Coronavirus Update: ರಾಜ್ಯದಲ್ಲಿ ಒಂದು ವಾರ ಮದುವೆಯಿಲ್ಲ, ಸಿನಿಮಾ ಇಲ್ಲ, ಮಾಲ್ ಇಲ್ಲ...!

ರಾಜ್ಯದಲ್ಲಿ ಕರೋನವೈರಸ್ (ಸಿಒವಿಐಡಿ -19) ಕಾರಣದಿಂದಾಗಿ ಬುಧವಾರ ಮೊದಲ ಸಾವಿನ ಪ್ರಕರಣ ದೃಢಪಟ್ಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಎಲ್ಲ ಮಾಲ್ ಗಳು, ಸಿನಿಮಾ ಹಾಲ್, ಪಬ್, ಮದುವೆ ಸಮಾರಂಭ  ಹಾಗೂ ಇತರ ಸಾಮೂಹಿಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ.

Last Updated : Mar 13, 2020, 04:08 PM IST
Coronavirus Update: ರಾಜ್ಯದಲ್ಲಿ ಒಂದು ವಾರ ಮದುವೆಯಿಲ್ಲ, ಸಿನಿಮಾ ಇಲ್ಲ, ಮಾಲ್ ಇಲ್ಲ...!  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕರೋನವೈರಸ್ (ಸಿಒವಿಐಡಿ -19) ಕಾರಣದಿಂದಾಗಿ ಬುಧವಾರ ಮೊದಲ ಸಾವಿನ ಪ್ರಕರಣ ದೃಢಪಟ್ಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಎಲ್ಲ ಮಾಲ್ ಗಳು, ಸಿನಿಮಾ ಹಾಲ್, ಪಬ್, ಮದುವೆ ಸಮಾರಂಭ  ಹಾಗೂ ಇತರ ಸಾಮೂಹಿಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ.

ಕಲ್ಬುರ್ಗಿಯ 76 ವರ್ಷದ ವ್ಯಕ್ತಿ ನಿಧನರಾದರು ಮತ್ತು ಶಂಕಿತ COVID-19 ರೋಗಿಯಾಗಿದ್ದಾರೆ ಎಂದು ಧೃಡಪಟ್ಟ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯ ಆರೋಗ್ಯ ಸಚಿವ ಶ್ರೀರಾಮಲು ಟ್ವೀಟ್ ಮಾಡಿ 'COVID19  ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಾಲ್, ಸಿನಿಮಾ ಮಂದಿರ, ಜನನಿಬಿಡ ಪ್ರದೇಶಗಳ ಕಾರ್ಯಕ್ರಮ ಹಾಗೂ ಬೃಹತ್ ಸಮಾವೇಶ ಕಾರ್ಯಕ್ರಮಗಳು ಬಂದ್ ಮಾಡಿ ಸರ್ಕಾರ ಆದೇಶಿಸಿದೆ. #CoronaOutbreak ಅನ್ನು ತಡೆಯಲು ನಾಗರೀಕರ ಸಹಕಾರ ಅತ್ಯಗತ್ಯವಾಗಿದೆ. ನಾವೆಲ್ಲರೂ ಸೇರಿ ಸಧೃಡ, ಆರೋಗ್ಯ ಸಮಾಜ ನಿರ್ಮಿಸೋಣ' ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ  COVID19 ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಸಭೆಯಲ್ಲಿ ಡಿಸಿಎಂ ಗೋವಿಂದ್ ಕಾರಜೋಳ, ಅಶ್ವತ್ ನಾರಾಯಣ,  ಹಾಗೂ ಸಚಿವರಾದ ಸುರೇಶ ಕುಮಾರ್, ಸುಧಾರಕರ್, ಖ್ಯಾತ ವೈದ್ಯರಾದ ಡಾ. ದೇವಿಶೆಟ್ಟಿ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ.

Trending News