ಮಹದಾಯಿ ಹೋರಾಟ : 13 ಜನರ ವಿರುದ್ಧ ಸಮನ್ಸ್ ಜಾರಿ

ಮಹದಾಯಿ ಹೋರಾಟದಲ್ಲಿ ಭಾಗಿಯಾಗಿದ್ದ 13 ಜನರ ವಿರುದ್ಧ ನವಲಗುಂದ ಜೆಎಂಎಫ್'ಸಿ ನ್ಯಾಯಾಲಯ ಸಮನ್ಸ್ ಜಾರಿಮಾಡಿದೆ. 

Last Updated : Feb 15, 2018, 03:52 PM IST
ಮಹದಾಯಿ ಹೋರಾಟ : 13 ಜನರ ವಿರುದ್ಧ ಸಮನ್ಸ್ ಜಾರಿ title=

ಹುಬ್ಬಳ್ಳಿ: ಮಹದಾಯಿ ಹೋರಾಟದಲ್ಲಿ ಭಾಗಿಯಾಗಿದ್ದ 13 ಜನರ ವಿರುದ್ಧ ನವಲಗುಂದ ಜೆಎಂಎಫ್'ಸಿ ನ್ಯಾಯಾಲಯ ಸಮನ್ಸ್ ಜಾರಿಮಾಡಿದೆ. 

ಮಹದಾಯಿ ಹೋರಾಟ ಸಂದರ್ಭದಲ್ಲಿ ಸರ್ಕಾರಿ ಆಸ್ತಿ ಪಾಸ್ತಿ ಹಾನಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರ ಲೋಕನಾಥ್ ಹೆಬಸೂರ ಸೇರಿದಂತೆ 13 ಜನರನ್ನು ಫೆ.17ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. 

ಈ ಹಿಂದೆ ಮಹದಾಯಿ ಮತ್ತು ಕಾವೇರಿ ನದಿ ನೀರಿನ ಚಳವಳಿ ಸಂದರ್ಭಗಳಲ್ಲಿ ಅಮಾಯಕ ರೈತರ ಮೇಲೆ ಮೊಕದ್ದಮೆ ಹೂಡಿದ್ದರೆ ಅಂತಹ ಮೊಕದ್ದಮೆ ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಂದಿನ ಗೃಹ ಸಚಿವರಾಗಿದ್ದ ಡಾ. ಜಿ ಪರಮೇಶ್ವರ್ ಅವರು 2016ರ ನವೆಂಬರ್ ನಲ್ಲಿ ವಿಧಾನಸಭೆಯಲ್ಲಿ ತಿಳಿಸಿದ್ದರು.

ಇದಾದ ಬಳಿಕ 2017ರ ಫೆಬ್ರವರಿಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರ ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯುವ ಸಂಬಂಧ ನಿರ್ಧಾರ ಕೈಗೊಂಡಿತ್ತು. ಆದರೆ, ಈಗ ನ್ಯಾಯಾಲಯ ರೈತರ ಮೇಲೆ ಸಮನ್ಸ್ ಜಾರಿಮಾಡಿರುವುದು, ಸರ್ಕಾರ ಮಾತು ತಪ್ಪಿತೇ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. 

Trending News