ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಗುರುವಾರ ಹಿರಿಯ ಐಪಿಎಸ್ ಅಧಿಕಾರಿ, ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಆಡಿಯೋ ಲೀಕ್ ಮಾಡಿದ ಪೆನ್ ಡ್ರೈವ್ ಕುರಿತು ಶೋಧ ನಡೆಸಿರುವ ಸಿಬಿಐ ಅಧಿಕಾರಿಗಳ ತಂಡ ಮೊಬೈಲ್ ಫೋನ್ ಬಳಸದಂತೆ ಅಲೋಕ್ ಕುಮಾರ್ ಗೆ ನಿರ್ಬಂಧ ಹೇರಿದ್ದಾರೆ. ಜೊತೆಗೆ ಫೋನ್ ಟ್ಯಾಪಿಂಗ್ ಕುರಿತು ತಾವು ಸಿದ್ಧಪಡಿಸಿಕೊಂಡು ಬಂದಿರುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
CBI is conducting searches at the residence and office of Bengaluru's forme police commissioner Alok Kumar, in connection with Karnataka phone tapping case. https://t.co/M6o9g3FdHB
— ANI (@ANI) September 26, 2019
ಅಲೋಕ್ ಕುಮಾರ್ ಬಳಿ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಇದೆ ಎಂಬ ಹಿನ್ನೆಲೆಯಲ್ಲಿ ಆ ಪೆನ್ ಡ್ರೈವ್ ಗಾಗಿ ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಆಡಿಯೋ ಒಳಗೊಂಡ ಪೆನ್ ಡ್ರೈವ್ ಯಾರಿಗೆ ನೀಡಲಾಗಿತ್ತು? ಏಕೆ ನೀಡಲಾಗಿತ್ತು? ಯಾವ ಉದ್ದೇಶಕ್ಕೆ ಲೀಕ್ ಮಾಡಲಾಗಿತ್ತು? ಫೋನ್ ಟ್ಯಾಪಿಂಗ್ ಮಾಡಲು ಸೂಚನೆ ಕೊಟ್ಟವರು ಯಾರು? ಅದು ಅಧಿಕೃತ ಆದೇಶದ ಮೂಲಕ ಇತ್ತಾ? ಅಥವಾ ಮೌಖಿಕವಾಗಿ ಫೋನ್ ಟ್ಯಾಪ್ ಮಾಡಲು ಸೂಚನೆ ಕೊಡಲಾಗಿತ್ತಾ ಎಂಬಿತ್ಯಾದಿ ವಿಚಾರಗಳ ಮೇಲೆ ತನಿಖೆ ನಡೆಸಲಾಗುತ್ತಿದೆ.
ಅಲ್ಲದೆ ಯಾವ ಉದ್ದೇಶಕ್ಕಾಗಿ ಫೋನ್ ಟ್ಯಾಪಿಂಗ್ ಮಾಡಲಾಗಿತ್ತು? ಫೋನ್ ಟ್ಯಾಪ್ ಮಾಡಿದ ಬಳಿಕ ಆ ಮಾಹಿತಿಗಳನ್ನು ಯಾರಿಗೆ ರವಾನಿಸಲಾಗುತ್ತಿತ್ತು? ಯಾವ-ಯಾವ ಪ್ರಮುಖರ ಫೋನ್ ಟ್ಯಾಪ್ ಮಾಡಲಾಗಿದೆ? ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಡ್ರಿಲ್ ಮಾಡುತ್ತಿದ್ದಾರೆ ಎನ್ನಲಾಗಿದೆ.