COVIOD 19 : ರಾಜ್ಯದಲ್ಲೂ ಕರೋನಾ ಲಸಿಕಾ ಅಭಿಯಾನಕ್ಕೆ ತಯಾರಿ : ಎಲ್ಲೆಲ್ಲಿ ಸಿಗಲಿದೆ ವಾಕ್ಸಿನೇಷನ್

ಇಂದು ನಾಡಿನೆಲ್ಲೆಡೆಯೂ  ಕೊರೋನಾ ಲಸಿಕಾ (Corona Vaccination) ಅಭಿಯಾನ ನಡೆಯಲಿದೆ. ಕರ್ನಾಟಕದ ಒಟ್ಟು 233 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಂಚಿಕೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದಲ್ಲಿ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ( B S Yadiyurappa) ಚಾಲನೆ ನೀಡಲಿದ್ದಾರೆ.  

Written by - Ranjitha R K | Last Updated : Jan 16, 2021, 10:21 AM IST
  • ರಾಜ್ಯದಲ್ಲೂ ಕರೋನಾ ಲಸಿಕಾ ಅಭಿಯಾನಕ್ಕೆ ತಯಾರಿ
  • ಕರ್ನಾಟಕದ ಒಟ್ಟು 233 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಂಚಿಕೆ ಕಾರ್ಯಕ್ರಮ
  • ವಿಕೋರಿಯಾ ವ್ಯಾಕ್ಸಿನೇಷನ್ ಸೆಂಟರ್ ನಲ್ಲಿ ಸಿಎಂ ಚಾಲನೆ
COVIOD 19 : ರಾಜ್ಯದಲ್ಲೂ ಕರೋನಾ ಲಸಿಕಾ ಅಭಿಯಾನಕ್ಕೆ ತಯಾರಿ : ಎಲ್ಲೆಲ್ಲಿ ಸಿಗಲಿದೆ ವಾಕ್ಸಿನೇಷನ್ title=
ರಾಜ್ಯದಲ್ಲೂ ಕರೋನಾ ಲಸಿಕಾ ಅಭಿಯಾನಕ್ಕೆ ತಯಾರಿ(filephoto)

ಬೆಂಗಳೂರು : ದೇಶಾದ್ಯಂತ ಇಂದು  ಕೊರೋನಾ ವ್ಯಾಕ್ಸಿನೇಷನ್‌ (Corona Vaccination) ಆರಂಭವಾಗಲಿದೆ. ಕೋವಿಡ್ ವಿರುದ್ದ ಹೋರಾಡಿದ್ದ  ಫ್ರೆಂಟ್ ಲೈನ್ ವರ್ಕಸ್೯ ಗೆ ಮೊದಲು  ವ್ಯಾಕ್ಸಿನೇಷನ್ ನೀಡಲಾಗುತ್ತದೆ. 10:30 ಕ್ಕೆ ದೇಶಾದ್ಯಂತ ಲಸಿಕೆ ನೀಡಿಕೆ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ಭಾರತ ಸಾಕ್ಷಿಯಾಗಲಿದೆ. ರಾಜ್ಯದಲ್ಲೂ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಎಲ್ಲಾ ಸಿದ್ದತೆ ನಡೆಸಿದೆ. 

ಇಂದು ನಾಡಿನೆಲ್ಲೆಡೆಯೂ  ಕೊರೋನಾ ಲಸಿಕಾ (Corona Vaccination) ಅಭಿಯಾನ ನಡೆಯಲಿದೆ. ಕರ್ನಾಟಕದ ಒಟ್ಟು 233 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಂಚಿಕೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದಲ್ಲಿ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ( B S Yadiyurappa) ಚಾಲನೆ ನೀಡಲಿದ್ದಾರೆ. ವಿಕೋರಿಯಾ ವ್ಯಾಕ್ಸಿನೇಷನ್ ಸೆಂಟರ್ ನಲ್ಲಿ ಸಿಎಂ ಚಾಲನೆ ನೀಡಲಿದ್ದಾರೆ. ರಾಜ್ಯದ  18 ಜಿಲ್ಲಾಸ್ಪತ್ರೆ, 13 ಸರ್ಕರಿ ಆಸ್ಪತ್ರೆ, 7 ಖಾಸಗಿ ಮೆಡಿಕಲ್ ಖಾಸಗಿ ಮೆಡಿಕಲ್ ಕಾಲೇಜು, 145 ತಾಲೂಕು ಆಸ್ಪತ್ರೆ, 25 ಪ್ರಾಥಮಿಕ ಮತ್ತು 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 

