ಚಿಕ್ಕಮಗಳೂರು: ಮರಗಳ್ಳತನದ ಬಗ್ಗೆ ಮಾಹಿತಿ ಕೊಟ್ಟ ಶಂಕೆ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮರಗಳ್ಳತನದ ಬಗ್ಗೆ ಮಾಹಿತಿ ಕೊಟ್ಟ ಶಂಕೆ ಹಿನ್ನಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೆಸವಿಮನೆ ಗ್ರಾಮದಲ್ಲಿ ನಡೆದಿದೆ.

Last Updated : Mar 6, 2020, 03:32 PM IST
ಚಿಕ್ಕಮಗಳೂರು: ಮರಗಳ್ಳತನದ ಬಗ್ಗೆ ಮಾಹಿತಿ ಕೊಟ್ಟ ಶಂಕೆ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ title=

ಬೆಂಗಳೂರು: ಮರಗಳ್ಳತನದ ಬಗ್ಗೆ ಮಾಹಿತಿ ಕೊಟ್ಟ ಶಂಕೆ ಹಿನ್ನಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೆಸವಿಮನೆ ಗ್ರಾಮದಲ್ಲಿ ನಡೆದಿದೆ.

ಆ ಯುವಕನು ಮರಗಳ್ಳತನ ಬಗ್ಗೆ ಮಾಹಿತಿ ನೀಡಿದ್ದಾನೆಂಬ ಶಂಕೆ ಹಿನ್ನಲೆಯಲ್ಲಿ ಆದರ್ಶ ಎನ್ನುವ ಅಮಾಯಕ ಯುವಕನ ಮೇಲೆ ಮರಗಳ್ಳರಿಬ್ಬರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.ಈಗ ಆ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ಈಗ ಆತನನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಆ ಯುವಕ ಮೇಲೆ ಹಲ್ಲೆ ಮಾಡಿದವರು ರಾಜೇಶ್ ಮತ್ತು ರಮೇಶ್ ಎಂದು ತಿಳಿದು ಬಂದಿದ್ದು, ಇವರಿಬ್ಬರಿಗೂ ಕೂಡ ಕಾಂಗ್ರೆಸ್ ನಾಯಕರ ಬೆಂಬಲ ಕೂಡ ಇದೆ ಎನ್ನಲಾಗಿದೆ. ಈಗ ಇಬ್ಬರ ಮೇಲೂ ಚಿಕ್ಕಮಗಳೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ ಈಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

 

Trending News