BMTC : 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ

BMTC : ಬಿಎಂಟಿಸಿ ತನ್ನಲ್ಲಿ ಖಾಲಿಯಿರುವ ೨೫೦೦ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

Written by - Zee Kannada News Desk | Last Updated : Feb 27, 2024, 08:20 PM IST
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ 2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳು ಖಾಲಿ ಇವೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬಿಎಂಟಿಸಿ ನಿಗಮದಿಂದ ಎರಡು ಲಿಖಿತ ಪರೀಕ್ಷೆ ನಡೆಸಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ ದ್ವಿತೀಯ ಪಿಯುಸಿ ಉತ್ತೀಣಗೊಳ್ಳಬೇಕು.
BMTC : 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ title=

Application Invitation for 2,500 Conductor Posts : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ 2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳು ಖಾಲಿ ಇವೆ. ಉಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆಗಳು, ಸ್ಥಳೀಯ ವೃಂದದಲ್ಲಿ 214 (ಹಿಂಬಾಕಿ 15 ಹುದ್ದೆಗಳು ಸೇರಿ) ಹುದ್ದೆಗಳು ಇದ್ದು, ಆಸಕ್ತರು ಅಧಿಸೂಚನೆ ನೋಡಿಕೊಂಡು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ನೇಮಕಾತಿ ಪೂರ್ಣ ಮಾಹಿತಿ :
ಸಂಸ್ಥೆ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)
ಉದ್ಯೋಗ ಸಂಸ್ಥೆ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 
ಹುದ್ದೆಯ ಹೆಸರು: ನಿರ್ವಾಹಕ (ಕಂಡಕ್ಟರ್) 
ಒಟ್ಟು ಹುದ್ದೆ ಸಂಖ್ಯೆ: 2,500 ಹುದ್ದೆ
ಮಾಸಿಕ ವೇತನ: 18,660 ರಿಂದ 25,300ರೂಪಾಯಿ 
ಅರ್ಜಿ ಸಲ್ಲಿಕೆ ಕೊನೆ ದಿನ: ಏಪ್ರಿಲ್ 10

ವಿದ್ಯಾರ್ಹತೆ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ ದ್ವಿತೀಯ ಪಿಯುಸಿ ಉತ್ತೀಣಗೊಳ್ಳಬೇಕು. ಮೂರು ವರ್ಷಗಳ ಡಿಪ್ಲೋಮಾ ಪಡೆದಿರಬೇಕು ಎಂದು ತಿಳಿಸಲಾಗಿದೆ. ಮುಕ್ತ ವಿವಿಯಿಂದ ಪಿಯುಸಿ, ಜೆಒಸಿ / ಜೆಎಲ್‌ಸಿ ಕೋರ್ಸ್ ಪಡೆದವರು ಈ ಹುದ್ದೆ ಪಡೆಯಲು ಅರ್ಹರಲ್ಲ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ಹೆಚ್ಚುವರಿ ಅರ್ಹತೆ :
ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು. 
ಪುರುಷರ ಎತ್ತರ 160 ಸೆಂಮಿ ಹಾಗೂ ಮಹಿಳೆಯರ ಎತ್ತರ 150 ಸೆಂಮಿ ಕಡ್ಡಾಯಗೊಳಿಸಲಾಗಿದೆ. 
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ದಾಟಿರಬೇಕು.

ಇದನ್ನು ಓದಿ : 18 ವರ್ಷಗಳ ನಂತರ ಬುಧ-ರಾಹುವಿನ ಅದ್ಭುತ ಸಂಯೋಜನೆ; ಈ 5 ರಾಶಿಗಳ ಭವಿಷ್ಯವೇ ಬದಲಾಗಲಿದೆ!

ಜಾತಿವಾರು ವಯೋಮಾನದ ವಿವರ:
 ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ 2A / 2B / 3A / 3B ಅಭ್ಯರ್ಥಿಗು: 38 ವರ್ಷ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳೂ: ಗರಿಷ್ಠ 40 ವರ್ಷ ಮಾಜಿ ಸೈನಿಕ / ಇಲಾಖಾ ಅಭ್ಯರ್ಥಿಗಳು: ಗರಿಷ್ಠ 45 ವರ್ಷ ತರಬೇತಿ ಅರ್ಜಿ ಸಲ್ಲಿಸುವ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಂದು ವರ್ಷ ಕಾಲ ವೃತ್ತಿ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಪ್ರತಿ ತಿಂಗಳು ತರಬೇತಿ ಭತ್ಯೆ ಎಂದು 9,100 ರೂಪಾಯಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಆಯ್ಕೆ ಹೇಗೆ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬಿಎಂಟಿಸಿ ನಿಗಮದಿಂದ ಎರಡು ಲಿಖಿತ ಪರೀಕ್ಷೆ ನಡೆಸಬೇಕು. 
ಇದರಲ್ಲಿ ಅಭ್ಯರ್ಥಿಗಳ ಮೆರಿಟ್ ಆಧಾರದಲ್ಲಿ ಮತ್ತು ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. 
ಅರ್ಜಿ ಸಲ್ಲಿಕೆ ವಿಧಾನ ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ http://kea.kar.nic.in ಗೆ ಭೇಟಿ ನೀಡಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. 

ಶುಲ್ಕದ ವಿವರ:
ಇತರ ಹಿಂದುಳಿದ ವರ್ಗಗಳಿಗೆ: 750 ರೂಪಾಯಿ 
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳು: 500 ರೂಪಾಯಿ 

ಇದನ್ನು ಓದಿ :ಹಸುವಿನ ಹಾಲು ಏಕೆ ಹಳದಿಯಾಗಿದೆ? ಎಮ್ಮೆಯ ಹಾಲಿನಂತೆ ಬೆಳ್ಳಗಿಲ್ಲ ಏಕೆ? ಕಾರಣ ಇಲ್ಲಿದೆ

ನೆನಪಿಡಬೇಕಾದ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
2024 ಮಾರ್ಚ 10 
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 2024 ಏಪ್ರಿಲ್ 10 
ಶುಲ್ಕ ಪಾವತಿಗೆ ಕಡೆಯ ದಿನಾಂಕ: 2024 ಏಪ್ರಿಲ್ 13

ಆಸಕ್ತರು ಅಧಿಸೂಚನೆ ನೋಡಿಕೊಂಡು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News