ಕರ್ನಾಟಕದಲ್ಲಿ ಐದು ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ.. ಜನರಲ್ಲಿ ಹೆಚ್ಚಿದ ಆತಂಕ!

Dengue cases crossed five thousand: ಕ್ಷಣ ಕ್ಷಣಕ್ಕೂ ರಾಜ್ಯದ ಹವಮಾನ ಬದಲಾವಣೆ ಆಗುತ್ತಿದೆ. ಹೀಗಾಗಿ ಜನರು ಪುಲ್ ಹೈರಾಣಾಗಿದ್ದಾರೆ. ಇನ್ನು ಮಳೆಗಾಲ ಶುರುವಾಗುತ್ತಿದ್ದಂತೆ ಡೆಂಗ್ಯೂ ಹಾವಳಿ ಕೂಡ ಶುರುವಾಗಿದ್ದು, ರಾಜ್ಯದಲ್ಲಿ ಡೆಂಗ್ಯೂ ಕೇಸ್​ 5 ಸಾವಿರ ಗಡಿ ದಾಟಿದೆ. ಈ ಕುರಿತಾಗಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 5187 ಡೆಂಗ್ಯೂ ಕೇಸ್ ಪತ್ತೆ ಆಗಿವೆ.  

Written by - Savita M B | Last Updated : Jun 23, 2024, 08:58 PM IST
  • ಇದೀಗ ಡೆಂಗ್ಯೂ ಯಿಂದ ಭಯಗೊಂಡಿದ್ದಾರೆ
  • ಡೆಂಗ್ಯೂ ಹಾವಳಿಗೆ ಜನರು ಹೈರಾಣಾಗಿದ್ದು, ರಾಜಧಾನಿಯಲ್ಲಿ ಜ್ವರ, ನೆಗಡಿ ಹೆಚ್ಚಾಗುತ್ತಿದೆ.
ಕರ್ನಾಟಕದಲ್ಲಿ ಐದು ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ.. ಜನರಲ್ಲಿ ಹೆಚ್ಚಿದ ಆತಂಕ! title=

Dengue cases: ಮಳೆಯಿಂದ  ಜನರು ತತ್ತರಿಸಿದ್ದಾರೆ.. ಇದೀಗ ಡೆಂಗ್ಯೂ ಯಿಂದ ಭಯಗೊಂಡಿದ್ದಾರೆ.. ಡೆಂಗ್ಯೂ ಹಾವಳಿಗೆ ಜನರು ಹೈರಾಣಾಗಿದ್ದು, ರಾಜಧಾನಿಯಲ್ಲಿ ಜ್ವರ, ನೆಗಡಿ ಹೆಚ್ಚಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ 1,230 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಜನವರಿಯಿಂದ 3975 ಕೇಸ್ ಪತ್ತೆ ಆಗಿದ್ದು, ಜೂನ್ ತಿಂಗಳಿನಿಂದ ಕೇಸ್​ಗಳ ಸಂಖ್ಯೆ ಏರಿಕೆ ಕಂಡಿದೆ.ರಾಜ್ಯದಲ್ಲಿ 37144 ಜನರ ರಕ್ತ ಮಾದರಿ ಪಡೆಯಲಾಗಿದೆ. ಇದರಲ್ಲಿ 3957 ಜನರಿಗೆ ಪಾಸಿಟಿವ್ ಪತ್ತೆ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4063 ಜನರ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದ್ದು, ಈ ಪೈಕಿ 1230 ಜನರಲ್ಲಿ ಡೆಂಗ್ಯೂ ಪಾಸಿಟಿವ್​ ಕಾಣಿಸಿಕೊಂಡಿವೆ. ಇಲ್ಲಿಯವರೆಗೆ ಒಟ್ಟು 5187 ಡೆಂಘಿ ಕೇಸ್ ಪತ್ತೆ ಆಗಿವೆ.

ಡೆಂಗ್ಯೂ ಕೇಸ್​​ಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಹಾವೇರಿ ಇದ್ದು, 389 ಪ್ರಕರಣ ಪತ್ತೆಯಾಗಿದೆ. 12 ಜನ್ರಿಗೆ ಚಿಕಿತ್ಸೆ ಮುಂದುವರೆದಿದೆ. ಮೈಸೂರಿನಲ್ಲಿ 358, ಚಿಕ್ಕಮಗಳೂರಲ್ಲಿ 346, ಕಲಬುರಗಿಯಲ್ಲಿ 153 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಅತೀ ಕಡಿಮೆ ಅಂದ್ರೆ, ಯಾದಗಿರಿಯಲ್ಲಿ ಕೇವಲ 4 ಪ್ರಕರಣಗಳು ಮಾತ್ರ ಕಂಡು ಬಂದಿವೆ.

ಇದನ್ನೂ ಓದಿ-ಉದ್ಯೋಗ ಕ್ರಾಂತಿಗೆ ಹೊಸ ಮುನ್ನುಡಿ: ಐಟಿಐ, ಡಿಪ್ಲೊಮೊ ಕೋರ್ಸ್ ಪೂರ್ಣಗೊಳಿಸಿದವರಿಗೆ ವಿದೇಶದಲ್ಲಿ ಉದ್ಯೋಗ
 
ಇನ್ನು, ಡೆಂಗ್ಯೂ ಕಂಟ್ರೋಲ್​ಗೆ ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ನೀಡದಂತೆ ಸ್ವಚ್ಛತೆ ಕಾಪಾಡಿಕೊಳ್ಳಿ. ಸಂಜೆ, ರಾತ್ರಿ ವೇಳೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು ಅಂತ ಜನರಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ-ಸಾಮಾನ್ಯ ಕೈದಿಯಂತೆ ಜೈಲಲ್ಲಿ 2 ದಿನ ಕಳೆದ ಪವಿತ್ರಾ

ಹಾಗೆ ಇಲಾಖೆಯಿಂದ ಸೊಳ್ಳೆಗಳ ಕಂಟ್ರೋಲ್​ಗೆ ಫಾಗಿಂಗ್, ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸೋ ಕೆಲಸ ನಡೀತಿದೆ. ಜೊತೆಗೆ ನೀರು ಸಂಗ್ರಹಣ ತೊಟ್ಟಿಗಳಲ್ಲಿ ಗಪ್ಪಿ ಅಥವಾ ಲಾರ್ವಾಹಾರಿ ಮೀನುಗಳನ್ನ ಬಿಟ್ಟು ಸೊಳ್ಳೆಗಳ ಉತ್ಪತ್ತಿ ತಡೆಗೆ ಮುಂದಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
 
ಒಟ್ಟಾರೆ, ಸೊಳ್ಳೆಗಳ ಮೂಲಕ ಡೆಂಗ್ಯೂ ಹರಡುತ್ತಿದೆ. ನೀರು ನಿಂತರೆ ಸೊಳ್ಳೆಗಳು ಹೆಚ್ಚಾಗುತ್ತವೆ. ಹಾಗಾಗಿ ಮನೆಗಳ ಮುಂದೆ ನೀರು ನಿಲ್ಲದಂತೆ ಜನರು ನೋಡಿಕೊಳ್ಳಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಜನರು ನಿಗಾ ವಹಿಸಬೇಕು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News