ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದನ್ವಯ ಬಿಬಿಎಂಪಿ ಚುನಾವಣೆ ಶೀಘ್ರ ನಡೆಸುವಂತೆ ಶಾಸಕ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿ ಮಾಡಿ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ವಿ.ಎಸ್. ಉಗ್ರಪ್ಪ, ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಂಪೂರ್ಣ ಸಿದ್ಧವಿದೆ. ಈಗ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಪ್ರಜಾಪ್ರಭತ್ವದ ಮೇಲೆ ನಂಬಿಕೆ, ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ವಿಶ್ವಾಸ ಇದ್ರೆ ತಕ್ಷಣ ಚುನಾವಣೆ ನಡೆಸಲಿ ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಶಾಸಕ ರಾಮಲಿಂಗಾರೆಡ್ಡಿ, ಬಿಬಿಎಂಪಿ ಚುನಾವಣೆ 20 ತಿಂಗಳ ಮೊದಲೇ ಮಾಡಬೇಕಿತ್ತು. 1 ವರ್ಷ 8 ತಿಂಗಳ ಕಾಲ ಚುನಾವಣೆ ಇಲ್ಲದೆ, ಆಡಳಿತಗಾರರನ್ನ ನೇಮಿಸಿ ಆಡಳಿತ ನಡೆಸ್ತಿದಾರೆ. ಆರಂಭದಲ್ಲಿ ಬೆಂಗಳೂರಿಗೆ ಪ್ರತ್ಯೇಕ ನಿಯಮ, ಆಕ್ಟ್ ತರುತ್ತೇವೆ, ಹೊಸ ಪ್ರದೇಶ ಸೇರ್ಪಡೆ ಮಾಡ್ತೇವೆ ಎಂದು ಸಮಿತಿಯನ್ನು ಮಾಡಿದರು. ಆದರೆ ತರಾತುರಿಯಲ್ಲಿ ವಿರೋಧ ಪಕ್ಷದ ಯಾವುದೇ ಸಲಹೆ ತಗೊಳದೆ ಪಾಲಿಕೆ ನಿಯಮಕ್ಕೆ ಅನುಮೋದನೆ ಪಡೆದುಕೊಂಡರು.ಇದೆಲ್ಲ ಆಗಿ ಒಂದು ವರ್ಷ ಆದರೂ ಪಾಲಿಕೆ ಚುನಾವಣೆ ಮಾಡಲು ಬಿಜೆಪಿ ಸಿದ್ಧವೇ ಇಲ್ಲ. ತಮಗೇ ಅಧಿಕಾರ ಬೇಕು, ಅಧಿಕಾರ ವಿಕೇಂದ್ರೀಕರಣ ಬಿಜೆಪಿಗೆ ಬೇಕಾಗಿಲ್ಲ ಎಂದು ದೂರಿದರು.
ಇದನ್ನೂ ಓದಿ: ಜೂನ್ 24 ರಂದು ಬೆಳ್ಳಿತೆರೆಗೆ ಬರಲಿದ್ದಾನೆ 'ತ್ರಿವಿಕ್ರಮ
ಹಿಂದೆಯೂ ಸಮ್ಮಿಶ್ರ ಸರ್ಕಾರ ಇದ್ದ ಅವಧಿಯಲ್ಲಿ ಮೂರುವರೇ ವರ್ಷ ಕಾಲ ಚುನಾವಣೆ ಮಾಡಿರಲಿಲ್ಲ ಎಂದು ಆರೋಪಿಸಿದರು.
ಚುನಾವಣೆ ಶೀಘ್ರದಲ್ಲಿ ನಡೆಸಲು ಒತ್ತಾಯದ ಜೊತೆಗೆ, ಒಬಿಸಿ ಮೀಸಲಾತಿಯನ್ನೂ ಕೊಡಬೇಕೆಂದು ಒತ್ತಾಯಿಸಿದ್ದೇವೆ.ಸಿದ್ಧರಾಮಯ್ಯ ಸರ್ಕಾರ ಇದ್ದಾಗ ಕಾಂತರಾಜು ಸಮಿತಿಯು ಅಂಕಿಅಂಶ ಸಂಪೂರ್ಣವಾಗಿ ರಾಜ್ಯಸರ್ಕಾರಕ್ಕೆ ಸಲ್ಲಿಸಿದೆ. ಇದನ್ನು ತಗೊಂಡು ಹಿಂದುಳಿದ ವರ್ಗಕ್ಕೆ ಕೊಡಬೇಕಾದ ಮೀಸಲಾತಿಯನ್ನು ಕೊಡಬೇಕು ಎಂದು ಆಯೋಗಕ್ಕೆ ತಿಳಿಸಿದ್ದೇವೆ ಎಂದರು.
