ಬೆಂಗಳೂರು: ಸದನದಲ್ಲಿ ಬೆಲೆ ಏರಿಕೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ನೀಡಿರುವ ಸಮರ್ಥನೆ ತೀರ ಹಾಸ್ಯಾಸ್ಪದವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 'ಸಿಎಂ ಬೊಮ್ಮಾಯಿ ಬಿಜೆಪಿಯೇತರ ಹಿನ್ನೆಲೆಯಿಂದ ಬಂದವರಾದ್ದರಿಂದ ಸ್ವಲ್ಪವಾದರೂ ಪ್ರಬುದ್ಧತೆ ಇರುವ ನಿರೀಕ್ಷೆ ಇತ್ತು, ಆದರೆ ಬಿಜೆಪಿಯ ನೀರನ್ನು ಕುಡಿದು ಅವರು ಬಾಲಿಶವಾಗಿ ವರ್ತಿಸುತ್ತಿದ್ದಾರೆ! ಬಿಜೆಪಿಯ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಓದಿ ಬಂದು ಸದನದಲ್ಲಿ ಮಾತಾಡುತ್ತಿದ್ದಾರೆ!’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಸಿಎಂ ಬೊಮ್ಮಾಯಿ(Basavaraj Bommai)ಯವರು ಇಂಧನ ತೈಲಗಳನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಪ್ರಸ್ತಾಪಕ್ಕೆ ವಿರೋಧಿಸಿ ಕೇಂದ್ರದ ಜಿಎಸ್‌ಟಿ ನೀತಿ ಅವೈಜ್ಞಾನಿಕವಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ತಮಿಳುನಾಡಿನ ಮಾದರಿಯಲ್ಲಿ ರಾಜ್ಯದಲ್ಲಿ ತೆರಿಗೆ ಕಡಿತಗೊಳಿಸಲು ಏಕೆ ಹಿಂದೇಟು? ಜನರ ಬೆಲೆ ಏರಿಕೆಯ ಹೊರೆ ಇಳಿಸುವ ಬದ್ಧತೆ ತೋರಲಿ. ಬಾಲಿಶ ಸಮರ್ಥನೆಗಳನ್ನು ಬಿಡಲಿ’ ಎಂದು ಕಾಂಗ್ರೆಸ್(Congress) ಕುಟುಕಿದೆ.
ಸದನದಲ್ಲಿ ಬೆಲೆ ಏರಿಕೆಯ ಬಗ್ಗೆ ಸಿಎಂ ಸಮರ್ಥನೆ ತೀರ ಹಾಸ್ಯಾಸ್ಪದವಾಗಿದೆ.
ಬಿಜೆಪಿಯೇತರ ಹಿನ್ನೆಲೆಯಿಂದ ಬಂದವರಾದ್ದರಿಂದ ಸ್ವಲ್ಪವಾದರೂ ಪ್ರಬುದ್ಧತೆ ಇರುವ ನಿರೀಕ್ಷೆ ಇತ್ತು, ಆದರೆ ಬಿಜೆಪಿಯ ನೀರನ್ನು ಕುಡಿದು ಬಾಲಿಶವಾಗಿ ವರ್ತಿಸುತ್ತಿದ್ದಾರೆ!
ಬಿಜೆಪಿಯ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಓದಿ ಬಂದು ಸದನದಲ್ಲಿ ಮಾತಾಡುತ್ತಿದ್ದಾರೆ!
— Karnataka Congress (@INCKarnataka) September 20, 2021
ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ: ಬಿ.ಎಸ್.ಯಡಿಯೂರಪ್ಪ
‘ಉತ್ತಮ ರಸ್ತೆಗಳಲ್ಲಿ ಓಡಾಡಬೇಕೆಂದರೆ ದುಬಾರಿ ಟೋಲ್ ಕಟ್ಟಿ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ(Nitin Gadkari) ಹೇಳುತ್ತಾರೆ. ಉಚಿತ ಲಸಿಕೆ ಬೇಕೆಂದರೆ ದುಬಾರಿ ಪೆಟ್ರೋಲ್ ಖರೀದಿಸಿ ಎಂದು ಬಿಜೆಪಿಗರು ಹೇಳುತ್ತಾರೆ. ಪೆಟ್ರೋಲ್‌ನಲ್ಲಿ ಪಡೆಯುವ ರೋಡ್ ಸೆಸ್, ಲಸಿಕೆ ನೀಡಲು ಬಜೆಟ್‌ನಲ್ಲಿ ಘೋಷಿಸಿದ 35 ಸಾವಿರ ಕೋಟಿ ರೂ. ಎಲ್ಲಿ ಹೋಗುತ್ತಿದೆ ಎಂದು ಮಾತ್ರ ಹೇಳಲಾರರು!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಿಎಂ @BSBommai ಅವರು ಇಂಧನತೈಲಗಳನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಪ್ರಸ್ತಾಪಕ್ಕೆ ವಿರೋಧಿಸಿ ಕೇಂದ್ರದ ಜಿಎಸ್‌ಟಿ ನೀತಿ ಅವೈಜ್ಞಾನಿಕವಾಗಿರುವುದನ್ನ ಸ್ಪಷ್ಟಪಡಿಸಿದ್ದಾರೆ.
