ್ದಾರೆ.. ಇಷ್ಟೇ ಅಲ್ಲಾ ಈತ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಭಿತ್ತಿಪತ್ರ ಹಂಚುವುದು, ಅದರಲ್ಲಿ ಕ್ಯೂಆರ್ ಕೋಡ್ ಇಟ್ಟು ಕೋಡ್ ಸ್ಕ್ಯಾನ್ ಮಾಡಿದ್ದ ತಕ್ಷಣ ಬೈಬಲ್ ಓಪನ್ ಆಗುವಂತೆ ಮಾಡಿ ಹಲವರನ್ನು ಮತಾಂತರ ಮಾಡುವ ಪ್ರಯತ್ನ ನಡೆಸಿದ್ದಾನೆ ಎಂಬ ಆರೋಪವಿದೆ. ಸದ್ಯ ಆ ಭಿತ್ತಿಪತ್ರಗಳನ್ನು ವಶಪಡಿಸಿಕೊಂಡಿರುವ  ಪೊಲೀಸರು ಈ ಆಯಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News