ಬೆಂಗಳೂರು: ಕಾವಲ್ ಭೈರಸಂದ್ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan), ಗೋಲಿಬಾರ್ ನಿಂದ ಮೃತಪಟ್ಟ ಯುವಕರ ತಾಯಿ, ತಂಗಿಗೆ ಯಾರು ದಿಕ್ಕು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಆಗಸ್ಟ್ 15ರವರೆಗೆ ಸೆಕ್ಷನ್ 144 ಜಾರಿ
ಪ್ರವಾದಿ ಮಹಮದ್ ಫೈಂಗಬರ್ ಅವರನ್ನು ನಿಂದಿಸಲಾಗಿದೆ. ಪ್ರವಾದಿ ಮಹಮದ್ ಫೈಂಗಬರ್ ಅವರನ್ನು ನಿಂದಿಸಿದ್ದು ವೈಯಕ್ತಿಕವಾಗಿ ನನಗೂ ನೋವಾಗಿದೆ. ಆದರೆ ನಾವು ನಮ್ಮ ಈ ರೀತಿಯ ನೋವುಗಳನ್ನು ಹೋರಾಟದ ಮೂಲಕ ತೋರಿಸಬೇಕು. ಕಠಿಣ ಶಿಕ್ಷೆಗೆ ಆಗ್ರಹಿಸಬೇಕು. ಅದು ಬಿಟ್ಟು ಅಶಾಂತಿ ಮೂಲಕ ಅಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಡಿ.ಜೆ. ಹಳ್ಳಿ ಗಲಭೆ ಖಂಡನೀಯ, ಸರ್ಕಾರ ಕಾನೂನಿನ ಕ್ರಮ ಕೈಗೊಳ್ಳಲಿ: ಡಿ.ಕೆ. ಶಿವಕುಮಾರ್
ಪ್ರವಾದಿ ಮಹಮದ್ ಫೈಂಗಬರ್ ಅವರನ್ನು ನಿಂದಿಸಿದವರ ವಿರುದ್ಧ ಕಾನೂನು ಹೋರಾಟ ಮಾಡಬೇಕು. ಈ ಕಾನೂನು ಹೋರಾಟದಲ್ಲಿ ನಾನು ನಿಮ್ಮಜೊತೆ ಇರುತ್ತೇನೆ. ನಿನ್ನೆ ಗೋಲಿಬಾರ್ ನಿಂದ ಮೃತಪಟ್ಟ ಯುವಕರ ಮನೆಗಳಿಗೂ ಭೇಟಿ ನೀಡಿದ್ದೆ. ನಿಜಕ್ಕು ಅವರ ಕುಟುಂಬಗಳ ಪರಿಸ್ಥಿತಿ ಕಣ್ಣೀರು ತರುವಂಥದ್ದು. ಗೋಲಿಬಾರ್ ನಿಂದ ಮೃತಪಟ್ಟ ಯುವಕರ ತಾಯಿ, ತಂಗಿಗೆ ಯಾರು ದಿಕ್ಕು ಎಂಬ ಪ್ರಶ್ನೆ ಉದ್ಭವಿಸಿದೆ ಎಂದಿದ್ದಾರೆ.
ಪೊಲೀಸರು ಮೊದಲೇ ದೂರು ದಾಖಲಿಸಿಕೊಂಡಿದ್ದರೆ ಡಿ.ಜೆ. ಹಳ್ಳಿ ಘರ್ಷಣೆ ಆಗುತ್ತಿರಲಿಲ್ಲ: ದಿನೇಶ್ ಗುಂಡ
ಯಾರೋ ಗಲಭೆ ಮಾಡಿದರು. ಮತ್ಯಾರೋ ಬಲಿಯಾಗಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಧಾರ್ಮಿಕ ಮುಖಂಡರ ಜೊತೆಯೂ ಮಾತನಾಡಿದ್ದೇನೆ. ಖಂಡಿತವಾಗಿಯೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ. ನ್ಯಾಯ ಪಡೆಯುವವರೆಗೆ ಹೋರಾಡುವ ನಮ್ಮನಿರ್ಧಾರ ಅಚಲವಾಗಿದೆ. ಶಾಂತಿ, ಸೌಹಾರ್ಧತೆಗೆ ಎಲ್ಲರೂ ಸಹಕರಿಸಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.