ಬೆಂಗಳೂರು: ರಾಜ್ಯದಲ್ಲಿ ನಿನ್ನೆ 453 ಜನರಿಗೆ ಕರೋನವೈರಸ್ (Coronavirus) COVID 19 ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದ COVID 19 ವೈರಸ್ ಪೀಡಿತರ ಸಂಖ್ಯೆ 9,150ಕ್ಕೆ ಏರಿಕೆತಾಗಿದೆ. ಬೆಂಗಳೂರು ನಗರವೊಂದರಲ್ಲೇ 196 , ಬಳ್ಳಾರಿಯಲ್ಲಿ 40, ಕಲಬುರಗಿಯಲ್ಲು 39, ವಿಜಯಪುರದಲ್ಲಿ 39, ಮೈಸೂರು ಜಿಲ್ಲೆಯಲ್ಲಿ 18 ಜನರಲ್ಲಿ ವೈರಸ್ ಪತ್ತೆಯಾಗಿದೆ.
ಇದಲ್ಲದೆ ರಾಜ್ಯದಲ್ಲಿ ನಿನ್ನೆ ಕೋವಿಡ್ -19 (Covid-19) ವೈರಸ್ ಪೀಡಿತರ ಪೈಕಿ ಐವರು ಮೃತಪಟ್ಟಿದ್ದಾರೆ. ಅವರೆಂದರೆ ಬೆಂಗಳೂರಲ್ಲಿ ಮೂವರು ಮತ್ತು ಬೀದರ್ನಲ್ಲಿ ಇಬ್ಬರು. ನಿನ್ನೆ ಒಟ್ಟು 225 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 5,618ಕ್ಕೆ ಏರಿಕೆಯಾಗಿದೆ. ಇನ್ನು 3,391 ಸಕ್ರೀಯ ಪ್ರಕರಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಈ 453 ಸೋಂಕು ಪೀಡಿತರ ಪೈಕಿ 69 ಅಂತಾರಾಜ್ಯ ಹಾಗೂ 05 ಅಂತಾರಾಷ್ಟ್ರೀಯ ಪ್ರಯಾಣಿಕರು ಎಂದು ತಿಳಿದುಬಂದಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
- ಬೆಂಗಳೂರು ನಗರ-196
- ಬಳ್ಳಾರಿ-40
- ಕಲಬುರಗಿ-39
- ವಿಜಯಪುರ-39
- ಮೈಸೂರು-18
- ಗದಗ-18
- ಧಾರವಾಡ-15
- ಬಾಗಲಕೋಟೆ-14
- ಬೀದರ್-13
- ದಾವಣಗೆರೆ-08
- ಉತ್ತರ ಕನ್ನಡ-08
- ಕೋಲಾರ-08
- ದಕ್ಷಿಣ ಕನ್ನಡ-07
- ಮಂಡ್ಯ-05
- ಹಾಸನ-05
- ತುಮಕೂರು-04
- ಯಾದಗಿರಿ-03
- ಚಿಕ್ಕಬಳ್ಳಾಪುರ-03
- ಹಾವೇರಿ-03
- ರಾಯಚೂರು-02
- ಶಿವಮೊಗ್ಗ-02
- ರಾಮನಗರ-02
- ಚಿಕ್ಕಮಗಳೂರು -01
ಯಾವಜಿಲ್ಲೆಯಲ್ಲಿ ಎಷ್ಟು ಜನ ಡಿಸ್ಚಾರ್ಜ್?
- ಬೀದರ್-58
- ರಾಯಚೂರು-34
- ದಕ್ಷಿಣ ಕನ್ನಡ-26
- ಬೆಂಗಳೂರು ನಗರ-17
- ಯಾದಗಿರಿ -15
- ಬಳ್ಳಾರಿ-12
- ಧಾರವಾಡ-12
- ಕಲಬುರಗಿ-09
- ವಿಜಯಪುರ-07
- ಹಾಸನ-07
- ಉಡುಪಿ-06
- ಉತ್ತರ ಕನ್ನಡ-06
- ಬಾಗಲಕೋಟೆ-06
- ಚಿತ್ರದುರ್ಗ-03
- ಗದಗ-03
- ಬೆಳಗಾವಿ-03
- ಕೊಪ್ಪಳ -01