ಮೋದಿಯವರು ಕರ್ನಾಟಕಕ್ಕೆ ಕೊಟ್ಟಿರುವುದು ಚೊಂಬು: ಡಿಸಿಎಂ ಡಿ.ಕೆ ಶಿವಕುಮಾರ್

DK Shivakumar statement: ಬರ ಪರಿಹಾರದ ಹಣ ಯಾಕೆ ನೀಡಿಲ್ಲ, ಮಹದಾಯಿ, ಮೇಕೆದಾಟು ಯೋಜನೆಗೆ ಅನುಮತಿ ಹಾಗೂ ಭದ್ರಾ ಮೇಲ್ದಂಡೆಗೆ ಮೀಸಲಿಟ್ಟಿದ್ದ ಹಣದ ಬಿಡುಗಡೆ ಯಾವಾಗ? ಎಂಬ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲೆಸೆದರು.

Written by - Prashobh Devanahalli | Last Updated : Apr 20, 2024, 12:52 PM IST
  • ಮೋದಿಯವರು ಕರ್ನಾಟಕಕ್ಕೆ ಚೊಂಬನ್ನ ಕೊಟ್ಟಿದ್ದಾರೆ.
  • ಪ್ರಧಾನಮಂತ್ರಿಗಳು ನಮ್ಮ ತೆರಿಗೆ ನಮ್ಮ ಹಕ್ಕಿನ ಬಗ್ಗೆ ಮಾತನಾಡಲಿ.
  • ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ
ಮೋದಿಯವರು ಕರ್ನಾಟಕಕ್ಕೆ ಕೊಟ್ಟಿರುವುದು ಚೊಂಬು: ಡಿಸಿಎಂ ಡಿ.ಕೆ ಶಿವಕುಮಾರ್ title=

ಬೆಂಗಳೂರು: ಮೋದಿಯವರು ಕರ್ನಾಟಕಕ್ಕೆ ಚೊಂಬನ್ನ ಕೊಟ್ಟಿದ್ದಾರೆ. ರಾಜ್ಯದ ನೀರಾವರಿ, ಅಭಿವೃದ್ಧಿ, ಅನುದಾನ ತಾರತಮ್ಯ ವಿಚಾರವಾಗಿ ನಾವು ಕೇಳಿರುವ ಪ್ರಶ್ನೆಗಳಿಗೆ ಅವರು ಮೊದಲು ಉತ್ತರಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಧಾನಮಂತ್ರಿಗಳು ನಮ್ಮ ತೆರಿಗೆ ನಮ್ಮ ಹಕ್ಕಿನ ಬಗ್ಗೆ ಮಾತನಾಡಲಿ. ಬರ ಪರಿಹಾರದ ಹಣ ಯಾಕೆ ನೀಡಿಲ್ಲ, ಮಹದಾಯಿ, ಮೇಕೆದಾಟು ಯೋಜನೆಗೆ ಅನುಮತಿ ಹಾಗೂ ಭದ್ರಾ ಮೇಲ್ದಂಡೆಗೆ ಮೀಸಲಿಟ್ಟಿದ್ದ ಹಣದ ಬಿಡುಗಡೆ ಯಾವಾಗ? ಎಂಬ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಹಾಗೂ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ನಾವು ಯಾರ ಪರವಾಗಿ ಲಾಭಿ ಮಾಡುವ ಪ್ರಶ್ನೆಯೇ ಇಲ್ಲ. ಕಾನೂನು ಪ್ರಕಾರ ಏನು ನಡೆಯಬೇಕೊ ಅದು ನಡೆಯುತ್ತದೆ” ಎಂದರು.

ಕಾನೂನು ಪ್ರಕಾರ ಒದ್ದು ಒಳಗೆ ಹಾಕುತ್ತಾರೆ. ಗೃಹ ಸಚಿವರು ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದಾರೆ. ಯಾರ ಮೇಲೂ ಯಾವುದೇ ಕಾರಣಕ್ಕೂ ಕರುಣೆ ಎಂಬುದಿಲ್ಲ. ಅಲ್ಪಸಂಖ್ಯಾತ ನಾಯಕರೂ ಇದರ ಬಗ್ಗೆ ಮಾತನಾಡಿದ್ದಾರೆ” ಎಂದು ತಿಳಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಯ ಬಳಿಕ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಎಚ್‌ಡಿ‌ಡಿ ಭವಿಷ್ಯ 

