ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು

ಓಬಿಸಿ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿಯಿಂದ ಆರೋಪ.  

Last Updated : Oct 16, 2017, 05:51 PM IST
ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು title=

ಬೆಂಗಳೂರು: ಭೂಪಸಂದ್ರ ಡಿನೋಟಿಫಿಕೇಶನ್ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿ ಯಲ್ಲಿ ದೂರು ದಾಖಲಾಗಿದೆ.

ಕಳೆದ ವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಪಸಂದ್ರದಲ್ಲಿ 6.36 ಎಕರೆ ಜಮೀನನ್ನು ಡಿ‌ನೋಟಿಫೈ ಮಾಡಿದ್ದ್ದಾರೆಂದು ಆರೋಪಿಸಿದ್ದ ಪುಟ್ಟಸ್ವಾಮಿ ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಎಸಿಬಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕ ವೈ.ಎ.ನಾರಯಣಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ ನಾರಯಣ್, ಸೇರಿದಂತೆ ಹಲವರು ಭಾಗಿ ಈ ಸಂದರ್ಭದಲ್ಲಿ ಪುಟ್ಟಸ್ವಾಮಿಗೆ ಸಾಥ್ ನೀಡಿದರು.

ಭೂಪಸಂದ್ರದಲ್ಲಿ 6.36 ಎಕರೆ ಜಮೀನನ್ನು ಡಿ‌ನೋಟಿಫೈ ಮಾಡಿದ್ದ್ದಾರೆಂದು ಆರೋಪಿಸಿದ್ದ ಬಿ.ಜೆ. ಪುಟ್ಟಸ್ವಾಮಿ ಸುದ್ದಿಗೋಷ್ಠಿ ನಡೆಸುವುದರ ಮೂಲಕ ಸಿಎಂ ವಿರುದ್ದ ಆರೋಪಿಸಿದ್ದರು. ಈ ಹಿನ್ನೆಲೆ ಇಂದು ಬಿ.ಜೆ.ಪುಟ್ಟಸ್ವಾಮಿ ಸಿಎಂ ವಿರುದ್ದ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿದ ನಂತರ ಮಾತನಾಡಿದ ಬಿ.ಜೆ. ಪುಟ್ಟಸ್ವಾಮಿ, ದಾಖಲೆಗಳಲ್ಲಿ ಸತ್ಯಾಂಶ ಇದ್ದರೆ ಸಿಎಂ ರಾಜೀನಾಮೆ ನೀಡಲಿ, ಸತ್ಯಾಂಶ ಏನೆಂಬುದು ರಾಜ್ಯದ ಜನತೆಗೆ ಗೊತ್ತಾಗಲಿ, ನಾಳೆ ಈ ಬಗ್ಗೆ ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Trending News