ಬಾಗಲಕೋಟೆಯಲ್ಲಿ ಸಿಇಟಿ ಪರೀಕ್ಷೆ ಬರೆದ ಓರ್ವ ಸೋಂಕಿತ ವಿದ್ಯಾರ್ಥಿ

ವೃತ್ತಿಪರ ಕೋರ್ಸಗಳ ಆಯ್ಕೆಗಾಗಿ ನಡೆಸಲಾಗುವ ಸಿಇಟಿ ಪರೀಕ್ಷೆಯನ್ನು ಕೊರೊನಾ ಸೋಂಕಿತ ವಿದ್ಯಾರ್ಥಿಯೊಬ್ಬರು ಬಾಗಲಕೋಟೆಯಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

Updated: Jul 31, 2020 , 07:14 PM IST
ಬಾಗಲಕೋಟೆಯಲ್ಲಿ ಸಿಇಟಿ ಪರೀಕ್ಷೆ ಬರೆದ ಓರ್ವ ಸೋಂಕಿತ ವಿದ್ಯಾರ್ಥಿ
Photo Courtsey : Facebook (Bagalkote varthe)

ಬೆಂಗಳೂರು: ವೃತ್ತಿಪರ ಕೋರ್ಸಗಳ ಆಯ್ಕೆಗಾಗಿ ನಡೆಸಲಾಗುವ ಸಿಇಟಿ ಪರೀಕ್ಷೆಯನ್ನು ಕೊರೊನಾ ಸೋಂಕಿತ ವಿದ್ಯಾರ್ಥಿಯೊಬ್ಬರು ಬಾಗಲಕೋಟೆಯಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ ನವನಗರದಲ್ಲಿರುವ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾಗಿರಿ 5ನೇ ಕ್ರಾಸಿನ ಓರ್ವ ವಿದ್ಯಾರ್ಥಿಯೊಬ್ಬರು  ಸಿಇಟಿ ಪರೀಕ್ಷೆ ಬರೆದಿರುವುದು ವರದಿಯಾಗಿದೆ.ಅವರಿಗೆ ಈ ಮೊದಲೇ ಪರೀಕ್ಷೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.

ಗುರುವಾರಂದು ಒಟ್ಟು ಎರಡು ಅವಧಿಯಲ್ಲಿ ಪರೀಕ್ಷೆಗಳು ನಡೆದಿವೆ ಬೆಳಗ್ಗೆ ಜೀವಶಾಸ್ತ್ರ, ತದನಂತರ ಗಣಿಶಾಸ್ತ್ರ ಪರೀಕ್ಷೆ ನಡೆದಿತ್ತು