ತಮಿಳುನಾಡಿಗೆ ಕಾವೇರಿ ನೀರು: ಕುಸಿದ KRS ಡ್ಯಾಂ ನೀರಿನ ಮಟ್ಟ!

KRS Water Level: ಮಳೆಯ ಕೊರತೆ ನಡುವೆ 113 ಅಡಿಗಳಷ್ಟು ಡ್ಯಾಂ ಭರ್ತಿಯಾಗಿತ್ತು. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ 113 ಅಡಿಯಿಂದ 100 ಅಡಿಗೆ ಇಳಿಕೆಯಾಗಿದೆ.

Written by - Puttaraj K Alur | Last Updated : Sep 1, 2023, 01:26 PM IST
  • ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಹಿನ್ನೆಲೆ KRS ನೀರಿನ ಮಟ್ಟ 100 ಅಡಿಗೆ ಕುಸಿತ
  • ಕಳೆದ 3 ದಿನಗಳಿಂದ ಪ್ರತಿನಿತ್ಯ ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ
  • ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತದಿಂದ ಜಿಲ್ಲೆಯ ರೈತರು‌ ಕಂಗಾಲಾಗಿದ್ದಾರೆ
 ತಮಿಳುನಾಡಿಗೆ ಕಾವೇರಿ ನೀರು: ಕುಸಿದ KRS ಡ್ಯಾಂ ನೀರಿನ ಮಟ್ಟ! title=
ಕುಸಿದ KRS ಡ್ಯಾಂ ನೀರಿನ ಮಟ್ಟ!

ಮಂಡ್ಯ: ರಾಜ್ಯದಲ್ಲಿ ಮಳೆಯ ಕೊರತೆ ಇದ್ದರೂ ಸಹ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿದೆ. ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಬಿಡುತ್ತಿರುವ ಹಿನ್ನೆಲೆ ಕೃಷ್ಣರಾಜಸಾಗರ ಅಣೆಕಟ್ಟಿನ(KRS Dam) ನೀರಿನ ಮಟ್ಟವು 100 ಅಡಿಗೆ ಕುಸಿತ ಕಂಡಿದೆ.

ಕಳೆದ 3 ದಿನಗಳಿಂದ ಪ್ರತಿನಿತ್ಯ ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಇದರಿಂದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತ ಕಂಡು 100 ಅಡಿಗೆ ತಲುಪಿದೆ. ಇದು ಹಳೇ ಮೈಸೂರು ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೆಲಸ ಸಿಗದ ಮಗ ಇದ್ದರೆ ಹೊರಗೆ ಹಾಕ್ತೀರಾ?

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತದಿಂದ ಜಿಲ್ಲೆಯ ರೈತರು‌ ಕಂಗಾಲಾಗಿದ್ದಾರೆ. ಮಳೆಯ ಕೊರತೆ ನಡುವೆ 113 ಅಡಿಗಳಷ್ಟು ಡ್ಯಾಂ ಭರ್ತಿಯಾಗಿತ್ತು. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ 113 ಅಡಿಯಿಂದ 100 ಅಡಿಗೆ ಇಳಿಕೆಯಾಗಿದೆ.

ಡ್ಯಾಂನ ಮಟ್ಟ 100 ಅಡಿಗೆ ಇಳಿಕೆಯಾದರೂ ಸಹ ತಮಿಳುನಾಡಿಗೆ ಸರ್ಕಾರವು ನೀರು ಹರಿಸುತ್ತಿದೆ. ಡ್ಯಾಂ ನೀರಿನ ಮಟ್ಟ ಕುಸಿತದಿಂದ ಮುಂದಿನ ದಿನಗಳ ನೀರಿಗಾಗಿ ಹಾಹಾಕಾರ ಎದುರಾಗುವ ಆಂತಕ ಮೂಡಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಳೆಗಳು ಸೇರಿದತೆ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಮಂದಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: BJP vs BJP: 4 ಮತ ಸೆಳೆಯಲಾಗದ ಬಿ.ಎಲ್.ಸಂತೋಷ್ ಸಭೆ ನಡೆಸುವ ದುರ್ಗತಿ ಬಿಜೆಪಿಯದ್ದು!

KRS ಡ್ಯಾಂನ ಇಂದಿನ ನೀರಿನ‌ ಮಟ್ಟ

ಗರಿಷ್ಟ ಮಟ್ಟ: 124.80 ಅಡಿ

ನೀರಿನ ಮಟ್ಟ: 100 ಅಡಿ

ಒಳಹರಿವು   : 1,610 ಕ್ಯೂಸೆಕ್ಸ್

ಹೊರಹರಿವು : 7,277 ಕ್ಯೂಸೆಕ್ಸ್

ಒಟ್ಟು ಸಂಗ್ರಹ  : 23.571 TMC

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News