ಬೆಸ್ಕಾಂ ಗ್ರಾಹಕರೇ ನಕಲಿ ಬಿಲ್‌ ಬಗ್ಗೆ ಎಚ್ಚರವಿರಲಿ !

ʼಬೆಸ್ಕಾಂ ವಿದ್ಯುತ್‌ ಬಿಲ್‌ ತುಲನೆʼ (Comparison) ಹೆಸರಿನಲ್ಲಿ ನಕಲಿ ಬಿಲ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೇ 2023 ಮತ್ತು ಜೂನ್‌ 2023ರ ಗೃಹ ಬಳಕೆಯ ವಿದ್ಯುತ್‌ ಬಿಲ್‌ ಗಳನ್ನು ತುಲನೆ ಮಾಡಿ, ಜೂನ್‌ ತಿಂಗಳಲ್ಲಿ ಬೆಸ್ಕಾಂ ಶೇ. 50ರಷ್ಟು ಹೆಚ್ಚು  ವಿದ್ಯುತ್‌ ಶುಲ್ಕವನ್ನು ಗ್ರಾಹಕರಿಂದ ಸಂಗ್ರಹಿಸುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. 

Written by - Manjunath N | Last Updated : Jun 14, 2023, 04:28 PM IST
  • ಈ ಬಿಲ್‌ ನಲ್ಲಿ ಗ್ರಾಹಕನ ಆರ್.‌ ಆರ್.‌ ನಂಬರ್‌ ಆಗಲಿ ಅಥವಾ ಖಾತೆ ಸಂಖ್ಯೆ (ಅಕೌಂಟ್‌ ಐಡಿ) ಇಲ್ಲ
  • ಹಾಗೆಯೆ ಗ್ರಾಹಕರ ಹೆಸರು ಮತ್ತು ವಿಳಾಸ ಕೂಡ ಇಲ್ಲ
  • ಆದರೆ ದುಪ್ಪಟ್ಟು ಬಿಲ್‌ ನಮೂದಿಸಿ ಸಾರ್ವಜನಿಕರಲ್ಲಿ ವಿದ್ಯುತ್‌ ಸರಬರಾಜು ಕಂಪನಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ
ಬೆಸ್ಕಾಂ ಗ್ರಾಹಕರೇ ನಕಲಿ ಬಿಲ್‌ ಬಗ್ಗೆ ಎಚ್ಚರವಿರಲಿ ! title=

ಬೆಂಗಳೂರು: ʼಬೆಸ್ಕಾಂ ವಿದ್ಯುತ್‌ ಬಿಲ್‌ ತುಲನೆʼ (Comparison) ಹೆಸರಿನಲ್ಲಿ ನಕಲಿ ಬಿಲ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೇ 2023 ಮತ್ತು ಜೂನ್‌ 2023ರ ಗೃಹ ಬಳಕೆಯ ವಿದ್ಯುತ್‌ ಬಿಲ್‌ ಗಳನ್ನು ತುಲನೆ ಮಾಡಿ, ಜೂನ್‌ ತಿಂಗಳಲ್ಲಿ ಬೆಸ್ಕಾಂ ಶೇ. 50ರಷ್ಟು ಹೆಚ್ಚು  ವಿದ್ಯುತ್‌ ಶುಲ್ಕವನ್ನು ಗ್ರಾಹಕರಿಂದ ಸಂಗ್ರಹಿಸುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. 

ಈ ಬಿಲ್‌ ನಲ್ಲಿ ಗ್ರಾಹಕನ ಆರ್.‌ಆರ್.‌ನಂಬರ್‌ ಆಗಲಿ ಅಥವಾ ಖಾತೆ ಸಂಖ್ಯೆ (ಅಕೌಂಟ್‌ ಐಡಿ) ಇಲ್ಲ.ಹಾಗೆಯೆ ಗ್ರಾಹಕರ ಹೆಸರು ಮತ್ತು ವಿಳಾಸ ಕೂಡ ಇಲ್ಲ.ಆದರೆ ದುಪ್ಪಟ್ಟು ಬಿಲ್‌ ನಮೂದಿಸಿ ಸಾರ್ವಜನಿಕರಲ್ಲಿ ವಿದ್ಯುತ್‌ ಸರಬರಾಜು ಕಂಪನಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ. 

