ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಸಿಎಂ ಸ್ಥಾನ ದೊರೆಯಲಿದೆ. ರಾಜ್ಯದಲ್ಲಿ ಈ ಬಾರಿ ಬ್ರಾಹ್ಮಣ ಸಮುದಾಯದವರನ್ನೇ ಸಿಎಂ ಮಾಡಲು ಆರ್‌ಎಸ್‌ಎಸ್ ತಂತ್ರ ರೂಪಿಸಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಇದೀಗ ‘ಕಮಲ’ ಪಕ್ಷದಲ್ಲಿ ತಲ್ಲಣವನ್ನುಂಟು ಮಾಡಿದೆ. ಎಚ್‍ಡಿಕೆ ಹೇಳಿಕೆಯಿಂದ ಪ್ರಬಲ ಸಮುದಾಯದ ನಾಯಕರು ಇಕ್ಕಟಿಗೆ ಸಿಲುಕಿದ್ದಾರೆ. ಕುಮಾರಸ್ವಾಮಿ ಹೇಳಿಕೆಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಲಿಂಗಾಯತ, ಒಕ್ಕಲಿಗ, ಎಸ್ಸಿ/ಎಸ್ಟಿ ಮತ್ತು ಒಬಿಸಿ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೇಶ್ವೆಗಳ ಡಿಎನ್‍ಎ ಇರುವ ವ್ಯಕ್ತಿ. ದೇಶಸ್ತ ಬ್ರಾಹ್ಮಣ ಆಗಿರುವ ಇವರು(ಸಮುದಾಯ) ಮಹಾತ್ಮಾ ಗಾಂಧಿ ಅವರನ್ನು ಕೊಂದರು. ಇದಲ್ಲದೆ ಪೇಶ್ವೆಗಳು ಕರ್ನಾಟಕದ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದರು. ಇವರನ್ನು ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮುಖ್ಯಮಂತ್ರಿ ಮಾಡಬೇಕೆಂಬ ಹುನ್ನಾರ ನಡೆಯುತ್ತಿದೆ ಎಂದು ಎಚ್‍ಡಿಕೆ ವಾಗ್ದಾಳಿ ನಡೆಸಿದ್ದರು. ಎಚ್‍ಡಿಕೆಯವರ ಈ ಹೇಳಿಕೆಗೆ ಬ್ರಾಹ್ಮಣ ಸಮುದಾಯದ ಕೆಲ ನಾಯಕರು ಸೇರಿದಂತೆ ಕೆಲ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಒಂದು ಕಡೆ ಆದರೆ ಮತ್ತೊಂದು ಕಡೆ ಬಿಜೆಪಿಯ ಪ್ರಬಲ ಸಮುದಾಯದ ನಾಯಕರು ಗೊಂದಲಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ–ಪುಣೆಗೆ ನೇರ ವಿಮಾನ ಸೇವೆ ಆರಂಭ
‘ಕಮಲ’ ಪಕ್ಷದ ಪ್ರಬಲ ಸಮುದಾಯದ ನಾಯಕರಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಿದರೂ ಕಷ್ಟ, ಪ್ರತಿಕ್ರಿಯೆ ನೀಡದಿದ್ದರೂ ಕೆಂಗಣ್ಣಿಗೆ ಗುರಿಯಾಗುವ ಭೀತಿ ಎದುರಾಗಿದೆ. ಕುಮಾರಸ್ವಾಮಿ ಹೇಳಿಕೆಯಿಂದ ದೂರ ಉಳಿದರೆ ಪಕ್ಷದ ಕೆಂಗಣ್ಣಿಗೆ ಗುರಿಯಾಗಬೇಕೆಂಬ ದ್ವಂದ್ವಕ್ಕೆ ನಾಯಕರು ಸಿಲುಕಿದ್ದಾರೆ. ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಪದಲ್ಲಿದ್ದು, ಸಹಜವಾಗಿಯೇ ನಮ್ಮ ಸಮುದಾಯವರೇ(ಬ್ರಾಹ್ಮಣರು) ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಾರೆ. ನಾವು ಮತ ಬೆಂಬಲಿಸಿದ್ರೆ ಬೇರೆ ಸಮುದಾಯದ ಸಿಎಂ ಆದ್ರೆ, ಬಿಜೆಪಿ ಬೆಂಬಲಿಸಿ ಏನು ಪ್ರಯೋಜನವೆಂಬ ಪ್ರಶ್ನೆ ನಾಯಕರಲ್ಲಿ ಈಗ ಪ್ರಾರಂಭವಾಗಿದೆ.
ಜೊತೆಗೆ ಸಣ್ಣ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಸಿಎಂ ಆಗುವುದಕ್ಕೆ ಬಿಜೆಪಿಯಲ್ಲಿಯೇ ಭಾರೀ ವಿರೋಧವಿದೆ. ಈ ಹಿನ್ನೆಲೆ ದೊಡ್ಡ ಸಮುದಾಯದ ಶಾಸಕರು ಕುಮಾರಸ್ವಾಮಿ ಹೇಳಿಕೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಕ್ಕಲಿಗ ಜನಾಂಗದ ಮತ್ತು ಲಿಂಗಾಯತರು ಹೆಚ್ಚಿನ ಪ್ರಮಾಣದಲ್ಲಿರುವ ಕಡೆ ಬಿಜೆಪಿಗೆ ಸಮಸ್ಯೆ ಎದುರಾಗಿದೆ. ಲಿಂಗಾಯತರಲ್ಲಿ ಒಳಪಂಗಡವಾಗಿರುವ ಪಂಚಮಸಾಲಿ ವಿಚಾರದಿಂದ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಲಿಂಗಾಯತ ಶಾಸಕರಿಗೆ ತೊಂದರೆ ಎದುರಾಗಿದೆ. ಇದಲ್ಲದೆ ಹಳೆ ಮೈಸೂರು ಭಾಗಗಳಲ್ಲಿರುವ ಒಕ್ಕಲಿಗರು ಬಿಜೆಪಿಗೆ ಬೆಂಬಲ ಕೊಡಲು ಯೋಚಿಸಿಸುವಂತಾಗಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಅದೃಷ್ಟಕ್ಕಾಗಿ ಕಾಂಗ್ರೆಸ್ ಪಕ್ಷದ ಚಿಹ್ನೆಗೆ ನಾಲ್ಕನೇ ಗೆರೆ ಜೋಡಿಸಿದ ಡಿ ಕೆ ಶಿವಕುಮಾರ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.