ಆಯೋಗ ಕಾನೂನು ಪ್ರಕಾರ ನಡೆದುಕೊಳ್ಳುತ್ತದೆ. ಹಿಂದೆಯೂ ಆಯೋಗ ಹೈಕೋರ್ಟ್ ಗೆ ಹೋಗಿತ್ತು.ಹೈಕೋರ್ಟ್ ಕೂಡಾ ಚುನಾವಣೆ ನಡೆಸುವಂತೆ ಆದೇಶ ಕೊಟ್ರೂ, ಸರ್ಕಾರ ಸುಪ್ರೀಂಕೋರ್ಟ್ ಗೆ ಹೋಗಿ ಸ್ಟೇ ತೆಗೆದುಕೊಂಡು ಬಂದಿದೆ. ಆಯೋಗ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದರು.
ಇದನ್ನೂ ಓದಿ: ಜೂನ್ 24 ರಂದು ಬೆಳ್ಳಿತೆರೆಗೆ ಬರಲಿದ್ದಾನೆ 'ತ್ರಿವಿಕ್ರಮ
ಸರ್ಕಾರ ಈಗ ಭಕ್ತವತ್ಸಲ ಸಮಿತಿ ಮಾಡಿ ಚುನಾವಣೆಯನ್ನು ಮತ್ತೆ 6 ತಿಂಗಳು ,1 ವರ್ಷ ಮುಂದೂಡೋದಕ್ಕೆ ಪ್ರಯತ್ನಿಸ್ತಿದೆ. ಸುಪ್ರೀಂ ಕೋರ್ಟ್ ಗೆ ಸಬೂಬು ಹೇಳೋದಕ್ಕಾಗಿ ಈ ರೀತಿ ಮಾಡ್ತಿದಾರೆ ಎಂದು ಕಿಡಿಕಾರಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಬೆಂಗಳೂರಲ್ಲಿ ಜನಪ್ರತಿನಿಧಿಗಳಿಲ್ಲದೆ ಅನೇಕ ಸಮಸ್ಯೆಗಳಾಗಿವೆ. ಸುಪ್ರೀಂ ಕೋರ್ಟ್ ಈಗ 15 ದಿನದೊಳಗೆ ಚುನಾವಣೆ ನಡೆಸಬೇಕೆಂದು ಇಡೀ ದೇಶಕ್ಕೆ ಅನ್ವಯ ಆಗುವ ಹಾಗೆ ಆದೇಶ ನೀಡಿದೆ. ಹಿಂದುಳಿದ ವರ್ಗಕ್ಕೆ ಕನಿಷ್ಟ 27% ಮೀಸಲಾತಿ ಕೂಡಾ ಕಡ್ಡಾಯವಾಗಿದೆ. ಸರ್ಕಾರದ ಬಳಿ ಇರುವ ಮಾಹಿತಿ ಬಳಸಿ, ಒಬಿಸಿ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!
ಇದರ ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಸ್ಟೇ ಇದೆ. ಆದರೆ ಚುನಾವಣಾ ಆಯೋಗದಿಂದ ಅದೇ ದಿನ ಸ್ಟೇ ವೆಕೇಟ್ ಮಾಡಲು ಮೆಮೊ ಹಾಕಲಾಗಿದೆ. ಒಂದು ವಾರದೊಳಗೆ ಈ ಸ್ಟೇ ವೆಕೇಟ್ ಮಾಡಲು ಒತ್ತಾಯಿಸಿದ್ದೇವೆ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಒಬಿಸಿ ಮೀಸಲಾತಿ ಕೊಡುವ ಬಗ್ಗೆ ಕ್ರಮ ಜರುಗಿಸಬೇಕೆಂದು ಹೇಳಿದ್ದೇವೆ. ಆಯೋಗ ಇದೆಲ್ಲದಕ್ಕೂ ಬದ್ಧವಾಗಿ ಅಂತ ಹೇಳಿದೆ. ಈಗ ಚುನಾವಣಾ ಚೆಂಡು ಇರುವಂತದ್ದು ರಾಜ್ಯ ಸರ್ಕಾರದ ಅಂಗಳದಲ್ಲಿದೆ ಎಂದರು.
ಈ ವೇಳೆ ಶಾಸಕ ರಿಜ್ವಾನ್ ಅರ್ಷದ್, ಮಾಜಿ ಪಾಲಿಕೆ ಸದಸ್ಯರಾದ ಗಂಗಾಂಬಿಕೆ, ಎಂ ಶಿವರಾಜು, ವಾಜಿದ್, ಸತ್ಯನಾರಾಯಣ್ ಮುಖಂಡರು ಭಾಗಿಯಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.