ಇಂದಿನಿಂದ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ :ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಇರುವುದಿಲ್ಲ ನೀರು

Bengaluru water supply cut:ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ. ಹಾಗಾಗಿ ಎರಡು ದಿನ ಜೂನ್ ನೀರು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ. 

Written by - Ranjitha R K | Last Updated : Jun 6, 2024, 10:18 AM IST
  • ಗುರುವಾರ ಅಂದರೆ ಇಂದು ಮತ್ತು ನಾಳೆ ನೀರು ಪೂರೈಕೆಯಲ್ಲಿ ವ್ಯತ್ಯಯ
  • ಎರಡು ದಿನ ಜೂನ್ ನೀರು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ
  • ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತ
ಇಂದಿನಿಂದ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ :ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಇರುವುದಿಲ್ಲ ನೀರು   title=

Bengaluru water supply cut : ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ನಡೆಯುತ್ತಿರುವುದರಿಂದ ಗುರುವಾರ ಅಂದರೆ ಇಂದು ಮತ್ತು ನಾಳೆ (ಜೂನ್ 5 ಮತ್ತು 6) ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ. ಹಾಗಾಗಿ ಎರಡು ದಿನ ಜೂನ್ ನೀರು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ. 

ಇಂದು ಬೆಂಗಳೂರು ನೀರು ಪೂರೈಕೆ ಕಡಿತ:
ಕಾವೇರಿ 5 ನೇ ಹಂತ ಯೋಜನೆ ಅನುಷ್ಠಾನ ಸಂಬಂಧ ಬೆಂಗಳೂರಿನಲ್ಲಿ ಜೂನ್  ಮತ್ತು ಜೂನ್ 7 ರಂದು ನೀರು ಸರಬರಾಜು ಸ್ಥಗಿತಗೊಳ್ಳಲಿದೆ.ಕಾವೇರಿ 1, 2 ಮತ್ತು 3 ಹಂತಗಳ ನೀರು ಸರಬರಾಜು ಘಟಕಗಳಿಂದ ನೀರು ಪೂರೈಕೆಯಾಗುವ ಪ್ರದೇಶಗಳಲ್ಲಿ  ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ ಅಂದರೆ 12 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಬೆಂಗಳೂರಿನಲ್ಲಿ ಕಾವೇರಿ 4ನೇ ಹಂತದ 1 ಮತ್ತು 2ನೇ ಹಂತದ ನೀರು ಸರಬರಾಜು ಘಟಕಗಳಿಂದ ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಾಲ್ಕು ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಈ ಭಾಗಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಎಚ್ಚರಿಕೆ

ನೀರಿನ ಕಡಿತದ ಕಾರಣ, ಬೆಂಗಳೂರಿನ ಜನರು ನಿಗದಿತ ನಿರ್ವಹಣೆ ಅವಧಿಯಲ್ಲಿ ನೀರನ್ನು ಬುದ್ಧಿವಂತಿಕೆಯಿಂದ ಬಳಸಬೇಕೆಂದು ಸೂಚಿಸಲಾಗಿದೆ.ನಿರ್ವಹಣಾ ಕಾರ್ಯದಿಂದಾಗಿ ಎರಡು ದಿನಗಳ ನೀರಿನ ಅಡಚಣೆಯ ಸಮಯದಲ್ಲಿ  ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಕಷ್ಟು ನೀರನ್ನು ಸಂಗ್ರಹಿಸಿಡುವಂತೆ ಸಲಹೆ ನೀಡಲಾಗಿದೆ.

ನಿರ್ವಹಣೆ ಕಾರ್ಯದ ಕಾರಣದಿಂದ ನೀರು ಸ್ಥಗಿತಗೊಂಡಿರುವುದೇ ಹೊರತು ನೀರಿನ ಅಭಾವದಿಂದ ಅಲ್ಲ, ಈ ಸಮಯದಲ್ಲಿ ನಿವಾಸಿಗಳು ಸಹಕರಿಸುವಂತೆ ಜಲಮಂಡಳಿ ಕೋರಿದೆ.ನಿರ್ವಹಣಾ ಕಾಮಗಾರಿಯಿಂದಾಗಿ ಇಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರೂ, ಬೆಂಗಳೂರಿನ ಹಲವು ಭಾಗಗಳು ಕಳೆದ ಕೆಲವು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿವೆ. ಟೆಕ್ ಕಾರಿಡಾರ್ ಸೇರಿದಂತೆ ಮೆಟ್ರೋ ಸಿಟಿಯ ಬಹುತೇಕ ಪ್ರದೇಶಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸಿದ್ದವು.

ಇದನ್ನೂ ಓದಿ: ಚಾರಣಿಗರ ರಕ್ಷಣೆ ಮತ್ತು ಮೃತದೇಹಗಳನ್ನು ರಾಜ್ಯಕ್ಕೆ ತುರ್ತಾಗಿ ತರಲು ಅಗತ್ಯ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News