ಹುಬ್ಬಳ್ಳಿ; ಇಪ್ಪತ್ತು ವರ್ಷದಲ್ಲಿ ಸಂಸದ, ಸಚಿವನಾಗಿ ಯಾವತ್ತೂ ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ಕಲ್ಲಿದ್ದಲಿನಂತಹ ಖಾತೆ ನಿರ್ವಹಿಸುತ್ತಿದ್ದರೂ ಕೈ ಕಪ್ಪು ಮಾಡಿಕೊಂಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಪ್ರಗತಿಯ ನೋಟ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಹ್ಲಾದ ಜೋಶಿ ಕೆಲಸ ಮಾಡಿಲ್ಲ ಎಂದು ಹೇಳುವ ಧೈರ್ಯ ನಮ್ಮ ವಿರೋಧಿ ಗಳಿಗು ಇಲ್ಲ. ಹಾಗೇ ಕೆಲಸ ಮಾಡಿದ್ದೇನೆ. 1984ರ ನಂತರ ಯಾರೂ ಸಂಸದೀಯ ವ್ಯವಹಾರಗಳ ಖಾತೆ 5 ವರ್ಷ ಪೂರೈಸಿರಲಿಲ್ಲ. ತಾವದನ್ನು ಪೂರೈಸಿದ್ದಾಗಿ ಸಂತಸ ಹಂಚಿಕೊಂಡರು.
ಕಲ್ಲಿದ್ದಲು ಖಾತೆ ಎಂದರೆ ಹಗರಣಗಳೇ ನೆನಪಾಗುತ್ತವೆ. ಭ್ರಷ್ಠಾಚಾರ ಮಿತಿ ಮೀರಿತ್ತು. ಆದರೆ, ಕಲ್ಲಿದ್ದಲು ಖಾತೆ ಮಂತ್ರಿಯಾದರೂ ನಾನೂ ಕೈ ಕಪ್ಪು ಮಾಡಿಕೊಂಡಿಲ್ಲ. ಖಾತೆ ಹಂಚುವಾಗ ಪ್ರಧಾನಿ ಮೋದಿ ಹೇಳಿದ್ದರು ಮುಖಕ್ಕೆ ಮಸಿ ಬಳಿದುಕೊಳ್ಳಬೇಡ ಎಂದು. ಅವರ ಆಶಯದಂತೆ ಕಲ್ಲಿದ್ದಲು, ಗಣಿ ಖಾತೆಯಲ್ಲಿ ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಜೋಶಿ ಹೇಳಿದರು.
ಹುಬ್ಬಳ್ಳಿ-ಧಾರವಾಡದಲ್ಲಿ ಕೈಗಾರೀಕರಣಕ್ಕೇ ರಸ್ತೆ, ರೈಲು ಮತ್ತು ವಿಮಾನ ನಿಲ್ದಾಣ ಹೀಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಧ್ಯೆ ಬ್ರಾಡ್ಗೆಜ್ ಪರಿವರ್ತನೆಗೆ ಸುಮಾರು 20 ವರ್ಷ ಬೇಕಾಯಿತು. ಆದರೆ, ಮೋದಿ ಸರಕಾರ ನಾಕ್ಕೈದು ವರ್ಷದಲ್ಲಿ ಡಬಲ್ ಲೈನ್ ಮತ್ತು ಮಾರ್ಗ ವಿದ್ಯುತ್ತೀಕರಣ ಮಾಡಿದ್ದಾಗಿ ಹೇಳಿದರು.
ಧಾರವಾಡಕ್ಕೆ ಒಂದೇ ಭಾರತ್: ಒಂದೇ ಭಾರತ್ ರೈಲು ಸಂಚಾರಕ್ಕೆ ತುಮಕೂರು- ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆ ಹಾಕಿಕೊಳ್ಳಲಾಗಿದೆ. ಶೇ.80ರಷ್ಟು ಜಾಗ ಸಿಕ್ಕರೆ ಮೂರ್ನಾಲ್ಕು ವರ್ಷದಲ್ಲಿ ಬೆಂಗಳೂರು ಧಾರವಾಡ-ಮಧ್ಯೆ ಒಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ ಎಂದರು.
350 ಕೋಟಿ ವೆಚ್ಚದಲ್ಲಿ ಹೊಸ ವಿಮಾನ ನಿಲ್ದಾಣ:
ಹುಬ್ಬಳ್ಳಿಯಲ್ಲಿ ಇಂದು ದೊಡ್ಡ ವಿಮಾನ ನಿಲ್ದಾಣವಾಗಿದೆ. ಮಾ.10ರಂದು 350 ಕೋಟಿ ವೆಚ್ಚದಲ್ಲಿ ಮತ್ತೊಂದು ಟರ್ಮಿನಲ್ ಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ಶೀಘ್ರದಲ್ಲೇ ಮುಂಬೈ ವಿಮಾನ ಶುರುವಾಗಲಿದೆ. ಅಲ್ಲದೇ, ಬೆಂಗಳೂರಿನ ವಿಮಾನದಲ್ಲಿ ಏರ್ ಬಸ್ ಮಾಡಲು ಮಾತುಕತೆಯಾಗಿದೆ. ಮೂರು ತಿಂಗಳಲ್ಲಿ ಇದೂ ಆಗಲಿದೆ ಎಂದು ಜೋಶಿ ಹೇಳಿದರು.
