ಬೆಂಗಳೂರು: ರಾಜ್ಯಕ್ಕೆ ಈಗ ಎಂದು ಕಂಡಿಯರ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಪ್ರವೇಶದಲ್ಲಿ ಈಗ ಜನರ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗ ಆಶ್ಚರ್ಯಕರ ಘಟನೆಯೊಂದರಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಜನಾರ್ಧನ್ ಪೂಜಾರಿ ಅದೃಷ್ಟವಶಾತ್ ಪ್ರಾಣಾಪಾಯದಿಂದಾಗಿ ಪಾರಾಗಿದ್ದಾರೆ ಎನ್ನಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ಅವರ ಮನೆಯಿಂದ ಜಿಲ್ಲಾಡಳಿತ ಈಗ ರಕ್ಷಣೆ ಮಾಡಿದೆ. ಈಗ ಎಎನ್ ಐ ಬಿಡುಗಡೆ ಮಾಡಿರುವ ವೀಡಿಯೋವೊಂದರಲ್ಲಿ ಎನ್ಡಿಆರ್ಎಫ್ ಸಿಬ್ಬಂಧಿ ರಕ್ಷಿಸಿ ಅವರನ್ನು ದೋಣಿಯಲ್ಲಿ ಕರೆದುಕೊಂಡು ಬಂದಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
#WATCH Dakshina Kannada District Administration today rescued Former Union Minister and Congress leader B Janardhana Poojary from his house in flood -affected Bantwal in Karnataka, today. pic.twitter.com/SZmgy6aYOt
— ANI (@ANI) August 10, 2019
ಜನಾರ್ಧನ ಪೂಜಾರಿ 1982 ರಲ್ಲಿ ಇಂದಿರಾ ಗಾಂಧಿ ಸಂಪುಟದಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವರಾಗಿದ್ದರು. ಮುಂದೆ ಅವರು 1987 ರವರೆಗೆ ರಾಜೀವ್ ಗಾಂಧಿಯವರ ಅವಧಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವರಾಗಿ ಮುಂದುವರೆದರು. ನಂತರ ಪ್ರಧಾನಿ ರಾಜೀವ್ ಗಾಂಧಿ ಬಿ. ಜನಾರ್ಧನ್ ಪೂಜಾರಿ ಅವರನ್ನು 1987 ರಿಂದ 1989 ರವರೆಗೆ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿ ನೇಮಿಸಿದರು.ಅಷ್ಟೇ ಅಲ್ಲದೆ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಕಾರ್ಯ ನಿರ್ವಹಿಸಿದರು.