ಖರ್ಗೆ ಹೆಸರಿಗಷ್ಟೇ ಅಧ್ಯಕ್ಷ, ಪೆನ್ನಿನ ಟಾಪ್ ಓಪನ್ ಮಾಡಲೂ ಸೋನಿಯಾ ಅನುಮತಿಗೆ ಕಾಯಬೇಕು: ಬಿಜೆಪಿ

ರಾಜ್ಯ ಬಿಜೆಪಿ ಸರ್ಕಾರದ ಸಮರ್ಥ ಆಡಳಿತ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ದಿನಕ್ಕೊಂದು ಸುಳ್ಳಿನ ಮೂಟೆ ಬಿಚ್ಚಿಡುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Nov 29, 2022, 07:21 PM IST
  • ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು!?
  • ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೆಸರಿಗೆ ಮಾತ್ರ ಅಧ್ಯಕ್ಷರಷ್ಟೇ
  • ಸಹಿ ಮಾಡಲು ಪೆನ್ನಿನ ಟಾಪ್ ತೆಗೆಯಲು ಸಹ ಸೋನಿಯಾ ಅನುಮತಿ ಬೇಕು
ಖರ್ಗೆ ಹೆಸರಿಗಷ್ಟೇ ಅಧ್ಯಕ್ಷ, ಪೆನ್ನಿನ ಟಾಪ್ ಓಪನ್ ಮಾಡಲೂ ಸೋನಿಯಾ ಅನುಮತಿಗೆ ಕಾಯಬೇಕು: ಬಿಜೆಪಿ  title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಮಾಡುತ್ತೇನೆ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಪಾಯಿಂಟ್ಮೆಂಟ್ ಕೊಡಲು ಸತಾಯಿಸುತ್ತಿರುವುದೇಕೆ? ಬೊಮ್ಮಾಯಿಯವರೆಂದರೆ ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ? ಎಂಬ ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು ನೀಡಿದೆ.

‘ಒಂದು ಕಾಲದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸ್ಥಿತಿ ಹೇಗಿತ್ತು ಎಂದರೆ, 21 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಈಗಲೂ ಬ್ಯಾಕ್ ಚೇರ್ ಡ್ರೈವಿಂಗ್ ಮಾಡುತ್ತಿರುವ ಸೋನಿಯಾ ಮೇಡಂ ಅವರ ಗನ್ ಮ್ಯಾನ್‌ಗಳನ್ನು ಭೇಟಿ ಮಾಡಿ, ಅದನ್ನೇ ಹೈಕಮಾಂಡ್ ಭೇಟಿ ಎಂದು ಬೀಗುತ್ತಿದ್ದರು. ಈಗ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ಎರಡು ಕೂಡಾ ನಿರುದ್ಯೋಗಿ!’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!

‘ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು!? ಮಲ್ಲಿಕಾರ್ಜುನ್ ಖರ್ಗೆ ಅವರು ಹೆಸರಿಗೆ ಮಾತ್ರ ಅಧ್ಯಕ್ಷ, ಸ್ವತಂತ್ರ ನಿರ್ಧಾರ ಪ್ರಕಟಿಸುವುದು ಬಿಡಿ, ಸಹಿ ಮಾಡುವ ಮೊದಲು ಪೆನ್ನಿನ ಟಾಪ್ ಓಪನ್ ಮಾಡಲೂ ಬ್ಯಾಕ್ ಚೇರ್ ಡ್ರೈವರ್ ಸೋನಿಯಾ ಮೇಡಂ ಅವರ ಆಣತಿಗೆ ಕಾಯಬೇಕು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ರಾಜ್ಯ ಸರ್ಕಾರದ ಸಮರ್ಥ ಆಡಳಿತ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ದಿನಕ್ಕೊಂದು ಸುಳ್ಳಿನ ಮೂಟೆ ಬಿಚ್ಚಿಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಗ್ರಹಿಸಿದ್ದ ಸುಳ್ಳಿನ ಗೋದಾಮು ಖಾಲಿ ಆಗುತ್ತಿದೆ ಎನ್ನುವ ಚಿಂತೆಯಿಂದ ಕಾಂಗ್ರೆಸ್ ನಾಯಕರು ಮೈ ಕೈ ಪರಚಿಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: 75 ವರ್ಷ ಆಯ್ತು ಸಿದ್ದರಾಮಯ್ಯ ನಿವೃತ್ತಿ ಪಡೆಯಲಿ : ಸಚಿವ ಅಶ್ವಥ್ ನಾರಾಯಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News