1200 ಶಾಲೆ ಕೊಠಡಿ ನಿರ್ಮಾಣ: ಸಿ ಎಸ್ ಆರ್ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 1200 ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ. 20000 ಸಾವಿರ ಡೆಸ್ಕ್ ಕೊಡಲಾಗಿದೆ. ಜಿಂದಾಲ್ ಕಂಪನಿಯಿಂದ 70 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಶಾಲೆಗಳಿಗೆ ಬಣ್ಣ ಹೆಚ್ಚಿಸಲಾಗುತ್ತಿದೆ. ವಿವಿಧೆಡೆ ಹೈಟೆಕ್ ಶೌಚಾಲಯ ಒದಗಿಸಿದೆ. ಹೀಗೆ ಗಣಿ ಕಂಪನಿಗಳನ್ನು ಭ್ರಷ್ಟಾಚಾರದ ಬದಲು ಸಾರ್ವಜನಿಕ ಸೇವೆಗೆ ತೊಡಗಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.
ಕಲ್ಲಿದ್ದಲಿನಲ್ಲಿ ಭಾರತ ಆತ್ಮ ನಿರ್ಭರ: ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಆತ್ಮ ನಿರ್ಭರ ಆಗಲಿದೆ. ದೇಶದಲ್ಲಿ ಈಗ 325 ವರ್ಷಗಳಿಗೆ ಆಗುವಷ್ಟು ಕಲ್ಲಿದ್ದಲು ಗಣಿ ಇದೆ. ಬರುವ ವರ್ಷಗಳಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದಿಲ್ಲ. ಮೋದಿ ಸರ್ಕಾರ ಬರುವ ಮೊದಲು ಗಣಿಯಿಂದ ಒರಿಸ್ಸಾ ಆದಾಯ 5000 ಕೋಟಿ ಇತ್ತು. ಅದೀಗ ಕೇಂದ್ರ ಸರ್ಕಾರದ ಪಾಲಿಸಿ ಗಳಿಂದಾಗಿ 5000 ಕೋಟಿ ಆಗಿದೆ ಎಂದು ಸಚಿವ ಜೋಶಿ ತಿಳಿಸಿದರು.
ಜೈಶಂಕರ್ ಅತ್ಯಂತ ಯಶಸ್ವಿ ವಿದೇಶಾಂಗ ಸಚಿವರು. ಹಲವು ಪ್ರಥಮಗಳಲ್ಲಿ ಮೊದಲಿಗರು. 41 ವರ್ಷಗಳ ಕಾಲ ವಿದೇಶಾಂಗ ವ್ಯವಹಾರ ಇಲಾಖೆಯಲ್ಲಿ ಐಎಎಸ್ ಅಧಿಕಾರಿಯಾಗಿ ಯಾವುದೇ ಆರೋಪ, ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ದೇಶದ ಹಿತವನ್ನು ಸರ್ವಪರಿಯಾಗಿ ಇಟ್ಟುಕೊಂಡು ಕೆಲಸ ಮಾಡಿದ್ದರೆ. ಇವರ ಕಾರ್ಯವೈಖರಿ ನೋಡಿ ಪ್ರಧಾನಿ ಮೋದಿ ಇವರನ್ನು ಕರೆದು ಮಂತ್ರಿ ಮಾಡಿದರು ಎಂದು ಜೋಶಿ ಸ್ಮರಿಸಿದರು.
ಜಿ.20ಯಲ್ಲಿ ಭಾರತದ ತಾಕತ್ತು ಪ್ರದರ್ಶನ:
ಒಂದು ಕಾಲದಲ್ಲಿ ಜಿ.20ಯಲ್ಲಿ ನಮ್ಮ ಧ್ವನಿಯೇ ಇರುತ್ತಿರಲಿಲ್ಲ. ಆದರೆ, ಈಗ ಅದ್ಭುತ ಸಾಧನೆಯಾಗಿದೆ. ಭಾರತದ ತಾಕತ್ತು ಏನೆಂಬುದನ್ನು ಜೈಶಂಕರ್ ಸಾದರಪಡಿಸಿದ್ದಾರೆ. ಮೋದಿ ಅವರ ಕಲ್ಪನೆಯಂತೆ ಅತ್ಯಂತ ಯಶಸ್ವಿಯಾಗಿ ಸಂಘಟಿಸಿ ಜನಪ್ರಿಯತೆ ಪಡೆದಿದ್ದಾರೆಂದು ಸಚಿವ ಜೋಶಿ ಶ್ಲಾಘಿಸಿದರು.
ವಿದೇಶಾಂಗ ಸಚಿವರಿಗೆ ಸಿಹಿ ಸತ್ಕಾರ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಸಿಹಿಯ ಸಂಕೇತವಾಗಿ ಧಾರವಾಡ ಪೇಡಾ ನೀಡಿ ಆತ್ಮೀಯವಾಗಿ ಸತ್ಕರಿಸಿದರು.
ಸಮಾರಂಭದಲ್ಲಿ ವಿದೇಶಾಂಗ ಸಚಿವರು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹತ್ತು ವರ್ಷದಲ್ಲಾದ ಅಭಿವೃದ್ಧಿ ಕುರಿತ ಪ್ರಗತಿಯ ನೋಟ ಪುಸ್ತಕ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೆಎಲ್ ಇ ಸಂಸ್ಥೆ ಪ್ರಭಾಕರ್ ಕೋರೆ, ರಾಜ್ಯಸಭಾ ಸದಸ್ಯ ಕಡಾಡಿ ಈರಣ್ಣ, ಪ್ರದೀಪ್ ಶೆಟ್ಟರ್ ಮತ್ತಿತರರು ಇದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.