ಇದನ್ನೂ ಓದಿ: ಮಳೆಗಾಲದ ಸಿದ್ದತೆ ಕುರಿತು ಮುಖ್ಯ ಆಯುಕ್ತರಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ

ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ನಕಲಿ ಬಿಲ್‌ ನಲ್ಲಿ ಮೇ ತಿಂಗಳಲ್ಲಿ ನಮೂದಿಸಿರುವ ವಿದ್ಯುತ್‌ ದರದಲ್ಲಿ ಇಂಧನ ಹೊಂದಾಣಿಕೆ ವೆಚ್ಚವನ್ನು (FAC) ಪ್ರತಿ ಯೂನಿಟ್‌ ಗೆ 55 ಪೈಸೆ ಯಷ್ಟು ಬೆಸ್ಕಾಂ ವಿಧಿಸಿತ್ತು ಎಂದು  ಹೇಳಲಾಗಿದೆ. ಆದರೆ ಮೇ ತಿಂಗಳ ಬಿಲ್‌ ನಲ್ಲಿ ಪ್ರತಿ ಯೂನಿಟ್‌ ಗೆ ಕೇವಲ 6 ಪೈಸೆ ಮಾತ್ರ ಇಂಧನ ಹೊಂದಾಣಿಕೆ ವೆಚ್ಚವನ್ನು ಬೆಸ್ಕಾಂ ತನ್ನ ಗ್ರಾಹಕರಿಂದ ಸಂಗ್ರಹಿಸಿತ್ತು.ಹಾಗೆಯೆ ಜೂನ್‌ ತಿಂಗಳ ವಿದ್ಯುತ್‌ ಬಿಲ್‌ ನಲ್ಲಿ ಇಂಧನ ಹೊಂದಾಣಿಕೆ ವೆಚ್ಚ (FAC) ವನ್ನು ಪ್ರತಿ ಯೂನಿಟ್‌ ಗೆ 2.64 ಪೈಸೆ ಯಷ್ಟು ಬೆಸ್ಕಾಂ ವಿಧಿಸಿದೆ ಎಂದು ನಕಲಿ ಬಿಲ್‌ ನಲ್ಲಿ ನಮೂದಿಸಲಾಗಿದೆ. ಆದರೆ ಜೂನ್‌ ತಿಂಗಳ ಬಿಲ್‌ ನಲ್ಲಿ ಇಂಧನ ಹೊಂದಾಣಿಕೆ ವೆಚ್ಚ ಪ್ರತಿ ಯೂನಿಟ್‌ ಗೆ 59 ಪೈಸೆ ಯಷ್ಟು ಹಿಂಬಾಕಿಯಾಗಿ ಬೆಸ್ಕಾಂ ಸಂಗ್ರಹಿಸುತ್ತಿದೆ.ಈ ನಕಲಿ ಬಿಲ್‌ ನ್ನು ಯಾರೂ ಪರಿಗಣಿಸಬೇಡಿ ಎಂದು ಬೆಸ್ಕಾಂ ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ. ವಿದ್ಯುತ್ ಬಿಲ್‌ ನಲ್ಲಿ ಗೊಂದಲ ಇದ್ದರೆ ಸಂಬಂಧ ಪಟ್ಟ ಉಪ ವಿಭಾಗ ಕಚೇರಿಗೆ ಹೋಗಿ ಪರಿಹರಿಸಿಕೊಳ್ಳಲು ಗ್ರಾಹಕರಿಗೆ ವಿನಂತಿಸಿದೆ. 

ಇದನ್ನೂ ಓದಿ: ಪಾವಗಡ ಸೋಲಾರ್ ಪಾರ್ಕ್- ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿ

ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿರುವ ನಕಲಿ ಬಿಲ್‌ ನಲ್ಲಿ ಮೇ ತಿಂಗಳ ವಿದ್ಯುತ್‌ ಶುಲ್ಕ, 131 ಯೂನಿಟ್‌ ವಿದ್ಯುತ್‌ ಬಳಕೆಗೆ  1162 ರೂ.ಎಂದು ನಮೂದಿಸಲಾಗಿದೆ.ಅದೇ ರೀತಿ ಜೂನ್‌ ತಿಂಗಳ ವಿದ್ಯುತ್‌ ಶುಲ್ಕದಲ್ಲಿ 163 ಯೂನಿಟ್‌ ವಿದ್ಯುತ್‌ ಬಳಕೆಗೆ 2166 ರೂ ಎಂದು ನಮೂದಿಸಲಾಗಿದೆ. ಎರಡೂ ತಿಂಗಳ ವಿದ್ಯುತ್‌ ಬಳಕೆಗೆ ಸಂಬಂಧಿಸಿದಂತೆ ಬೆಸ್ಕಾಂ ಲೆಕ್ಕೀಕರಿಸಿರುವ ನೈಜ ಬಿಲ್‌ ಚಿತ್ರಣ ಇಲ್ಲಿ ನೀಡಲಾಗಿದೆ.ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿರುವ ನಕಲಿ ಬಿಲ್‌ ಕೂಡ ಇಲ್ಲಿ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News