ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಕರ್ನಾಟಕ ಸೇರಿ ದೇಶದಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬಿಜೆಪಿ ಕಿಡಿಕಾರಿದೆ.
‘ಮಹಾತ್ಮ ಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ Vs ನಕಲಿ ಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ. ಗಾಂಧೀಜಿ ದೇಶಕ್ಕಾಗಿ ದಂಡಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಮುಂತಾದ ಚಳುವಳಿ ನಡೆಸಿದರು. ಆದರೆ, ಕಾಂಗ್ರೆಸ್ ನಕಲಿ ಗಾಂಧಿ ಕುಟುಂಬಕ್ಕಾಗಿ ಪ್ರತಿಭಟಿಸುತ್ತಿದೆ. ನಕಲಿ ಗಾಂಧಿಗಳು ಕಾನೂನಿಗಿಂತಲೂ ಮೇಲ್ಪಟ್ಟವರೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ತನ್ನ ಕುಟುಂಬಕ್ಕೆ ನಿಷ್ಠರಾಗಿದ್ದವರನ್ನೂ ರಾಹುಲ್ ಗಾಂಧಿ ತೇಜೋವಧೆ ಮಾಡುತ್ತಿದ್ದಾರೆ. ಸತ್ತವರ ತಲೆಗೆ ಹಗರಣ ಕಟ್ಟುವ ಹುನ್ನಾರ ನಡೆಯುತ್ತಿದೆ.
ನಾನು ಕೂಡಾ ರಾಹುಲ್ ಗಾಂಧಿ ಎಂದು ಬೊಬ್ಬಿರಿಯುವ ನಕಲಿ ವೀರರೇ ನಿಮಗಿದೋ ಎಚ್ಚರಿಕೆ.
ಖರ್ಗೆ ಅವರೇ, ಅಪಾಯದ ತೂಗುಗತ್ತಿ ನಿಮ್ಮ ತಲೆ ಮೇಲಿದೆ.#FakeGandhisBachaoToolKit
— BJP Karnataka (@BJP4Karnataka) June 17, 2022
ಇದನ್ನೂ ಓದಿ: ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ಉದ್ಯೋಗಿ: ಆಟೋ ಡ್ರೈವರ್ ಕೇಳಿದ ಪ್ರಶ್ನೆಗೆ ತಬ್ಬಿಬ್ಬು!
‘ನಕಲಿ ಗಾಂಧಿ ಕುಟುಂಬ ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಕ್ಕಾಗಿ ವಿಚಾರಣೆ ಎದುರಿಸುತ್ತಿದೆ. ಆದರೆ, ಈ ಕುಟುಂಬದ ಭಜನಾ ಮಂಡಳಿ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಅವರೆಲ್ಲಾ ಗಾಂಧಿಗಳೇ? ನಕಲಿ ಗಾಂಧಿಗಳನ್ನು ವಿಚಾರಿಸಬಾರದೇಕೆ?’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
‘ಇ.ಡಿ ವಿಚಾರಣೆ ಸಂದರ್ಭದಲ್ಲಿ #NationalHerald ಅವ್ಯವಹಾರವನ್ನೆಲ್ಲಾ ಮೋತಿಲಾಲ್ ವೋರಾ ತಲೆಗೆ ಕಟ್ಟಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಹಗರಣಕ್ಕೆ ವೋರಾ ಕಾರಣ ಎಂಬರ್ಥದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಪಲಾಯನವಾದ. ಗತಿಸಿ ಹೋದವರನ್ನು ಬಲಿಪಶು ಮಾಡುವ ಹುನ್ನಾರವೇ? ಕೋತಿ ತಿಂದು ಮೇಕೆ ಮೂತಿಗೆ ಒರೆಸಿದ ಕತೆಯಂತೆ #NationalHerald ಹಗರಣ ಸಾಗುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಮಾಡಿದ ಭ್ರಷ್ಟಾಚಾರವನ್ನು ಮರಣ ಹೊಂದಿದ ವೋರಾ ತಲೆಗೆ ಕಟ್ಟುತ್ತಿರುವುದೇಕೆ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ನಾಯಕರ ನಡೆ, ಗುಲಾಮಿತನದ ಅನಾವರಣ: ಆರಗ ಜ್ಞಾನೇಂದ್ರ
ಇಡಿ ವಿಚಾರಣೆ ಸಂದರ್ಭದಲ್ಲಿ #NationalHerald ಅವ್ಯವಹಾರವನ್ನೆಲ್ಲಾ ಮೋತಿಲಾಲ್ ವೋರಾ ತಲೆಗೆ ಕಟ್ಟಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಮಾಡುತ್ತಿವೆ.
ಹಗರಣಕ್ಕೆ ವೋರಾ ಕಾರಣ ಎಂಬರ್ಥದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಪಲಾಯನವಾದ.
ಗತಿಸಿ ಹೋದವರನ್ನು ಬಲಿಪಶು ಮಾಡುವ ಹುನ್ನಾರವೇ?#FakeGandhisBachaoToolKit
— BJP Karnataka (@BJP4Karnataka) June 17, 2022
‘ತನ್ನ ಕುಟುಂಬಕ್ಕೆ ನಿಷ್ಠರಾಗಿದ್ದವರನ್ನೂ ರಾಹುಲ್ ಗಾಂಧಿ ತೇಜೋವಧೆ ಮಾಡುತ್ತಿದ್ದಾರೆ. ಸತ್ತವರ ತಲೆಗೆ ಹಗರಣ ಕಟ್ಟುವ ಹುನ್ನಾರ ನಡೆಯುತ್ತಿದೆ. ನಾನು ಕೂಡಾ ರಾಹುಲ್ ಗಾಂಧಿ ಎಂದು ಬೊಬ್ಬಿರಿಯುವ ನಕಲಿ ವೀರರೇ ನಿಮಗಿದೋ ಎಚ್ಚರಿಕೆ. ಮರ್ಲಿಕಾರ್ಜುನ್ ಖರ್ಗೆಯವರೇ, ಅಪಾಯದ ತೂಗುಗತ್ತಿ ನಿಮ್ಮ ತಲೆ ಮೇಲಿದೆ’ ಎಂದು ಬಿಜೆಪಿ ಎಚ್ಚರಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.