close

News WrapGet Handpicked Stories from our editors directly to your mailbox

ಕಾಂಗ್ರೆಸ್ ದಿಕ್ಕು ದೆಸೆಯಿಲ್ಲದ ಪಕ್ಷ: ಆರ್. ಅಶೋಕ್ ವ್ಯಂಗ್ಯ

ಕಾಂಗ್ರೆಸ್ ಪಕ್ಷ ದಿಕ್ಕು ದಸೆಯಿಲ್ಲದ ಪಕ್ಷವಾಗಿದೆ. ಅಲ್ಲಿ ಯಾರಲ್ಲಿಯೂ ಹೊಂದಾಣಿಕೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ವ್ಯಂಗ್ಯ ಮಾಡಿದ್ದಾರೆ.

Updated: Sep 22, 2019 , 04:10 PM IST
ಕಾಂಗ್ರೆಸ್ ದಿಕ್ಕು ದೆಸೆಯಿಲ್ಲದ ಪಕ್ಷ: ಆರ್. ಅಶೋಕ್ ವ್ಯಂಗ್ಯ

ಕೋಲಾರ: ಕಾಂಗ್ರೆಸ್ ಪಕ್ಷ ದಿಕ್ಕು ದಸೆಯಿಲ್ಲದ ಪಕ್ಷವಾಗಿದೆ. ಅಲ್ಲಿ ಯಾರಲ್ಲಿಯೂ ಹೊಂದಾಣಿಕೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ವ್ಯಂಗ್ಯ ಮಾಡಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾರೂ ದಿಕ್ಕು ದೆಸೆ ಇಲ್ಲ. ಶನಿವಾರ ಕಾಂಗ್ರೆಸ್ ಪಾರ್ಟಿಗೆ ಅವರ ಅಧ್ಯಕ್ಷರೇ ಬಂದಿಲ್ಲ, ಇನ್ನು ರಣಕಹಳೆ ಎಲ್ಲಿ? ಎರಡು ತಿಂಗಳಾದರೂ ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡುವ ಯೋಗ್ಯತೆ ಅವರಿಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆಯೇ ಇಲ್ಲದಿರುವುದರಿಂದ  ರಣವೂ ಇಲ್ಲ, ಕಹಳೆಯೂ ಇಲ್ಲ ಎಂದು ಲೇವಡಿ ಮಾಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿದ್ದು, ಆ ಪಕ್ಷ ದಿಕ್ಕು ದಸೆಯಿಲ್ಲದ ಪಕ್ಷವಾಗಿದೆ. ಇದುವರೆಗೂ ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಬಾಯ್ ಬಾಯ್ ಅಂದವರು ಈಗ ವಿಲನ್ ಗಳಾಗಿದ್ದಾರೆ ಎಂದು ಅಶೋಕ್ ಹೇಳಿದರು.