close

News WrapGet Handpicked Stories from our editors directly to your mailbox

ಡಿಕೆಶಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ- ಇಡಿ ಆರೋಪ

ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಸಾಕ್ಷಿಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ಆರೋಪಿಸಿದೆ.

Updated: Sep 21, 2019 , 05:04 PM IST
ಡಿಕೆಶಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ- ಇಡಿ ಆರೋಪ
file photo

ನವದೆಹಲಿ: ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸಾಕ್ಷಿಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ಆರೋಪಿಸಿದೆ.

ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿರೋಧಿಸುತ್ತಿರುವ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಡಿಕೆಶಿ ಸಾಕ್ಷಿಯ ಮೇಲೆ ಪ್ರಭಾವ ಬೀರುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದರು, ಇದುವರೆಗೆ ಈ ಹಿಂದಿನ ಐಟಿ ತನಿಖೆಯಲ್ಲಿ ಅಂಶಗಳನ್ನು ಪರಿಶೀಲಿಸಿದಾಗ ನೋಡಿದಾಗ ಕೆಲವು ಸಾಕ್ಷಿಗಳು ಹಿಂತೆಗೆದುಕೊಂಡಿರುವುದು ಕಂಡು ಬಂದಿದೆ ಎಂದು ಅವರು ಆರೋಪಿಸಿದ್ದಾರೆ.ಡಿ.ಕೆ.ಶಿವಕುಮಾರ್ ಪ್ರಭಾವಿ ವ್ಯಕ್ತಿಯಾಗಿರುವ ತನಿಖೆಗೆ ಅಡ್ಡಿ ಮಾಡುವ ಸಾಧ್ಯತೆ ಇದೆ ಎಂದು ಅವರು ದೂರಿದರು.

ಐಡಿ ಮತ್ತು ಪಿಎಂಎಲ್‌ಎ ತನಿಖೆಯ ಸಮಯದಲ್ಲಿ ಅನೇಕ ದಾಖಲೆಗಳು ಮತ್ತು ವಸ್ತುಗಳನ್ನು ಮರುಪಡೆಯಲಾಗಿದೆ ಎಂದು ಇಡಿ ಪರ ಹಾಜರಾದ ಎಎಸ್‌ಜಿ ಕೆಎಂ ನಟರಾಜ್ ಅವರು ತಿಳಿಸಿದ್ದಾರೆ. ಈಗ ಸಿಕ್ಕಿರುವ ದಾಖಲೆಗಳು ಅವರ ಅಪರಾಧಕ್ಕೆ ಬಲವಾದ ಆಧಾರವನ್ನು ನೀಡುತ್ತವೆ. ಈ  ಹಿನ್ನಲೆಯಲ್ಲಿ ಈಗ ಈ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೋಯ್ಯಬೇಕಾಗಿದೆ ಎಂದು ತಿಳಿಸಿದರು.

ಈಗ ತನಿಖೆ ನಡೆಯುತ್ತಿದ್ದು, ಅದು ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಡಿಕೆ ಶಿವಕುಮಾರ್ ಅವರು ವಿಚಾರಣೆ ವೇಳೆಯಲ್ಲಿ ವಿಧಿ 20 ಮತ್ತು 21 ರ ಮೌನ ಹಕ್ಕಿನ ಅವಕಾಶದ ಆಧಾರದ ಮೇಲೆ ತಪ್ಪಿಸಿಕೊಳ್ಳುವವರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಸಹಕಾರವಿಲ್ಲದೆ ಸಂಪೂರ್ಣ ತನಿಖೆ ಅಸಾದ್ಯ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇಡಿ ಪರವಾಗಿ ಕೆಎಂ ನಟರಾಜ್ ಅವರೊಂದಿಗೆ ವಕೀಲರಾದ ಅಮಿತ್ ಮಹಾಜನ್ ಮತ್ತು ನಿತೇಶ್ ರಾಣಾ ಹಾಜರಾಗಿ 'ಇದು ಗಂಭೀರ ಆರ್ಥಿಕ ಅಪರಾಧವಾಗಿದ್ದು, ಇದು ರಾಷ್ಟ್ರೀಯ ಆರ್ಥಿಕತೆ ಅಸಮತೋಲನಕ್ಕೆ ಕಾರಣವಾಗಬಹುದಲ್ಲದೆ ಮತ್ತು ರಾಷ್ಟ್ರೀಯ ಭದ್ರತೆಗೂ ಕೂಡ ಅಪಾಯವಾಗಿದೆ' ಎಂದು ಹೇಳಿದರು.

ಆದರೆ ಡಿಕೆಶಿ ಪರವಾಗಿ ಹಾಜರಾದ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಗ್ವಿ ಮತ್ತು ಹಿರಿಯ ವಕೀಲ ಮುಕುಲ್ ರೋಹಟಗಿ ಇಡಿ ಮಾಡಿದ ಆರೋಪವನ್ನು ನಿರಾಕರಿಸಿದ್ದಾರೆ

ಆದಾಯ ತೆರಿಗೆ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶಿವಕುಮಾರ್ ವಿರುದ್ಧ ಇಡಿ ಈ ಮನಿ ಲಾಂಡರಿಂಗ್ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಈಗ ಅವರನ್ನು ತಿಹಾರ್ ಜೈಲಿಗೆ ಹಾಕಲಾಗಿದ್ದು, ಈ ಪ್ರಕರಣದ ವಿಚಾರವಾಗಿ ಅಂತಿಮ ತೀರ್ಪನ್ನು ಇದೇ 25 ರಂದು ನೀಡಲಿದೆ ಎಂದು ಕೋರ್ಟ್ ತಿಳಿಸಿದೆ.