ಹಿರಿಯರನ್ನೂ ಸಚಿವ‌ ಸ್ಥಾನಕ್ಕೆ ಪರಿಗಣಿಸಿ- ಎಚ್​.ಎಂ. ರೇವಣ್ಣ

ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ.

Last Updated : Jun 5, 2018, 11:57 AM IST
ಹಿರಿಯರನ್ನೂ ಸಚಿವ‌ ಸ್ಥಾನಕ್ಕೆ ಪರಿಗಣಿಸಿ- ಎಚ್​.ಎಂ. ರೇವಣ್ಣ title=

ನವದೆಹಲಿ: ನಮ್ಮ ಸಮಾಜದಿಂದ (ಕುರುಬ) ಮೂರ್ನಾಲ್ಕು ಶಾಸಕರಿದ್ದಾರೆ. ಆದರೆ ಅವರಲ್ಲಿ ನಾನೇ ಹಿರಿಯನಾಗಿದ್ದೇನೆ. ಆದ್ದರಿಂದ ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಕಾಂಗ್ರೆಸ್​ ನಾಯಕ ಎಚ್​.ಎಂ. ರೇವಣ್ಣ ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ‌. ಜೆಡಿಎಎಸ್​ನಲ್ಲಿ ಘಟಾನುಘಟಿಗಳು ಸಚಿವರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಕಿರಿಯರಿಗೆ ಸಚಿವ‌ ಸ್ಥಾನ ನೀಡಿದರೆ ಸರಿಯಾಗಲಾರದು. ಕಾಂಗ್ರೆಸ್ ಕೂಡ ಕೆಲ ಹಿರಿಯರಿಗೆ ಮಣೆ ಹಾಕಬೇಕು ಎಂದು ಹೇಳಿದರು.

Trending News