ಇದನ್ನೂ ಓದಿ : ಇಂದಿನಿಂದ ದೇಶಾದ್ಯಂತ ಮೊದಲ ಹಂತದ Covid Vaccine ನೀಡುವ ಅಭಿಯಾನ ಆರಂಭ

ಬೆಂಗಳೂರಿನಲ್ಲಿ ಹೇಗಿರುತ್ತೆ ವ್ಯಾಕ್ಸಿನೇಷನ್?:
ರಾಜಾಧಾನಿಯ ಬಿಬಿಎಂಪಿ (BBMP) ಹಾಗೂ ಬೆಂಗಳೂರು ನಗರ ವ್ಯಾಪ್ತಿ ಸೇರಿದಂತೆ ಒಟ್ಟು ೧೧ ಕೇಂದ್ರಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ನೀಡಲಾಗುತ್ತದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆಯಲಿದೆ. ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜಿನಲ್ಲೂ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಬಿಬಿಎಂಪಿ ಹಾಗೂ ಬೆಂಗಳೂರು ನಗರ ವ್ಯಾಪ್ತಿಗೆ ವ್ಯಾಕ್ಸಿನ್ ಹಾಗೂ ಸಿರಿಂಜ್ ನೀಡಲಾಗಿದೆ.
 ಪ್ರತಿ ಕೇಂದ್ರದಲ್ಲಿಯೂ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಸೆಕ್ಟರ್ ಅಧಿಕಾರಿಗಳಿಗೆ ಲಸಿಕಾ ಕೇಂದ್ರದ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಪ್ರತಿ ಲಸಿಕಾ ಕೇಂದ್ರದಲ್ಲಿ ೧೦೦ ಮಂದಿಗೆ ಲಸಿಕೆ (Vaccine) ನೀಡಲಾಗುತ್ತದೆ. ಪ್ರತಿ ಲಸಿಕಾ ಕೇಂದ್ರದಲ್ಲಿಯು  ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪ್ರತಿ ಲಸಿಕಾ ಕೇಂದ್ರದಲ್ಲಿಕಾಯುವ ಕೊಠಡಿ( Waiting Room), ಲಸಿಕೆ ನೀಡುವ ಕೊಠಡಿ, ನಿಗಾಕೊಠಡಿಯನ್ನು ಮಾಡಲಾಗಿದೆ.  ಲಸಿಕಾ ಕೇಂದ್ರದ ಒಳಗೆ ಕುಡಿಯುವ ನೀರಿನ ವ್ಯವಸ್ಥೆ, ನಿರ್ದೇಶನ ನಾಮಫಲಕ , ಕುರ್ಚಿ , ಕಂಪ್ಯೂಟರ್ ಮತ್ತು ಇಂಟರ್ ನೆಟ್ ಸೌಲಭ್ಯಗಳ ವ್ಯವಸ್ಥೆಯೂ ಇದೆ. ಮೊದಲ ಹಂತದಲ್ಲಿ ಲಸಿಕೆ ನೀಡಲು ೧.೭೫ ಲಕ್ಷ ಆರೋಗ್ಯ ಕಾರ್ಯಕರ್ತರು ಹಾಗೂ ಫ್ರೆಂಟ್ ಲೈನ್ ವರ್ಕರ್ಸ್ ಕೊವೀಡ್ ಪೋರ್ಟಲ್ ನಲ್ಲಿ ನೇಮಕ ಮಾಡಲಾಗಿದೆ.  

ಇದನ್ನೂ ಓದಿ : Corona Vaccine: ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರರಿಗೆ ಲಸಿಕೆ ಬೇಡ: ಸರ್ಕಾರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ವ್ಯಾಕ್ಸಿನೇಷನ್‌ : 
- ವಿಕ್ಟೋರಿಯಾ ಆಸ್ಪತ್ರೆ 
- ಸಿವಿ ರಾಮನ್ ನಗರ ಜನರಲ್ ಆಸ್ಪತ್ರೆ
- ಜಯನಗರ ಜನರಲ್ ಆಸ್ಪತ್ರೆ 
- ಕೆಸಿ ಜನರಲ್ ಆಸ್ಪತ್ರೆ 
- ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್ 
- ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿಲಸಿಕಾ ಅಭಿಯಾನ..? :
- ಕೆ.ಆರ್ ಪುರ ತಾಲೂಕು ಆಸ್ಪತ್ರೆ
- ಆನೇಕಲ್ ತಾಲೂಕು ಆಸ್ಪತ್ರೆ 
- ಯಲಹಂಕ ತಾಲೂಕು ಆಸ್ಪತ್ರೆ 
- ಕಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ
- ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆ ನೀಡಲಾಗುತ್ತದೆ.

ಇದನ್ನೂ ಓದಿ : Corona Vaccine Update: ಈ ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಉಚಿತ ವಿತರಣೆ

ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ(KC General Hospital) ಲಸಿಕೆ ಹಂಚಲು ಸಿದ್ಧತೆ ನಡೆದಿದೆ. ಆಸ್ಪತ್ರೆಯ ಆವರಣದಲ್ಲಿ ಎಲ್ಲಾ  ತಯಾರಿಗಳು ಕೂಡ ಪೂರ್ಣಗೊಂಡಿದೆ. ವೀಲ್ ಚೇರ್ ಹಾಗೂ ಟ್ರ್ಯಾಲಿ ರೆಡಿ ಮಾಡಿ ಇಟ್ಟುಕೊಳ್ಳಲಾಗಿದೆ. ವ್ಯಾಕ್ಸಿನೇಷನ್ ಬಳಿಕ ಆರೋಗ್ಯದಲ್ಲಿ ಏರುಪೇರಾದ್ರೆ ಬೇಗ ಆಸ್ಪತ್ರೆಗೆ ರವಾನೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News