ಕಾಂಗ್ರೆಸ್ ಪಕ್ಷದ 21 ವರ್ಷದ ತ್ರಿವೇಣಿ ಬಳ್ಳಾರಿ ಮೇಯರ್ ಆಗಿ ಆಯ್ಕೆ!

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಟ್ಟ ಈಗ ಕಾಂಗ್ರೆಸ್ ಪಕ್ಷಕ್ಕೆ ಒಲಿದಿದೆ.ಕಾಂಗ್ರೆಸ್ ಪಕ್ಷದಿಂದ 21 ವರ್ಷ ವಯಸ್ಸಿನ ತ್ರಿವೇಣಿ ಬಳ್ಳಾರಿ ಮೇಯರ್ ಆಗುವ ಮೂಲಕ ರಾಜ್ಯದ ಅತಿ ಕಿರಿಯ ಮೇಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Written by - Manjunath N | Last Updated : Mar 29, 2023, 03:59 PM IST
  • ಒಟ್ಟಾಗಿ ಕಾಂಗ್ರೆಸ್ ಪಕ್ಷದಿಂದ ಮೂವರು ಅಭ್ಯರ್ಥಿಗಳು ಮೇಯರ್ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು.
  • ಅದರಲ್ಲಿ ಕ್ರಮವಾಗಿ ನಾಲ್ಕನೇ ವಾರ್ಡ್ ನ ತ್ರಿವೇಣಿ, ಏಳನೇ ವಾರ್ಡಿನ ಉಮಾದೇವಿ ಹಾಗೂ 38 ನೇ ವಾರ್ಡಿನ ಕುಬೇರ ಅವರಿಂದ ನಾಮಪತ್ರ ಸಲ್ಲಿಸಿದ್ದರು.
  • ಈಗ ನಾಲ್ಕನೇ ವಾರ್ಡ್ ನ ತ್ರಿವೇಣಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ
 ಕಾಂಗ್ರೆಸ್ ಪಕ್ಷದ 21 ವರ್ಷದ ತ್ರಿವೇಣಿ ಬಳ್ಳಾರಿ ಮೇಯರ್ ಆಗಿ ಆಯ್ಕೆ! title=

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಟ್ಟ ಈಗ ಕಾಂಗ್ರೆಸ್ ಪಕ್ಷಕ್ಕೆ ಒಲಿದಿದೆ.ಕಾಂಗ್ರೆಸ್ ಪಕ್ಷದಿಂದ 21 ವರ್ಷ ವಯಸ್ಸಿನ ತ್ರಿವೇಣಿ ಬಳ್ಳಾರಿ ಮೇಯರ್ ಆಗುವ ಮೂಲಕ ರಾಜ್ಯದ ಅತಿ ಕಿರಿಯ ಮೇಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ನೂತನ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

ಒಟ್ಟಾಗಿ ಕಾಂಗ್ರೆಸ್ ಪಕ್ಷದಿಂದ ಮೂವರು ಅಭ್ಯರ್ಥಿಗಳು ಮೇಯರ್ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು.ಅದರಲ್ಲಿ ಕ್ರಮವಾಗಿ ನಾಲ್ಕನೇ ವಾರ್ಡ್ ನ ತ್ರಿವೇಣಿ, ಏಳನೇ ವಾರ್ಡಿನ ಉಮಾದೇವಿ ಹಾಗೂ 38 ನೇ ವಾರ್ಡಿನ ಕುಬೇರ ಅವರಿಂದ ನಾಮಪತ್ರ ಸಲ್ಲಿಸಿದ್ದರು.ಈಗ ನಾಲ್ಕನೇ ವಾರ್ಡ್ ನ ತ್ರಿವೇಣಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ, ಉಪಮೇಯರ್ ಆಗಿ  33 ನೇ ವಾರ್ಡಿನ ಜಾನಕಮ್ಮ ಅಧಿಕಾರ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Priyanka Chopra : ಪ್ರಿಯಾಂಕಾ ಬಾಲಿವುಡ್ ತೊರೆಯಲು ಕಾರಣ ಕರಣ್‌ ಜೋಹರ್‌!? ಹೊರಬಿತ್ತು ಅಸಲಿ ಸತ್ಯ

ಮಹಾನಗರ ಪಾಲಿಕೆಯಲ್ಲಿ ಒಟ್ಟು 39 ವಾರ್ಡ್ ಗಳ ಪೈಕಿ ಐದು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್ 26 ಸದಸ್ಯರಿದ್ದಾರೆ.ಕಳೆದ ವರ್ಷ ಕಾಂಗ್ರೆಸ್ ನಿಂದ ರಾಜೇಶ್ವರಿ ಸುಬ್ಬರಾಯುಡು ಮೇಯರ್ ಆಗಿ ಆಯ್ಕೆಯಾಗಿದ್ದರು.ಈಗ ಮೇಯರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನೂತನ ಮೇಯರ್ ಆಯ್ಕೆ ಮಾಡಬೇಕಾಗಿತ್ತು, ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ ಉಪಮೇಯರ್ ಸ್ಥಾನವು ಎಸ್ಟಿಗೆ ಮೀಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News