ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ: ಡಾ. ಜಿ. ಪರಮೇಶ್ವರ್

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿಎಂ.

Updated: Dec 6, 2018 , 01:10 PM IST
ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ: ಡಾ. ಜಿ. ಪರಮೇಶ್ವರ್

ತುಮಕೂರು: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಆರೋಗ್ಯವಾಗಿದ್ದಾರೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಇಂದು ಬೆಳಿಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಿನ್ನೆ ರಾತ್ರಿ ಶ್ರೀಗಳಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಆನ್ತಕವಿತ್ತು. ಆದರೀಗ ಶ್ರೀಗಳು ಆರಾಮಾಗಿದ್ದಾರೆ. ಎಂದಿನಂತೆ ಲವಲವಿಕೆಯಿಂದ ಇದ್ದಾರೆ. ನಾನು ಹೋಗಿ ಭೇಟಿ ಮಾಡಿದಾಗ ಎಂದಿನಂತೆ ಚೆನ್ನಾಗಿದ್ದೀರಾ? ಎಷ್ಟೊತ್ತಿಗೆ ಬಂದಿರಿ? ಎಂದು ಕೇಳಿದರು ಎನ್ನುತ್ತಾ ತಮ್ಮ ಭೇಟಿಯ ಕ್ಷಣಗಳನ್ನು ವಿವರಿಸಿದರು.

ಈಗಾಗಲೇ ಶ್ರೀಗಳಿಗೆ 11 ಸ್ಟೆಂಟ್‌ಗಳನ್ನು ಅಳವಡಿಸಲಾಗಿದ್ದು ಕೆಲ ಸ್ಟಂಟ್‌ಗಳನ್ನು ತೆಗೆದು ಹೊಸ ಸ್ಟೆಂಟ್‌ ಗಳನ್ನು ಅಳವಡಿಸುವ ಬಗ್ಗೆ  ಬಿಜಿಎಸ್‌ ಆಸ್ಪತ್ರೆಯ ವೈದ್ಯರ ತಂಡ ಸಿದ್ಧತೆ ನಡೆಸಿದೆ. ಈ ಬಗ್ಗೆ ನುರಿತ ವೈದ್ಯರ ಸಲಹೆ ಪಡೆಯಲು ಶ್ರೀಗಳ ಸ್ಟೆಂಟ್‌ ವರದಿ, ರಕ್ತದ ಮಾದರಿ, ಸ್ಕ್ಯಾನಿಂಗ್‌ ವರದಿ ಸಹಿತ ಮೂವರು ವೈದ್ಯರು ಚೆನ್ನೈಗೆ ತೆರಳಿದ್ದಾರೆ.