ಆದರೆ ತಮಿಳುನಾಡಿನ ಮಾದರಿಯಲ್ಲಿ ತೆರಿಗೆ ಕಡಿತಗೊಳಿಸಲು ಏಕೆ ಹಿಂದೇಟು? ಜನರ ಬೆಲೆ ಏರಿಕೆಯ ಹೊರೆ ಇಳಿಸುವ ಬದ್ಧತೆ ತೋರಲಿ. ಬಾಲಿಶ ಸಮರ್ಥನೆಗಳನ್ನು ಬಿಡಲಿ.
— Karnataka Congress (@INCKarnataka) September 20, 2021
‘ಯುಪಿಎ ಸರ್ಕಾರ(UPA Govt.)ದ ಅವಧಿಯಲ್ಲಿ ಇದ್ದ ಇಂಧನತೈಲಗಳ ಮೇಲಿನ ತೆರಿಗೆ ಪೆಟ್ರೋಲ್ ಗೆ 9.21 ರೂ. ಮತ್ತು ಡೀಸೆಲ್ ಗೆ 3.45 ರೂ. ಇತ್ತು. ಪ್ರಧಾನಿ ಮೋದಿಯವರ ದರೋಡೆ ಸರ್ಕಾರದಲ್ಲಿ ಪೆಟ್ರೋಲ್ ಗೆ 32.90 ರೂ. ಮತ್ತು ಡೀಸೆಲ್ ಗೆ 31.80 ರೂ. ಇದೆ. ಸುಮಾರು ಶೇ.300ರಷ್ಟು ತೆರಿಗೆ ಏರಿಸಿ ಜನರ ಸುಲಿಯನ್ನು ದರೋಡೆ ಎನ್ನದೆ ಇನ್ನೇನು ಹೇಳಬೇಕು? ದೋಚಿದ ಈ ಹಣ ಎಲ್ಲಿ ಹೋಗುತ್ತಿದೆ ಎಂದು ಬಿಜೆಪಿ(BJP) ಹೇಳಬೇಕು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈಗಾಗಲೇ ಬೆಲೆ ಏರಿಕೆಯಿಂದ ಜನರ ಬದುಕು ಹೈರಾಣಾಗಿದೆ, ಇದರ ನಡುವೆಯೇ ಕೇಂದ್ರ ಸರ್ಕಾರ ಮತ್ತಷ್ಟು ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಿಸಿ ಜನರ ಬದುಕನ್ನು ಮತ್ತಷ್ಟು ದುಬಾರಿಯಾಗಿಸಿದೆ.
ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಸರ್ಕಾರ ಸಾಮಾನ್ಯರ ಮೇಲೆ ತೆರಿಗೆ ಬರೆ ಹಾಕುತ್ತಿದೆ.
ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ.
— Karnataka Congress (@INCKarnataka) September 20, 2021
ಇದನ್ನೂ ಓದಿ: ಕೌಟುಂಬಿಕ ಕಲಹ?: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ..!
‘ಈಗಾಗಲೇ ಬೆಲೆ ಏರಿಕೆಯಿಂದ ಜನರ ಬದುಕು ಹೈರಾಣಾಗಿದೆ, ಇದರ ನಡುವೆಯೇ ಕೇಂದ್ರ ಸರ್ಕಾರ ಮತ್ತಷ್ಟು ವಸ್ತುಗಳ ಮೇಲಿನ ಜಿಎಸ್‌ಟಿ(GST) ಹೆಚ್ಚಿಸಿ ಜನರ ಬದುಕನ್ನು ಮತ್ತಷ್ಟು ದುಬಾರಿಯಾಗಿಸಿದೆ. ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಸರ್ಕಾರ ಸಾಮಾನ್ಯರ ಮೇಲೆ ತೆರಿಗೆ ಬರೆ ಹಾಕುತ್ತಿದೆ. ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.