ಕುಮಾರಸ್ವಾಮಿ ಅವರು ನೀಚ ರಾಜಕಾರಣ, ನೀಚ ಎನ್ನುವ ಪದ ಬಳಕೆ ಮಾಡಿದ್ದಾರೆ ಎಂದಾಗ “ಒಳ್ಳೊಳ್ಳೆಯ ಪದಗಳನ್ನು ಬಳಸಿ ಮಾತನಾಡುತ್ತಿರುವ ಅವರಿಗೆ ಒಳ್ಳೆಯದಾಗಲಿ ಅವರ ಪದಕೋಶಗಳಲ್ಲಿ ಒಳ್ಳೊಳ್ಳೆ ಪದಗಳನ್ನು ಹುಡುಕುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಡಿ.ಕೆ.ಶಿವಕುಮಾರ್ ಅವರು ದಿನ 50 ಕೋಟಿ ದುಡ್ಡಿಲ್ಲದೇ ಮಲಗುತ್ತಿಲ್ಲ ಎಂದು ಕೇಳಿದಾಗ “ನಾನು ದಿನವೂ ನಿದ್ದೆ ಮಾಡುತ್ತಿಲ್ಲ. ಅವರು ನಿದ್ದೆ ಮಾಡುತ್ತಿಲ್ಲ”. ಅವರು ಏಕೆ ನಿದ್ದೆ ಮಾಡುತ್ತಿಲ್ಲ ಎಂದು ಮರು ಪ್ರಶ್ನಿಸಿದಾಗ “ನನಗೆ ಸಿಗಲಿಲ್ಲವಲ್ಲ ಎಂದು ಕೈಯನ್ನು ಹೊಸಕಿಕೊಳ್ಳುತ್ತಿದ್ದಾರೆ. ಬರೀ ಅವರೇ ಹೊಡಿತಾ ಇದ್ದಾರೆ. ನನಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂದು ನಿದ್ದೆ ಮಾಡುತ್ತಿಲ್ಲ” ಎಂದು ಕಾಲೆಳೆದರು.

ಆಪರೇಷನ್ ಕಮಲ ಆದಾಗ ಶಿವಕುಮಾರ್ ಅವರು ಮುಂಬೈಗೆ ಬಂದಿದ್ದು ಕೇವಲ ನಾಟಕೀಯವಾದ ವರ್ತನೆ. ಒಬ್ಬ ಶಾಸಕರನ್ನು ಕರೆತರಲು ಆಗಲಿಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಒಟ್ನಲ್ಲಿ ಬಂಡೆ ತರ ನಿಂತೆ ಎಂದು ಒಪ್ಪಿಕೊಂಡಿದ್ದಾರಲ್ಲ. ನಾನು ನಾಟಕನಾದ್ರೂ ಮಾಡಿದೆನಲ್ಲ. ನಾನು ಏನು ಮಾಡಿದೆ ಎಂದು ಜಿ.ಟಿ.ದೇವೇಗೌಡ, ಶಿವಲಿಂಗೇಗೌಡ, ಬಾಲಕೃಷ್ಣ ಅವರನ್ನು ಕೇಳಿದರೆ ಹೇಳುತ್ತಾರೆ” ಎಂದರು.

ಇದನ್ನೂ ಓದಿ: ರಾಜ್ಯಕ್ಕೆ ಪ್ರಧಾನಿ ಮೋದಿಯವರ ಕೊಡುಗೆ ಏನಿದೆ?: ಗೃಹ ಸಚಿವ ಪರಮೇಶ್ವರ

ಸಿಎಂ ಕುರ್ಚಿ ಗಲಾಟೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಡಿಸೆಂಬರ್ ಡೆಡ್ಲೈನ್ ಎನ್ನುವ ಬಗ್ಗೆ ಕೇಳಿದಾಗ “ಚುನಾವಣೆ ಆದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಏನಾಗುತ್ತದೆ ಎಂದು ಅವರೇ ಉತ್ತರ ಕೊಡುತ್ತಾರೆ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಅವರುಗಳು ಏನೇನು ಮಾಡಿದರು, ಏನೇನು ಮಾತನಾಡಿದರು,  ಜೊತೆಯಲ್ಲಿ ಇರುವವರು ಏನೇನು ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿದೆ” ಎಂದರು.

ದೇವೇಗೌಡರು ಕನಕಪುದಲ್ಲಿ ಪ್ರಚಾರ ಮಾಡಿರುವ ಕಾರಣಕ್ಕೆ ಹೆಚ್ಚಿನ ಮತಗಳು ಬರುತ್ತವೆ ಎಂದಾಗ “ತೆಗೆದುಕೊಳ್ಳಲಿ ಸಂತೋಷ. ನಾವು ಗೆಲ್ಲಬೇಡ ಎಂದು ಹೇಳಿದ್ದೇವೆಯೇ? 28 ಸ್ಥಾನಗಳನ್ನೂ ಮೋದಿಯವರಿಗೆ ದಾರೆ ಎರೆಯಲಿ” ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News